15 ದಿನ ದೊಳಗೆ ಹಗಲು ಮನೆ ಕಳ್ಳರನ್ನು ಹೆಡೆಮೂರು ಕಟ್ಟಿದ ಎಸ್ಪಿ.ಬಿ. ಎಲ್.ಶ್ರೀಹರಿಬಾಬು,!

0
279

ಹೊಸಪೇಟೆ : ವಿಜಯನಗರ( ಜಾಗೃತಿ ಬೆಳಕು ಬ್ರೇಕಿಂಗ್ ನ್ಯೂಸ್)

ನಗರದ ಎಂ.ಜೆ.ನಗರದಲ್ಲಿ ಹಗಲು ದರೋಡೆ  ಮನೆ ಕಳ್ಳತನ ಮಾಡಿ ಬಂಗಾರದ ಆಭರಣಗಳು ಹಾಗೂ ಹಣ ಇನ್ನಿತರ ಬೆಲೆಬಾಳುವ ಸಾಮಗ್ರಿಗಳನ್ನು ಸಿನಿಮಾ ರೀತಿಯಲ್ಲಿ ಕಳವು ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಶ್ರೀಮತಿ ತ್ರಿವೇಣಿ ಎನ್ನುವವರ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳ್ಳರನ್ನು ಭೇದಿಸಿದ ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ 2 20.36/2024  331(2)-305 2.2.2-2023 ದಾಖಲಾಗಿರುತ್ತದೆ. ಶ್ರೀಹರಿಬಾಬು, ಐಪಿಎಸ್, ಪೊಲೀಸ್ ಅಧೀಕ್ಷಕರು,  ಸಲೀಂ ಪಾಷಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಟಿ. ಮಂಜುನಾಥ, ಡಿ.ವೈ.ಎಸ್.ಪಿ, ಹೊಸಪೇಟೆ ಇವರ ಮಾರ್ಗದರ್ಶನದಲ್ಲಿ ಟಿ.ಬಿ.ಡ್ಯಾಂ ವೃತ್ತದ. ಸಿ.ಪಿ.ಐ.ಮಹಮ್ಮದ್ ಗೌಸ್ ಮತ್ತು ಇವರ ತಂಡ ತನಿಖೆ ಕೈಗೊಂಡು ಈ ಹಗಲು ಮನೆ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇಧಿಸಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳಾದ

ಗಿಡ್ಡ ಕಾರ್ತಿಕ್ ತಂದೆ ಲೋಕೇಶ್, ವ: 19 ವರ್ಷ, ವಾಸ: ಚಪ್ಪರದಹಳ್ಳಿ, ಹೊಸಪೇಟೆ, ವಿಜಯನಗರ ಜಿಲ್ಲೆ 2) ಸಂಜು ತಂದೆ .ಎಸ್.ಹುಲುಪ್ಪ, ವ: 21 ವರ್ಷ, ವಾಸ:
ತಳವಾರಕೇರಿ, ಹೊಸಪೇಟೆ, ವಿಜಯನಗರ ಜಿಲ್ಲೆ.
ಇವರನ್ನು ದಿ:25.ರಂದು ಸರಿ ಹೇಳಿದು ವಿಚಾರಿಸಿದಾಗ  ರೂ.6,30,000/- ಮೌಲ್ಯದ
80 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದು, ನಂತರ ಈ ದಿನ ನ್ಯಾಯಾಂಗ ಬಂಧನದಲ್ಲಿದ್ದ ಮೇಲ್ಕಂಡ ಆರೋಪಿತರಿಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಇನ್ನೂ 30 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮಣಪ್ಪುರಂ ಫೈನಾನ್ಸ್ ನಲ್ಲಿ ಒತ್ತೆ ಇಟ್ಟಿರುವ ಬಗ್ಗೆ ಪತ್ತೆ ಮಾಡಿ ಜತ್ತುಪಡಿಸಿಕೊಂಡಿದ್ದು, ಆರೋಪಿತರಿಂದ ರೂ.7,50,000/- ಮೌಲ್ಯದ 120 ಗ್ರಾಂ ಬಂಗಾರದ ಆಭರಣಗಳನ್ನ ವಶಪಡಿಸಿಕೊಂಡಿದಾರೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಲ್ ಶ್ರೀಹರಿ ಬಾಬು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಒಟ್ಟು ಕೇವಲ 15 ದಿನಗಳಲ್ಲಿ ಈ ಪ್ರಕರಣವನ್ನು ಭೇಧಿಸಿದ ಮಹಮ್ಮದ್ ಗೌಸ್. ಸಿಪಿಐ, ಟಿ.ಬಿ.ಡ್ಯಾಂ ವೃತ್ತ, ಕೋದಂಡಪಾಣಿ, ಪಿ.ಎಸ್.ಐ ಹಾಗೂ ಸಿಬ್ಬಂಧಿಯವರಾದ ಮಾಣಿಕ್ಯರೆಡ್ಡಿ, ರಾಮಮೂರ್ತಿ, ಆನಂದಗೌಡ, ಹನುಮಾನಾಯಕ್ , ದೊಡ್ಡಬಸಪ್ಪ, ಈಶ್ವರ್ ಇವರನ್ನು ವಿಜಯನಗರ ಜಿಲ್ಲೆಯ ಶ್ರೀಹರಿಬಾಬು, ಐಪಿಎಸ್, ಪೊಲೀಸ್ ಅಧೀಕ್ಷಕರು, ವಿಜಯನಗರ ಜಿಲ್ಲೆ ಇವರು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಇವರನ್ನು ಪ್ರಶಂಶಿಸಿದರು.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here