ಹೊಸಪೇಟೆ: ವಿದ್ಯುತ್ ವ್ಯತ್ಯಯ ನ.24ರಂದು!

0
284

ಹೊಸಪೇಟೆ :-ಜಾಗೃತಿ ಬೆಳಕು ( ಬಿಗ್ ಬ್ರೇಕಿಂಗ್)

ನ,24. ಕಮಲಾಪುರ 110/11ಕೆವಿ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ನ.24ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೊಸಪೇಟೆ ಜೆಸ್ಕಾಂನ ಸಹಾಯಕ ಎಂಜಿನಿಯರ್ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಕಮಲಾಪುರ ಪಟ್ಟಣ ಪಂಚಾಯಿತಿ, ಬುಕ್ಕಸಾಗರ ಗ್ರಾಮ ಪಂಚಾಯಿತಿ, ಸೀತರಾಮ ತಾಂಡ ಗ್ರಾಮ ಪಂಚಾಯಿತಿ, ಮಲಪನಗುಡಿ ಗ್ರಾಮ ಪಂಚಾಯಿತಿ, ಹಂಪಿ ಗ್ರಾಮ ಪಂಚಾಯಿತಿ, ಪಾಪಿನಾಯಕನಹಳ್ಳಿ ಗ್ರಾ.ಪಂ, ಗಾದಿಗನೂರು ಗ್ರಾ.ಪಂ ಮತ್ತು ಬೈಲವದ್ದಿಗೇರಿ ಗ್ರಾ.ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಹಾಗೂ ನೀರಾವರಿ ಪಂಪ್‍ಸೆಟ್ ರೈತರಿಗೆ  ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಎಲ್ಲಾ ರೈತ ಬಾಂಧವರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here