ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಮತ್ತೊಂದು ಭರ್ಜರಿ ಬೇಟೆ!!!

0
694

ವಿಜಯನಗರ ಜಿಲ್ಲೆ

ಹೊಸಪೇಟೆ ಪಟ್ಟಣದ ರಾಣಿಪೇಟೆಯ ಮಹಿಳೆ ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿತ ಬಂಧನ: ದರೋಡೆ ಮಾಡಿದ ಚಿನ್ನಾಭರಣ, ಹಣ ಇತರ ವಸ್ತುಗಳ ವಶ!!

ದಿನಾಂಕ: 22/10/2021 ರಂದು ಸಾಯಂಕಾಲ 05:00 ರಿಂದ 06:30 ರ ಅವಧಿಯಲ್ಲಿ ಹೊಸಪೇಟೆ: ಪಟ್ಟಣದ ರಾಣಿಪೇಟೆಯ 6ನೇ ಕ್ರಸ್‌ನಲ್ಲಿ ವಾಸವಿರುವ ಕು: ಶಿವಭೂಷಣ ತಂದೆ ಎ.ಪಿ ವೇದಾಚಲಂ (65 ವರ್ಷ) ರವರ ಮನೆಗೆ ಬಟ್ಟೆ ಖರೀದಿಸುವ ನೆಪದಲ್ಲಿ ಸುಮಾರು 5 ಜನ ಅಪರಿಚಿತರು ಬಂದು ಮದುವೆಗೆ ಬಟ್ಟೆಗಳು ಖರೀದಿಸುವ ನೆಪದಲ್ಲಿ ಬಟ್ಟೆಗಳಿಂದ ಅವರಿಬ್ಬರ ಕೈಕಾಲು ಕಟ್ಟಿ ಉಸಿರುಗಟ್ಟಿಸಿ, ಕೊಲೆ ಮಾಡಿ ಮನೆಯಲ್ಲಿದ್ದ ಸುಮಾರು 3 ಲಕ್ಷ ನಗದು ಹಣ ಹಾಗೂ 3,30,000=00 ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶಿವಭೂಷಣ ರವರು ನೀಡಿದ ದೂರಿನ ಆಧಾರದ ಮೇಲೆ ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಗುನ್ನೆ ನಂ 129,202) ಕಲಂ: 396 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಸದರಿ ಪ್ರಕರಣಕ್ಕೆ ಸಂಬಂದಿಸಿದಂತೆ ದಿನಾಂಕ:30/10/2021 ರಂದು ಒಟ್ಟು 5 ಜನರ ಆರೋಪಿಗಳನ್ನು ದಸ್ತಗಿರಿ, ಮಾಡಿ ಮಾನ್ಯ ನ್ಯಾಯಾಲಕ್ಕೆ ಹಾಜರು ಪಡಿಸಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿತ ನೌಷದ್ ಅಲಿ ( ತಂಪುದ್ದೀನ್, ವಾಸ ರಾಣಿಬೆನ್ನೂರು ಪಟ್ಟಣ, ಹಾವೇರಿ ಜಿಲ್ಲೆ ಈತನನ್ನು ದಿನಾಂಕ: 04/11/2021 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇರುತ್ತದೆ.

ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆಗಾಗಿ ಆರೋಪಿತರನ್ನು ಪೊಲೀಸ್ ವಶಕ್ಕೆ ಪಡೆದು ಅವರಿಂದ ಈ ಕೆಳಕಂಡ
ವಸ್ತುಗಳನ್ನು ಜಪ್ತು ಪಡಿಸಿಕೊಳ್ಳಲಾಗಿದೆ
.

ಆರೋಪಿತರಿಂದ ಕೃತ್ಯಕ್ಕೆ ಬಳಸುವಾಗ ತೊಟ್ಟ ಬಟ್ಟೆಗಳು ಮತ್ತು ಮೊಬೈಲ್‌ಗಳನ್ನು ಜಪ್ತು ಪಡಿಸಿಕೊಳ್ಳಲಾಗಿದೆ.

ಆರೋಪಿತರಿಂದ ಪಿರ್ಯಾದಿದಾರರ ಮನೆಯಿಂದ ಕಳವು ಮಾಡಲಾಗಿದ್ದ ಒಟ್ಟು 160 ಗ್ರಾಂ ಬಂಗಾರದ ಆಭರಣಗಳು ಅಂದಾಜು ಬೆಲೆ ರೂ: 4,80,000 ಮತ್ತು ನಗದು ಹಣ ರೂ: 40,000/ ಗಳನ್ನು ವಶಪಡಿಸಿಕೊಳ್ಳಲಾಗಿದೆ. ದಸ್ತಗಿರಿ ಮಾಡಿದ ಎಲ್ಲಾ ಆರೋಪಿತರನ್ನು ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ.

ಈ ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯ ನಿರ್ವಹಿಸಿದ ಅಧಿಕಾರಿ ಹಾಗು ಸಿಬ್ಬಂದಿಯವರ ಕಾರ್ಯವನ್ನು ಡಾ.ಅರುಣ, ಕೆ , ಐಪಿಎಸ್, ಪೊಲೀಸ್ ಅಧೀಕ್ಷಕರು, ವಿಜಯನಗರ ಜಿಲ್ಲೆ ಶ್ಲಾಘಿಸಿದರು!!

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here