ವಿಜಯನಗರ ಜಿಲ್ಲೆ (ಬಿಗ್ ಬ್ರೇಕಿಂಗ್)
ಹೊಸಪೇಟೆ
ದಿನಾಂಕ: 22/10/2021 ರಂದು ಸಾಯಂಕಾಲ 05:00 ರಿಂದ 06:30 ರ ಅವಧಿಯಲ್ಲಿ ಹೊಸಪೇಟೆ ಪಟ್ಟಣದ ರಾಣಿಪೇಟೆಯ 06ನೇ ಕ್ರಾಸ್‌ನಲ್ಲಿ ವಾಸವಿರುವ ಕು: ಶಿವಭೂಷಣ ತಂದೆ ಎ.ಪಿ ವೇದಾಚಲಂ (65 ವರ್ಷ) ರವರ ಮನೆಗೆ ಬಟ್ಟೆ ಖರೀದಿಸುವ ನೆಪದಲ್ಲಿ ಸುಮಾರು 5 ಜನ ಅಪರಿಚಿತರು ಮನೆಗೆ ಹೋಗಿ ಕುಮಾರಿ ಶಿವಭೂಷಣ ಹಾಗೂ ಆಕೆಯ ಅಕ್ಕ ಕುಮಾರಿ ಭುವನೇಶ್ವರಿ ವಯಸ್ಸು 68 ರವರೊಡನೆ ಮದುವೆಗೆ ಬಟ್ಟೆಗಳು ಖರೀದಿಸುವ ನೆಪದಲ್ಲಿ ಬಟ್ಟೆಗಳಿಂದ ಅವರಿಬ್ಬರ ಕೈಕಾಲು ಕಟ್ಟಿ ಉಸಿರುಗಟ್ಟಿಸಿ, ಮನೆಯಲ್ಲಿದ್ದ ಸುಮಾರು 3 ಲಕ್ಷ ನಗದು ಹಣ ಹಾಗೂ 3,30,000-00 ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿರುತ್ತಾರೆ. ಶಿವಭೂಷಣ ರವರು ತಮ್ಮ ಕೈಕಾಲುಗಳಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿಕೊಂಡು ಹೊರಬಂದು ಅಕ್ಕ-ಪಕ್ಕದವರನ್ನು ಕರೆದು ಅವರ ಸಹಾಯದಿಂದ ಭುವನೇಶ್ವರಿಯನ್ನು ಹೊಸಪೇಟೆ ಪಟ್ಟಣದ 100 ಹಾಸಿಗೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವಳ ಪ್ರಾಣ ಹೋಗಿರುತ್ತದೆ. ಈ ಬಗ್ಗೆ ಶಿವಭೂಷಣ ರವರು ನೀಡಿದ ದೂರಿನ ಆಧಾರದ ಮೇಲೆ ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಗುನ್ನೆ ನಂ 129/2021 ಕಲಂ: 396 ಐಪಿಸಿ, ರೀತ್ಯಾ ಯಾರೋ 5 ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
ಸದರಿ ಘಟನೆಯ ಪತ್ತೆಗಾಗಿ ಡಿ.ಎಸ್.ಪಿ.ಹೊಸಪೇಟೆ ಶ್ರೀ ವಿಶ್ವನಾಥ ಕುಲಕರ್ಣಿ ರವರ ನೇತೃತ್ವದಲ್ಲಿ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರಾದ ಶ್ರೀನಿವಾಸರಾವ್’ ಎಂ.. ಚಿತ್ತವಾಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ರಾದ ಜಯಪ್ರಕಾಶ, ಹಾಗು ಗ್ರಾಮೀಣ ಠಾಣೆಯ ಸಿಬ್ಬಂದಿಯವರಾದ 1]ಹೆಚಸಿ. ರಾಘವೇಂದ್ರ 2]ಪಿಸಿ.ಕೊಟ್ರೇಶ, ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿಯಾದ 3]ಪಿಸಿ.ತಿಮ್ಮಪ್ಪ, 4]ಪಿಸಿ.ಅಡಿವೆಪ್ಪ, 5]ಪಿಸಿಗಾಳಪ್ಪ 6]ಪಿಸಿ.ಲಿಂಗರಾಜ್ 7]ಹೆಚ್ಸಿ.ನಾಗರಾಜ, 8]ಪಿಸಿ.ಮಂಜುನಾಥ, 9]ಹೆಚ್ ಸಿ.ಶ್ರೀರಾಮರೆಡ್ಡಿ, 10 ಹೆಚ್.ಸಿ.217 ನಾಗರಾಜ 1)ಎಎಸ್‌ಐ, ಶ್ರೀನಿವಾಸ, ಹಾಗು ಎಂ.ಎಂ.ಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಶ್ರೀನಿವಾಸ, ಹೆಚ್, ರವರ ತಂಡವನ್ನು ನೇಮಿಸಿದ್ದು, ಸದರಿ ತಂಡದವರಿಗೆ ಶ್ರೀ.ಪ್ರವೀಣ ಹಾಗು ಸುರೇಶಬಾಬು ಸಿ.ಡಿ.ಆರ್.ಘಟಕ ಜಿಲ್ಲಾ ಪೊಲೀಸ್ ಕಛೇರಿ: ಬಳ್ಳಾರಿ ರವರು ತಾಂತ್ರಿಕ ಕೆಲಸದಲ್ಲಿ ಸಹಾಯ ಮಾಡಲು ನಿಯೋಜಿಸಲಾಗಿತ್ತು.
ನಿನ್ನೆ ದಿನಾಂಕ:29/10/2021 ರಂದು ಈ ಕೆಳಕಂಡ 5 ಜನ ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ.
1)ತೈಬುಜುಲ್ಲಾ ಮನ್ನಣ್ಣನವರು 25 ವರ್ಷ, ತರಕಾರಿ ವ್ಯಾಪಾರಿ ಮತ್ತು ಕಾರ್‌ಚಾಲಕ, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ (ಹರಿಹರ ಪಟ್ಟಣದಲ್ಲಿ ದಸ್ತಗಿರಿ ಮಾಡಲಾಗಿದೆ.)
2)ಎ.ಎಸ್.ನಾಗರಾಜ ವ, 26 ವರ್ಷ ಬೇಲ್ದಾರ್ ಕೆಸಲ, ವಾಸ:ದಾವಣಗೇರಿ ತಾಲ್ಲೂಕು, (ದಾವಣಗೇರಿ ಪಟ್ಟಣದಲ್ಲಿ ದಸ್ತಗಿರಿ ಮಾಡಲಾಗಿದೆ.)
3)ಕೆ.ಬಿರೇಶ @ಬೀರಪ್ಪ ವ. 24 ವರ್ಷ, ಜಿಲ್ಲಾರ ಕೆಲಸ, ವಾಸ: ದಾವಣಗೇರಿ ತಾಲ್ಲೂಕು. (ದಾವಣಗೇರಿ ಪಟ್ಟಣದಲ್ಲಿ ದಸ್ತಗಿರಿ ಮಾಡಲಾಗಿದೆ.)
4)ಗೀತಾ ವ. 38 ವರ್ಷ, ವಾಸ: ಹಾವೇರಿ ಜಿಲ್ಲೆ, ಹಾಲಿ ವಾಸ:ಹರಿಹರ, ದಾವಣಗೇರಿ ಜಿಲ್ಲೆ. (ಹರಿಹರ ಪಟ್ಟಣದಲ್ಲಿ ದಸ್ತಗಿರಿ ಮಾಡಲಾಗಿದೆ.)
5)ಪ್ರಮಿಳ ಜಿ.ಎಲ್. ವ. 33 ವರ್ಷ, ವಾಸ:ಭದ್ರವಾತಿ (ಭದ್ರಾವತಿ ಪಟ್ಟಣದಲ್ಲಿ ದಸ್ತಗಿರಿ ಮಾಡಲಾಗಿದೆ.)
ಈ ಪ್ರಕರಣದಲ್ಲಿ ಇನ್ನು ತನಿಖೆ ಮುಂದುವರೆದಿರುತ್ತದೆ. ಈ ಪ್ರಕರಣದಲ್ಲಿ ಆರೋಪಿತರನ್ನು ಒಂದು ವಾರದಲ್ಲಿಯೇ ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಅಧಿಕಾರಿ ಹಾಗು ಸಿಬ್ಬಂದಿಯವರಿಗೆ ರೂ. 1 ಲಕ್ಷ ನಗದು ಬಹುಮಾನ ಘೋಷಿಸಿ ಅವರ ಕಾರ್ಯವನ್ನು ಶ್ರೀ.ಪ್ರವೀಣಸೂದ್, ಐ.ಪಿ.ಎಸ್., ಡಿ.ಜಿ ಮತ್ತು ಐ.ಜಿ.ಪಿ. ಕರ್ನಾಟಕ ರಾಜ್ಯ ರವರು ಶ್ಲಾಘಿಸಿರುತ್ತಾರೆ.
ವರದಿ :-ಮೊಹಮ್ಮದ್ ಗೌಸ್