ಹೊಸಪೇಟೆ ನಗರಸಭೆಯ ಮೊದಲನೆ ಸಾಮಾನ್ಯ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡ ನಗರಸಭೆ ಸದಸ್ಯರು!!!

0
477

ವಿಜಯನಗರ ಜಿಲ್ಲೆ ಬ್ರೇಕಿಂಗ್

ಹೊಸಪೇಟೆ ನಗರದ ಒಂದು ವೃತ್ತಕ್ಕೆ ನಟ #ದಿವಂಗತ ಪುನೀತ್ ರಾಜಕುಮಾರ್ ಹೆಸರು ನಾಮಕರಣಕ್ಕೆ ಒಪ್ಪಿಗೆ ನೀಡಲಾಯಿತು, ಅದರ ಜೊತೆಗೆ ವಿ.ಎನ್.ಸಿ.ಕಾಲೇಜು ಮುಂಬಾಗದಲ್ಲಿರುವ ತಾಲೂಕು ಕ್ರೀಡಾಂಗಣಕ್ಕೆ #ದಿವಂಗತ ಪುನೀತ್ ರಾಜಕುಮಾರ್ ರವರ ಹೆಸರು ನಾಮಕರಣಮಾಡಲು ಸಹ ಒಪ್ಪಿಗೆ ನೀಡಲಾಯಿತು. ಕಳೆದ ಕೆಲವು ದಿನಗಳ ಹಿಂದೆ ಪುನೀತ್ ರಾಜಕುಮಾರ್ ಅಭಿಮಾನಿಗಳು ನಗರದ ಶಾನಭಾಗ ಹೊಟೆಲ್‌ ಮುಂಬಾಗದ ವೃತ್ತದಲ್ಲಿ ಪುನೀತ್ ಬಾವಚಿತ್ರ ಇಟ್ಟು ಪೂಜೆ ಸಲ್ಲಿಸುವ ಮೂಲಕ ಪುನೀತ್ ರಾಜಕುಮಾರ ವೃತ್ತ ಎಂದು ನಾಮಕರಣ ಮಾಡಿದ್ದರು. ಆ ವಿಷಯವನ್ನ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಸುಂಕಮ್ಮ ಮುಖಂಡತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಎಲ್ಲಾ ಚುನಾಯಿತ ಸದಸ್ಯರು ಕ್ರೀಡಾಂಗಣಕ್ಕೆ ಮತ್ತು ವೃತ್ತಕ್ಕೆ ನಟ #ದಿವಾಂಗತ ಪುನೀತ್ ರಾಜಕುಮಾರ್ ರವರ ಹೆಸರು‌ ನಾಮಕರಣಮಾಡಲು ಒಪ್ಪಿಗೆ ಸೂಚಿಸಿತು. ಈ ಮೂಲಕ ನಟ #ದಿವಾಂಗತ ಪುನೀತ್ ರಾಜಕುಮಾರ್ ರವರ ಮೇಲಿನ ಅಭಿಮಾನವನ್ನ ಹೊಸಪೇಟೆ ನಗರಸಭೆಯ ಸದಸ್ಯರು ಕೂಡ ವ್ಯಕ್ತಪಡಿಸಿದರು.

ಅಪ್ಪು ಅಂತ ಹೆಸರು ಹೇಳಿದರೆ ಸಾಕು ಮಕ್ಕಳಲ್ಲಿ ಸಹ ಸಂತೋಷದ ಹುಮ್ಮಸ್ಸು ಎದ್ದು ಕಾಣುತ್ತದೆ..
ಜನವರಿ 26ರಂದು ಗಣರಾಜ್ಯೋತ್ಸವದ ದಿನ ಅಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಆಶೀರ್ವಾದ ಪಡೆದ ಈ ಪುಟ್ಟ ಮಕ್ಕಳು ನನ್ನ ಕ್ಯಾಮೆರಾದಲ್ಲಿ ಸೇರೆಯಾಗಿದ್ದರೆ…

ಅಪ್ಪು ಹುಡುಗರು ಶ್ರೀ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ ಹೊಸಪೇಟೆ ವಿಜಯನಗರ ಜಿಲ್ಲಾ ವತಿಯಿಂದ.. ಕಿಚಡಿ ವಿಶ್ವ ಜಿಲ್ಲಾದ್ಯಕ್ಷರು ಜೋಗಿ ತಾಯಪ್ಪ ಜಿಲ್ಲಾ ಉಪಾಧ್ಯಕ್ಷರು ರಾಘವೇಂದ್ರ ಕೆ.ಯು.. ಕಾರ್ಯದರ್ಶಿ ಹಾಗೂ ವಿಜಯನಗರ ಜಿಲ್ಲಾ ಅಭಿಮಾನಿಗಳಿಗೆ ಹೃದಯ ಪೂರಕವಾಗಿ ನಿಮಗೆ ಧನ್ಯವಾದಗಳು ತಿಳಿಸಲಾಯಿತು,,,

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here