ಹೊಸಪೇಟೆ ನಗರದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ!

0
459

ಹೊಸಪೇಟೆ :- ಜಾಗೃತಿ ಬೆಳಕು ಬ್ರೇಕಿಂಗ್

ವಿಜಯನಗರ ಜಿಲ್ಲೆ, ಹೊಸಪೇಟೆ ನಗರದಲ್ಲಿ ಮತದಾನ ಜಾಗೃತಿಯ ಅಂಗವಾಗಿ ಬೈಕ್ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸದಾಶಿವ ಪ್ರಭು ಬಿ ರವರು ಚಾಲನೆ ನೀಡಿದರು. ಸಹಾಯಕ ಆಯುಕ್ತರು, ತಾಲೂಕು ಚುನಾವಣಾ ಅಧಿಕಾರಿಗಳು ನಗರಸಭೆ ಆಯುಕ್ತರು, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ನಗರಸಭೆ ಸಿಬ್ಬಂದಿಗಳು ಪೌರ ಕಾರ್ಮಿಕರು ಭಾಗವಹಿಸಿದರು. ನಗರಸಭೆ ಹೊಸಪೇಟೆಯಿಂದ ಅಂಬೇಡ್ಕರ್ ಸರ್ಕಲ್‌, ಕಾಲೇಜು ರೋಡ್ ಮೂಲಕ ಸಾಹಿಬಾಬ ದೇವಸ್ಥಾನ, ಟಿ.ಎಸ್.ಪಿ.ಕಾಲೊನಿ, ಎಪಿಎಂಸಿ,ಕೆಇಬಿ.ತಾಲೂಕು ಪಂಚಾಯತ್, ವಾಲ್ಮೀಕಿ ಸರ್ಕಲ್ ಬೀದಿಗಳಲ್ಲಿ ಸಂಚರಿಸಿ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.

150 ರಿಂದ170 ಬೈಕ್ ಗಳಲ್ಲಿ 350 ರಿಂದ 380 ಸಿಬ್ಬಂದಿಗಳು ಭಾಗವಹಿಸಿ ಸುಮಾರು 10 ರಿಂದ 13 ಕಿಲೋ ಮೀಟರ್ ಸಂಚರಿಸಲಾಯಿತು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here