ಹೊಸಪೇಟೆ ತಾಲೂಕು ಕಚೇರಿಗೆ ಡಿಸಿ.ವೆಂಕಟೇಶ್.ಟಿ ದಿಢೀರ್ ಬೇಟೆ!!

0
303

ಹೊಸಪೇಟೆ ತಾಲ್ಲೂಕು ಕಚೇರಿಗೆ ಡಿಸಿ ವೆಂಕಟೇಶ್ ಟಿ. ಭೇಟಿ!!
ನಕಲಿ ಭೂ ದಾಖಲೆ ಕುರಿತು ದೂರು; ದಾಖಲೆಗಳ ಪರಿಶೀಲನೆ

ಹೊಸಪೇಟೆ:-ಜಾಗೃತಿ ಬೆಳಕು. ಬಿಗ್ ಬ್ರೇಕಿಂಗ್ ನ್ಯೂಸ್

ಫೆ 28. ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಕಲಿ ದಾಖಲೆ ಸೃಷ್ಟಿಸಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಕೆಯಾದ ಕುರಿತು ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಭೂದಾಖಲೆಗಳ ಕೊಠಡಿಗೆ ಭೇಟಿ ನೀಡಿ ಖುದ್ದಾಗಿ ಅರ್ಜಿ ಸಲ್ಲಿಸಿದ ದಾಖಲೆಗಳಲ್ಲಿ ನಮೂದಿಸಿದ ಮಾಹಿತಿಯ ನೈಜತೆಯ ಕುರಿತು ಪರಿಶೀಲನೆ ಕೈಗೊಂಡರು.
ನಂತರ ಮಾತನಾಡಿದ ಅವರು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಜಂಬುನಾಥಹಳ್ಳಿ ಹಾಗೂ ಅನಂತಶಯನಗುಡಿ ಭಾಗದ ಸರ್ಕಾರಿ ಭೂದಾಖಲೆಗಳ ಸರ್ವೆ ಮಾಹಿತಿಯೊಂದಿಗೆ ನಕಲಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದ ಕುರಿತು ದೂರು ಬಂದ ಹಿನ್ನೆಲೆ ಪರಿಶೀಲನೆ ಕೈಗೊಳ್ಳಲಾಗಿದೆ. ಮೇಲ್ನೋಟಕ್ಕೆ ಸಲ್ಲಿಸಿದ ಅರ್ಜಿಯಲ್ಲಿನ ದಾಖಲೆಗಳು ನಕಲಿ ಎಂದು ತಿಳಿದು ಬಂದಿದೆ.
ಕಚೇರಿ ಅವಧಿ ಮುಗಿದ ನಂತರ ಸಂಜೆ ವೇಳೆ ಕೆಲವರು ಆಗಮಿಸಿ ಒತ್ತಡ ಹಾಕುತ್ತಿರುವ ದೂರು ಬಂದಿದೆ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ, ಸಮಗ್ರ ತನಿಖೆ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಸೇರಿದಂತೆ ಅಮರನಾಥ್, ಶ್ರೀಧರ್ ಹಾಗೂ ತಾಲ್ಲೂಕು ಕಚೇರಿ ಸಿಬ್ಬಂದಿ ಇದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here