ಹೊಸಪೇಟೆಯ ಮೂವತ್ಮೂರು ಮಸೀಧಿಗಳಲ್ಲೂ ಈದ್ ಮಿಲಾದ್ ಆಚರಣೆ ..!

0
645

ವಿಜಯನಗರ ಬ್ರೇಕಿಂಗ್

ಪ್ರವಾದಿ ಮಹಮ್ಮದರವರ ಹುಟ್ಟು ಹಬ್ಬದ ಹಿನ್ನೆಲೆ ಶಾಂತಿ ಸಭೆ ಆಯೋಜನೆಲಾಗಿತ್ತು

ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯ ಟೌನ್ ಪೊಲೀಸ್ ಸ್ಟೇಷನಲ್ಲಿ ಸಭೆನಡೆಯಿತು
ಸಭೆಯಲ್ಲಿ ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಖಾದರ್ ರಫಾಯಿ ,ಮತ್ತು ಬಡಾವಲಿ, ಶಬ್ಬೀರ್ ಮುಸ್ಲಿಂ ಸಮಾಜದ ಮುಖಂಡರು ಯುವ ಮುಖಂಡರು ಭಾಗವಹಿಸಿದ್ದರು.

ಮುಸ್ಲಿಂ ಸಮಾಜದ ಮುಖಂಡರ ಮುಂದೆ ಅಂಜುಮನ್ ಕಮಿಟಿಯ ಅಧ್ಯಕ್ಷರು ಹೇಳಿದ ಮಾತು.. ನಾವು ಎಲ್ಲರು ಸೇರಿ ಪ್ರವಾದಿ ಮೊಹಮ್ಮದ ರವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸೋಣ ಆದರೆ ಸರ್ಕಾರದ ಆದೇಶವನ್ನು ಆಲಿಸೋಣ ಶಾಂತಿ ಸಂದೇಶವನ್ನು ಸಾರೋಣ ಎಲ್ಲ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸೋಣ ಎಂದು ಶಾಂತಿ ಸಂದೇಶವನ್ನು ಸಾರಿದರು.

ಟೌನ್ ಪೊಲೀಸ್ ಸ್ಟೇಷನ್ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ರಾವ್ ಮುಸ್ಲಿಂ ಸಮಾಜದ ಮುಖಂಡರ ಮುಂದೆ ಮುಸ್ಲಿಂ ಸಮಾಜದ ಜನರಲ್ಲಿ ಕೇಳಿಕೊಳ್ಳುವುದೇನೆಂದರೆ, ಹೊಸಪೇಟೆಯ ಮುಸ್ಲಿಂ ಜನ ತುಂಬಾ ಒಳ್ಳೆಯವರು ನಾನು ಬಂದು ಒಂದು ವರ್ಷವಾಯಿತು ಇವತ್ತಿನವರೆಗೂ ಮುಸ್ಲಿಂ ಹಬ್ಬದ ಪ್ರಯುಕ್ತ ಯಾವುದೇ ತಂಟೆ ತಕರಾರು ಗೊಂದಲಗಳು ಕಂಡುಬಂದಿಲ್ಲ, ಇನ್ನು ಮುಂದೆನು ನೀವು ಇದೇ ತರ ಶಾಂತಿಯುತವಾಗಿ ಹಬ್ಬವನ್ನು ಮಾಡಿಕೊಂಡು ಹೋಗುತ್ತೀರಾ ಎಂದು ಭಾವಿಸುತ್ತೇನೆ..


ನಾವು ಪೊಲೀಸರಾಗಿ ಕೆಲಸ ಮಾಡೋದು ಬೇಡ ನಿಮ್ಮ ಜೊತೆ ನಿಮ್ಮ ಅಣ್ಣ ತಮ್ಮಂದಿರಂತೆ ನಾವು ಕೂಡ ನಿಮ್ಮ ಜೊತೆ ಹಬ್ಬವನ್ನು ಆಚರಿಸೋಣ
ಎಂದು ಶಾಂತಿ ಸಭೆಯಲ್ಲಿ ಈ ಮಾತನ್ನು ಮುಸ್ಲಿಂ ಮುಖಂಡರ ಮುಂದೆ ತಮ್ಮ ಮನದಾಳದ ಮಾತನ್ನು ಹೇಳಿಕೊಂಡರು,,

ಹೊಸಪೇಟೆಯ ಮೂವತ್ಮೂರು ಮಸೀಧಿಗಳಲ್ಲೂ ಈದ್ ಮಿಲಾದ್ ಆಚರಣೆ ..!

ಶಾಂತಿ ಸುವ್ಯವಸ್ಥೆಗೆ ಧಕ್ಕೆಬಾರದ ರೀತಿಯಲ್ಲಿ‌ ನಮಾಜ್ ಮಾಡುವಂತೆ ಪೊಲೀಸ್ ಇನ್ಸ್ಪೆಕ್ಟರ್ ಕರೆ ನೀಡಿರುತ್ತಾರೆ..!

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here