ಹೊಸಪೇಟೆಯ ನಗರಸಭೆ: ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ!!

0
483

ಹೊಸಪೇಟೆ ಬ್ರೇಕಿಂಗ್ ನ್ಯೂಸ್ (ಜಾಗೃತಿ ಬೆಳಕು)

ಹೊಸಪೇಟೆ ನಗರಸಭೆಯ ವತಿಯಿಂದ 2022-23ನೇ ಕೇಂದ್ರ ಪುರಸ್ಕಂತ ಯೋಜನೆಯಡಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್) ಅಡಿಯಲ್ಲಿ ಉಪಘಟಕವಾದ ಉದ್ಯೋಗ (ಶೇ.7% ಮೇಲೆ ಬಡ್ಡಿ ಸಹಾಯಧನ) ಸ್ವಯಂ ಉದ್ಯೋಗ ಕಾರ್ಯಕ್ರಮ (ಗುಂಪು) ಹಾಗೂ ಸ್ವ-ಸಹಾಯ ಗುಂಪುಗಳ ರಚನೆಯ ಕಾರ್ಯಕ್ರಮಕ್ಕೆ ನಗರಸಭೆ ವ್ಯಾಪ್ತಿಯೊಳಗಿನ ಪ್ರದೇಶದಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ನಿರುದ್ಯೋಗಿ ಮಹಿಳಾ ಮತ್ತು ಪುರುಷ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ನಗರಸಭೆಯ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ಬಿ.ಪಿ.ಎಲ್ ಫಲಾನುಭವಿಗಳು ನಿಗದಿತ ಅರ್ಜಿ ನಮೂನೆಗಳನ್ನು ಜು.01ರೊಳಗಾಗಿ ಅರ್ಜಿಗಳನ್ನು ಭರ್ತಿಮಾಡಿ ಎಲ್ಲಾ ದೃಢೀಕೃತ ದಾಖಲೆಗಳೊಂದಿಗೆ ನಗರಸಭೆ ಕಾರ್ಯಾಲಯಕ್ಕೆ ಖುದ್ದಾಗಿ ಸಲ್ಲಿಸಲು ಸೂಚಿಸಿದೆ. ಸ್ವಯಂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು: ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ವಾಸವಾಗಿದ್ದು, ಕುಟುಂಬದ ವಾರ್ಷಿಕ ಆದಾಯ ರೂ.23214/ ಹೊಂದಿರುವ ಪುರುಷ/ಮಹಿಳಾ ಫಲಾನುಭವಿಗಳಾಗಿದು, 18 ರಿಂದ 45 ವರ್ಷದ ವಯೋಮಾನದ, ಫಲಾನುಭವಿಗಳಾಗಿರಬೇಕು ಮತ್ತು ಸ್ವಯಂ ಉದ್ಯೋಗ ಮಾಡಲು ಆಸಕ್ತಿ ಇರಬೇಕು, ಯಾವುದೇ ಬ್ಯಾಂಕ್‌ನಲ್ಲಿ ಸಾಲ ಹೊಂದಿರಬಾರದು, ಮಂಜೂರಾದ ಸಾಲವನ್ನು ಕಡ್ಡಾಯವಾಗಿ ಮೂರು ವರ್ಷದಲ್ಲಿ ಪಾವತಿಸುವ ಅರ್ಹತೆ ಹೊಂದಿರತಕ್ಕದ್ದು. ನಿಗಧಿತಪಡಿಸಿದ ಗುರಿ 39 ಆಗಿದೆ.ನಿಗಧಿತಪಡಿಸಿದ ಗುರಿ 39 ಆಗಿದೆ. ಲಗತ್ತಿಸಬೇಕಾದ ದಾಖಲೆಗಳು : ಪ್ರಸ್ತುತ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಯೋಜನಾ ವರದಿ, ರೇಷನ್ ಕಾರ್ಡ್/ ಆಧಾರ್ ಕಾರ್ಡ್/ ಚುನಾವಣೆ ಗುರುತಿನ ಚೀಟಿ, ಕೈಗೊಳ್ಳುವ ಉದ್ಯೋಗದ ಬಗ್ಗೆ ತರಬೇತಿಗೊಂಡ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಇತ್ತೀಚಿನ 2 ಭಾವಚಿತ್ರ, ರೂ.20 ಛಾಪಾ ಕಾಗದದ ಮೇಲೆ ಡೇ-ನಲ್ಫ್ ಯೋಜನೆಯ ಘೋಷಣಾ ಪ್ರಮಾಣ ಪತ್ರವನ್ನು ನೋಟರಿಯಿಂದ ದೃಢೀಕರಿಸಿದ ಪ್ರತಿ ಹಾಗೂ ವೈಯಕ್ತಿಕ ಉಳಿತಾಯ ಖಾತೆಯ ಬ್ಯಾಂಕ್ ಪಾಸ್ ಬುಕ್ ಪ್ರತಿಗಳನ್ನು ದಾಖಲಿಸಬೇಕು. ಮಂಜೂರು ಮಾಡುವ ಸಹಾಯಧನ : ವೈಯಕ್ತಿಕವಾಗಿ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಒಟ್ಟು ಯೋಜನಾ ವೆಚ್ಚ ರೂ.2 ಲಕ್ಷಗಳಷ್ಟು ಇರುತ್ತದೆ, ವೈಯಕ್ತಿಕ ಸ್ಯಯಂ ಉದ್ಯೋಗವನ್ನು ಕೈಗೊಳ್ಳಲು ಉದ್ಯೋಗದ ಸ್ಥಾಪನೆಗಾಗಿ ಬ್ಯಾಂಕ್ ಸಾಲದ ಮೇಲೆ ಬಡ್ಡಿದರ (ಶೇ.7ಕ್ಕಿಂತ ಮೇಲೆ ಬಡ್ಡಿ ಸಹಾಯ ಧನ) ಇಂಟರೆಸ್ಟ್ ಸಬ್ಸಿಡಿ ವೆಬ್ ಪೋರ್ಟಲ್ ಮೂಲಕ ದೂರೆಯುತ್ತದೆ. ಸದರಿ ಬಡ್ಡಿ ಸಬ್ಸಿಡಿಯನ್ನು ಕಾಲಕಾಲಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿಸುವ ವ್ಯಕ್ತಿಗಳಿಗೆ ಮಾತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಗರಸಭೆಯ ಸಿ.ಎ.ಒ (ಸಮುದಾಯ ವ್ಯವಹಾರ ಅಧಿಕಾರಿ ) ಯವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.ಸೂಚನೆ: ಅರ್ಜಿಯೊಂದಿಗೆ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ವಾರ್ಡ್ ವಾರು ನಿಗದಿಪಡಿಸಿದ ಸೇವಾ ವಲಯದ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಪ್ರತಿ ಲಗತ್ತಿಸಬೇಕು. ವಾರ್ಡ್ ವಾರು ನಿಗದಿಪಡಿಸಿದ ಸೇವಾ ವಲಯದ ಬ್ಯಾಂಕ್‌ಗಳಿಗೆ ಮಾತ್ರ ಅರ್ಜಿಗಳನ್ನು ಕಳುಹಿಸಲಾಗುವುದು ಎಂದು ಅವರುತಿಳಿಸಿದ್ದಾರೆ. ಅಪೂರ್ಣವಾಗಿ ಭರ್ತಿಮಾಡಲಾದ ಹಾಗೂ ದೃಢೀಕೃತ ದಾಖಲೆಗಳಿಲ್ಲದ ಮತ್ತು ತಡವಾಗಿ ಬಂದಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ನಗರಸಭೆಯ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 75ಯೂನಿಟ್ ಉಚಿತ ವಿದ್ಯುತ್ಬಳ್ಳಾರಿ,ಜೂ.17(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರ ಚೀಟಿ ಹೊಂದಿರುವ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಗೃಹ ಬಳಕೆದಾರರಿಗೆ ಮಾಸಿಕ 75 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತದೆ ಎಂದು ಬಳ್ಳಾರಿ ನಗರ ಜೆಸ್ಕಾಂ, ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರ (ಬಿಪಿಎಲ್ ಪಡಿತರ ಚೀಟಿ ಪಡೆದಿರುವಂತಹ) ಗ್ರಾಹಕರು ಪ್ರಸ್ತುತ ಇರುವ ವಿದ್ಯುತ್ ಬಾಕಿಯನ್ನು ಪಾವತಿಸಿದ್ದಲ್ಲಿ ಮಾತ್ರ ಸರಕಾರದ ಆದೇಶದ ಪ್ರಕಾರ 75 ಯೂನಿಟ್ ವಿದ್ಯುತ್‌ನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here