ಹೊಸಪೇಟೆಯಲ್ಲಿ ಆರಂಭಗೊಂಡ ಅಂಜುಮನ್ ಚುನಾವಣೆಯ ಕಾವು!

0
556

ಹೊಸಪೇಟೆ:- ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್)

ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಧಿಸೂಚನೆ ಪ್ರಕಟ!

ಹೊಸಪೇಟೆಯಲ್ಲಿ ಆರಂಭಗೊಂಡ ಅಂಜುಮನ್ ಚುನಾವಣೆಯ ಕಾವು!

ಹೊಸಪೇಟೆಯ ಆಜಾದ್ ನಗರದ ಅಂಜುಮನ್ ಖಿದ್ಮತೆ ಇಸ್ಲಾಂ ವ್ಯವಸ್ಥಾಪನಾ ಸಮಿತಿಯ ಹನ್ನೊಂದು ಜನ ಸದಸ್ಯರ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಲು ಅಧಿಸೂಚನೆ ಪ್ರಕಟವಾಗಿದೆ ಎಂದು ಡಿಯುಡಿಸಿ ಯೋಜನಾ ನಿರ್ದೇಶಕರು ಹಾಗೂ ಅಂಜುಮನ್ ಖಿದ್ಮತೆ ಇಸ್ಲಾಂನ ಚುನಾವಣಾಧಿಕಾರಿ ಮಾನ್ಸೂರ್ ಅಲಿ ಅವರು ತಿಳಿಸಿದ್ದಾರೆ.

ನೂತನ ವಿಜಯನಗರ ಜಿಲ್ಲೆ ಆದಮೇಲೆ ಮೊಟ್ಟಮೊದಲನೆಯ ಬಾರಿಗೆ ಅಂಜುಮನ್ ಖಿದ್ಮತೆ ಇಸ್ಲಾಂನ ಚುನಾವಣೆ ನಡೆಯುತ್ತಿದೆ,

ಅನೇಕ ದಿನಗಳಿಂದ ಅಂಜುಮನ್ ಖಿದ್ಮತೆ ಇಸ್ಲಾಂ ಚುನಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಚುನಾವಣೆ ದಿನಾಂಕ ಮುಂದೂಡಲ್ಪಡುತ್ತ ಬರುತ್ತಿತ್ತು ಇಂದು ಅಧಿಕೃತವಾಗಿ ಚುನಾವಣೆ ಅಧಿಸೂಚನೆ ಪ್ರಕಟಗೊಂಡು ಚುನಾವಣೆ ಘೋಷಣೆಯಾಗಿದೆ. ಈ ನಿರೀಕ್ಷೆಗೆ ತೆರೆ ಎಳೆದಂತಾಗಿದೆ,

ನಾಮಪತ್ರ ವಿತರಿಸುವ ಹಾಗೂ ಸ್ವೀಕರಿಸುವ ದಿನಾಂಕ ನ.15ರಿಂದ ನ.19ರವರೆಗೆ, ಭರ್ತಿ ಮಾಡಿದ ನಾಮಪತ್ರಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ ನ.21, ಅರ್ಹ ಅಭ್ಯರ್ಥಿಗಳ ಘೋಷಣೆ ನ.23ರಂದು ಮಧ್ಯಾಹ್ನ 12ಕ್ಕೆ, ಮತದಾನವು ಡಿಸೆಂಬರ್ 11ರಂದು ಹೊಸಪೇಟೆಯ ಅರವಿಂದನಗರದ ಶಾಂತಿ ನಿಕೇತನ ಪಬ್ಲಿಕ್ ಶಾಲೆಯಲ್ಲಿ ನಡೆಯಲಿವೆ ಎಂದು ತಿಳಿಸಿದ್ದಾರೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here