ಹರ್ಷವರ್ಧನ ಪೂಜಾರಿ ನೇತೃತ್ವದಲ್ಲಿ ನೇಮಿಚಂದ್ರಗೆ ಗೌರವ ನಮನ

0
168
ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗೌರವ ನಮನ

ವಿಜಯಪುರ ಜಿಲ್ಲೆ ಸಿಂದಗಿ

ಸಿಂದಗಿ : ಇತ್ತೀಚೆಗೆ ಅಕಾಲಿಕ ನಿಧನ ಹೊಂದಿದ ಸಾಮಾಜಿಕ ಹೋರಾಟಗಾರ್ತಿ ನೇಮಿಚಂದ್ರ ( 27 ) ಅವರ ನಿಧನಕ್ಕೆ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದಿಂದ ಶನಿವಾರ ಸಂಜೆ ಗೌರವ ನಮನ ಸಲ್ಲಿಸಲಾಯಿತು.
ವಿಜಯಪುರ ಜಿಲ್ಲಾ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಹರ್ಷವರ್ಧನ ಪೂಜಾರಿ ನೇತೃತ್ವದಲ್ಲಿ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಕ್ಯಾಂಡಲ್ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಹರ್ಷವರ್ಧನ ಪೂಜಾರಿ ನೇಮಿಚಂದ್ರ ಸಾಮಾಜಿಕ ಹೋರಾಟದ ಕುರಿತು, ಅವರ ಬದುಕಿನ ದಾರಿಯ ಕುರಿತು ಮಾತನಾಡಿದರು. ಅದೆ ರೀತಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ಭಾಗೇಶ ಹೂಗಾರ ಮಾತನಾಡಿ, ಅತೀ ಚಿಕ್ಕ ವಯಸ್ಸಿಗೆ ಓರ್ವ ದಿಟ್ಟ ಹೋರಾಟಗಾರ್ತಿಯನ್ನು ಕಳೆದುಕೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಇನ್ನು ನೇಮಿಚಂದ್ರ, ಕರ್ನಾಟಕ ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸೇರಿದಂತೆ ಹಲವು ಜನರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಕಾನೂನು ವ್ಯಾಸಂಗ ಮಾಡುತ್ತಿದ್ದ ಇವರು ನ್ಯೂಮೋನಿಯಾದಿಂದಾಗಿ ಬೆಳಗಾವಿಯಲ್ಲಿ ಡಿಸೆಂಬರ್ 15 ರಂದು ನಿಧನ ಹೊಂದಿದರು. ಈ ವೇಳೆ ದಲಿತ್ ವಿದ್ಯಾರ್ಥಿ ಪರಿಷತ್, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರಾದ ಸುಮೀತ್ ಕಕ್ಕಸಗೇರಿ, ಕಿರಣ ಜಾಧವ, ತುಳಸಿರಾಮ ಚಿಕ್ಕ ಸಿಂದಗಿ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here