ಹಂಪಿ ಉತ್ಸವ-2023; ಧ್ವನಿ ಮತ್ತು ಬೆಳಕು ಸಾಂಸ್ಕೃತಿಕ ಪ್ರದರ್ಶನಕ್ಕೆ ಸಿದ್ಧತೆ!

0
276

ಹೊಸಪೇಟೆ :-ಜಾಗೃತಿ ಬೆಳಕು ವಾರಪತ್ರಿಕೆ

7 ದಿನಗಳ ಕಾಲ ‘ವಿಜಯನಗರ ವೈಭವ’ ಪ್ರದರ್ಶನ!

ವಿಶ್ವವಿಖ್ಯಾತ ಹಂಪಿಯಲ್ಲಿ ನಡೆಯಲಿರುವ ಹಂಪಿ ಉತ್ಸವದ ಅಂಗವಾಗಿ 7 ದಿನಗಳ ಕಾಲ ಧ್ವನಿ ಮತ್ತು ಬೆಳಕು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗುತ್ತಿದೆ. 

ಹಂಪಿಯ ಕಮಲ ಮಹಲ್ ಸ್ಮಾರಕದ ಸಮೀಪದ ಗಜಶಾಲೆ ಆವರಣದಲ್ಲಿ ವೇದಿಕೆಗಳನ್ನು ಸಿದ್ಧಗೊಳಿಸಲಾಗುತ್ತಿದ್ದು, ‘ವಿಜಯನಗರ ವೈಭವ’ ಶೀರ್ಷಿಕೆಯೊಂದಿಗೆ ಧ್ವನಿ ಮತ್ತು ಬೆಳಕಿನ ಪ್ರದರ್ಶನದ ಮೂಲಕ ಸಾಮ್ರಾಜ್ಯದ ಗತವೈಭವವನ್ನು ಸಾರಲಿದೆ. 

ಹತ್ತಾರು ವೇದಿಕೆ, 110 ಜನ ಕಲಾವಿದರು:

ಸಾಂಸ್ಕೃತಿಕ ಪ್ರದರ್ಶನದ ಅಂಗವಾಗಿ ಈಗಾಗಲೇ ಗಜಶಾಲೆ ಆವರಣದಲ್ಲಿ 8-10 ವೇದಿಕೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆವರಣದ ಸ್ವಚ್ಛತಾ ಕಾರ್ಯದ ಜೊತೆಗೆ ವೇದಿಕೆ ನಿರ್ಮಾಣ ಹಾಗೂ ಸ್ಮಾರಕಗಳನ್ನು ಒಳಗೊಂಡು ಪ್ರದರ್ಶನಕ್ಕೆ ಬೇಕಾದ ವಿದ್ಯುತ್ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. 

ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ ಇಲಾಖೆಯಿಂದ ಸಾಂಸ್ಕೃತಿಕ ಪ್ರದರ್ಶನವನ್ನು ಆಯೋಜಿಸಲಾಗುತ್ತಿದ್ದು, ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕಾಗಿ 110 ಜನ ಕಲಾವಿದನ್ನು ಆಯ್ಕೆಮಾಡಲಾಗಿದೆ. ಸ್ಥಳೀಯರನ್ನು ಒಳಗೊಂಡ ನುರಿತ ಕಲಾವಿದರನ್ನು ಶಿಬಿರದ ಮೂಲಕ ಆಯ್ಕೆಮಾಡಲಾಗಿದೆ. 

ಶುಕ್ರವಾರದಿಂದ ಕಲಾವಿದರಿಗೆ ತರಬೇತಿ ಹಾಗೂ ಪೂರ್ವಾಭ್ಯಾಸ ಆರಂಭಗೊಳ್ಳಲಿದೆ. 

7 ದಿನಗಳ ಕಾಲ ಪ್ರದರ್ಶನ: ಜ.27ರಿಂದ ‘ವಿಜಯನಗರ ವೈಭವ’ ಧ್ವನಿ ಮತ್ತು ಬೆಳಕು ಪ್ರದರ್ಶನ ಆರಂಭಗೊಳ್ಳಲಿದ್ದು, ಫೆ.02ವರೆಗೂ 7 ದಿನಗಳ ಕಾಲ ನಡೆಯಲಿದೆ.

ಪ್ರತಿದಿನ ಸಂಜೆ 7 ರಿಂದ 9.20ರವರೆಗೂ 2 ಗಂಟೆ 20 ನಿಮಿಷದ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ, ಬೆಳೆದು ಬಂದ ಹಾದಿ, ಉಚ್ಚಾçಯ ಸ್ಥಿತಿ, ಗತವೈಭವ, ಕಲಾಪೋಷಣೆ, ವಜ್ರವೈಢೂರ್ಯಗಳ ಮಾರಾಟ, ಅವನತಿ, ಪ್ರಸ್ತುತ ಸ್ಮಾರಕಗಳ ರಕ್ಷಣೆ ಹಾಗೂ ವಿಶ್ವಪಾರಂಪರಿಕ ತಾಣದ ಸಂರಕ್ಷಣಾ ಸಂದೇಶವನ್ನು ಸಾರಲಿದೆ. 

ತಾಂತ್ರಿಕ ವೈಭವ: ಧ್ವನಿ ಮತ್ತು ಬೆಳಕಿನ ತಂತ್ರಜ್ಞಾನದ ಮೂಲಕ ವೈಭವಯುತವಾಗಿ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸ್ಮಾರಕಗಳ ನಡುವಿನಲ್ಲಿ ಪ್ರದರ್ಶನ ಕಾಣಲಿದೆ. 8 ಜನ ತಾಂತ್ರಿಕ ತಜ್ಞರು, 15 ಜನ ತಾಂತ್ರಿಕ ನಿಪುಣರು ಸೇರಿದಂತೆ 20 ಜನ ಸಹಾಯಕರು ಪ್ರದರ್ಶನದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. 

ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಪ್ರದರ್ಶನವು ಜೋಷಿ ಅವರ ನೇತೃತ್ವದಲ್ಲಿ ನೆರವೇರಲಿದೆ. ಕಲಾವಿದರಿಗೆ ಪೂರ್ವಾಭ್ಯಾಸ ಹಾಗೂ ಪ್ರದರ್ಶನ ಸೇರಿದಂತೆ 14 ದಿನಗಳ ಸಂಭಾವನೆಯನ್ನು ನಿಗದಿಗೊಳಿಸಲಾಗಿದೆ. ಹಂಪಿ ಉತ್ಸವದೊಂದಿಗೆ ಅದ್ಧೂರಿ ವಿಜಯನಗರ ವೈಭವ ಪ್ರದರ್ಶನ ನೆರವೇರಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here