ಸರಕು ಸಾಗಾಣೆ ವಾಹನದಲ್ಲಿ ಕಾನೂನು ಬಾಹಿರ ಪ್ರಯಾಣ; 6 ಪ್ರತ್ಯೇಕ ಪ್ರಕರಣ,!

0
369

ಹೊಸಪೇಟೆ :-ಪ್ರಜಾವಾಹಿನಿ

ಸರಕು ಸಾಗಣೆ ವಾಹನದಲ್ಲಿ ಕಾನೂನು ಬಾಹಿರವಾಗಿ ಪ್ರಯಾಣಿಸುತ್ತಿದ್ದ ವಾಹನವನ್ನು ರಾಷ್ಟ್ರೀಯ ಹೆದ್ದಾರಿ 50ರ ಚೆಕ್‌ಪೋಸ್ಟ್ ಬಳಿ ಆರ್‌ಟಿಓ ಅಧಿಕಾರಿಗಳು ತಡೆದು ಪ್ರಕರಣ ದಾಖಲಿಸಿದ್ದಾರೆ.


ಹೊಸಪೇಟೆ ನೋಂದಣಿ ಸಂಖ್ಯೆ ಹೊಂದಿದ ಸರಕು ವಾಹನ ಮುನಿರಾಬಾದ್‌ನಿಂದ ಕಲ್ಲಹಳ್ಳಿ ಕಡೆಗೆ ಪ್ರಯಾಣಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಒಟ್ಟು 6 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಮೂರು ದಿನಗಳ ಕಾರ್ಯಾಚರಣೆಯಲ್ಲಿ 22 ಪ್ರಕರಣ ದಾಖಲಿಸಲಾಗಿದ್ದು, 1.68 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್ ಚವ್ಹಾಣ್ ಅವರು ತಿಳಿಸಿದ್ದಾರೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here