ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಬಂಧ ಜೀವನದಲ್ಲಿ ಮರೆಯಲಾಗದ ಕ್ಷಣ:ಗುರುದತ್

0
182

ಹೊಸಪೇಟೆ: ಜಾಗೃತಿ ಬೆಳಕು ಬ್ರೇಕಿಂಗ್ ನ್ಯೂಸ್

ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಫಲತೆ ಗೊಂಡಿವೆ: ಗುರುದತ್ತ.

ತಾಲೂಕಿನಲ್ಲಿ ಶಿಕ್ಷಣಕ್ಷೇತ್ರ ಅಭಿವೃದ್ದಿಯಾಗಬೇಕಿದೆ, ಇದಕ್ಕೆ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗಳು ಸೇರಿದಂತೆ ಸಹಾಯಕ ಶಿಕ್ಷಣ ಅಧಿಕಾರಿಗಳು ಅತ್ಯಂತ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನೂತನ ಶಾಸಕರಾದ ಗವಿಯಪ್ಪ ಅವರ ಪುತ್ರರಾದ ಗುರುದತ್ತ ಹೇಳಿದರು.

ಅವರು ಇಂದು ಅನಂತಶಯನ ಗುಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಾಜರಾತಿ ಅಂದೋಲನ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜ್ಯೋತಿ ಬೆಳಗಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಮಟ್ಟದಿಂದಲೇ ರಾಜ್ಯದಲ್ಲಿ ಮಾದರಿ ಶಿಕ್ಷಣ ತರಲು ಸಾಧ್ಯ.

ಉಪಮುಖ್ಯ ಮಂತ್ರಿಗಳು ಶಿಕ್ಷಣತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಅವರ ವಿಚಾರಗಳಿಗೆ ಅನುಗುಣವಾಗುವಂತೆ ನಮ್ಮ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಸಹಕರಿಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು
ಸರ್ಕಾರಿ ಶಾಲೆಗಳು ಉತ್ತಮವಾದ ಶಿಕ್ಷಣ ನೀಡುತ್ತಿವೆ ನಿಮಗೆ ಬೇಕಾದ ಪಠ್ಯ ಪುಸ್ತಕಗಳು ಸೇರಿದಂತೆ ಎಲ್ಲಾ ಸೌಲಭ್ಯಗಳು ಸರ್ಕಾರಿ ಶಾಲೆಯಲ್ಲಿವೆ, ಅದರ ಉಪಯೋಗದಿಂದ ನೀವು ಉತ್ತಮ ಶಿಕ್ಷಣಪಡೆಯಿರಿ ಎಂದು ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವಪ್ರಭು , ಶಾಲೆ ನಮಗೆ ಬದುಕನ್ನು ಕಲಿಸುತ್ತದೆ, ಆದ್ದರಿಂದ ಇದೊಂದು ಸುವರ್ಣದಿ ಬದುಕು ಬದಲಿಸುವ ಕಾಲವಾಗಿದೆ , ಸರ್ಕಾರಿ ಶಾಲೆಯನ್ನು ಕಡೆಗಾಣಿಸದಿರಿ, ಇಲ್ಲಿ ಪಠ್ಯಪುಸ್ತಕ ಸಮವಸ್ರ್ತ ಸೇರಿದಂತೆ ಎಲ್ಲಾ ಸೌಲಭ್ಯಗಳು ದೊರಕುತ್ತವೆ, ಉತ್ತಮ ಶಿಕ್ಷಕ ರಿಂದ ಭೋದನೆ ನೀಡಲಾಗುತ್ತದೆ, ಇದನ್ನು ಸದುಪಯೋಗ ಗೊಳಿಸಿಕೊಂಡು ಉತ್ತಮನಾಗರೀಕರಾಗಿರಿ ಎಂದು ಹೇಳಿದರು

ಶಿಕ್ಷಣದಲ್ಲಿ ಸರ್ಕಾರಿ ಶಾಲೆಗಳು ಯಾವುದಕ್ಕೂ ಕಡಿಮೆ ಇಲ್ಲ, ಆದರೂ ಖಾಸಾಗಿ ಶಾಲೆಗಳತ್ತ ವಿದ್ಯಾರ್ಥಿಗಳು ಆಕರ್ಶಿತರಾಗುತ್ತಿರುವುದನ್ನು ವಿಷಾದಿಸಿದ ಸಿಇಓ , ಇಂದು ಉತ್ತಮ ಗುಣಮಟ್ಟದ ಬೋದನೆ ನೀಡುತ್ತಿರುವುದು ಸರ್ಕಾರಿ ಶಾಲೆಗಳೇ ಎಂದು ಸರ್ಕಾರಿ ಶಾಲೆಗಳು ಮತ್ತು ಶಿಕ್ಷಕರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಅಲ್ಲದೆ ಪ್ರತಿಯೊಬ್ಬ ಮಕ್ಕಳು ಬಯಲು ಶೌಚಾಲಯಗಳಿಗೆ ಹೋಗದೆ ಮನೆಯಲ್ಲಿನ ಶೌಚಾಲಯವನ್ನು ಬಳಸಲು ತಿಳಿಹೇಳಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಡಿ.ಡಿ.ಪಿ.ಐ. ಕೊಟ್ರೇಶ್ ಮಾತನಾಡಿ ,ಎಸ್ ಎಸ್.ಎಲ್.ಸಿ ಪರಿಕ್ಷೆಯಲ್ಲಿ ಜಿಲ್ಲೆ ಹದಿನಾರರಿಂಧ- ಹತ್ತನೇ ಸ್ಥಾನಕ್ಕೇರಿದೆ (16-10) ಮುಂದಿನ ದಿನಗಲ್ಲಿ ಐದನೇ ಸ್ಥಾನಕ್ಕೇರಿಸಲು ಶ್ರಮವಹಿಸ ಬೇಕಿದೆ ಎಂದು , ಉತ್ತಮ ಅಂಕಗಳನ್ನುಗಳಿಸಿ ಕೊಡುವಲ್ಲಿ ಶ್ರಮವಹಿಸಿದ ಶಿಕ್ಷಕರನ್ನು ಶ್ಲಾಘಿಸಿದರು. ಅವರು ಮಾತನಾಡುತ್ತಾ ,ತಂದೆ ತಾಯಿಗಳ ನಂತರ ಗುರುಗಳಿಗೂ ಮತ್ತು ವಿದ್ಯಾರ್ಥಿಗಳಿಗೂ ಜೀವನದ ಉದ್ದಕ್ಕೂ ಸಂಭoದ ವಿರುತ್ತದೆ , ಉತ್ತಮ ಶಿಕ್ಷಣ ಪಡೆದು ನಾವು ಉನ್ನತ ಅಧಿಕಾರಕ್ಕೆ ಬಂದಾಗ , ನಮಗೆ ಶಿಕ್ಷಣ ನೀಡಿದ ಶಿಕ್ಷಕರನ್ನು ಸ್ಮರಿಸುತ್ತೇವೆ, ಎಂದರು. ಕಾರ್ಯಕ್ರದನಂತರ ಮನೆ ಮನೆಗೂ ತೆರಳಿ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರಲ್ಲಿ ವಿನಂತಿ ಮಾಡಿಕೊಳ್ಳಲಾಯಿತು. ದಾಖಲಾತಿ ಅಂದೋಲನದ ನಿಮಿತ್ತ
ಗ್ರಾಮದಲ್ಲಿ ಜೋಡೆತ್ತಿನ ಬಂಡಿಯಲ್ಲಿ ಮಕ್ಕಳನ್ನು ಕೂಡಿಸಿ ಮೆರವಣಿಗೆ ಮಾಡಲಾಯಿತು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here