ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ  ನಡೆದ ನೀಟ್ ಪರೀಕ್ಷೆಯಲ್ಲಿ 500ಕ್ಕೂ ಹೆಚ್ಚು ಅಂಕ ಪಡೆದ ಹೊಸಪೇಟೆಯ 6 ವಿದ್ಯಾರ್ಥಿಗಳು.

0
193

ಹೊಸಪೇಟೆ :-(ವಿಜಯನಗರ), ಜಾಗೃತಿ ಬೆಳಕು ನ್ಯೂಸ್

  ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ  ನಡೆದ ನೀಟ್ ಪರೀಕ್ಷೆಯಲ್ಲಿ   ಹೊಸಪೇಟೆ ನಗರದ ಚಿತ್ತವಾಡ್ಗಿಯಲ್ಲಿರುವ ಆಕಾಶ ಇಂಟರ್ ನ್ಯಾಷನಲ್

 ಪಿ ಯು ಕಾಲೇಜಿನ 6 ವಿದ್ಯಾರ್ಥಿಗಳಾದ  ಕುಶಾಲ್ ಎಸ್.ಎಮ್,  ವೈಷ್ಣವಿ ಟಿ, ಆರ್, ವಿದ್ಯಾಪಾಟೀಲ್, ಯುಕ್ತಾ ಕೆ.ಎಸ್, ಬಿ.ಅಮೃತಾ, ಹಾಗು ಕೆ.ಎಸ್ ಉಮ್ಮೆ ಹಶ್ಮಿರವರು ೫೦೦ ಅಧಿಕ ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹೇಶ್ ರವರು ಪತ್ರಿಕೆಯಲ್ಲಿ ತಿಳಿಸಿದರು.

ಈ ಬಾರಿಯ ನೀಟ್ ಪರೀಕ್ಷೆಯಲ್ಲಿ  ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದಿರುವುದರಿಂದ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಪಡೆಯಲು ಅರ್ಹತೆ ಹೊಂದಿರುವರು ಎಂದರು.

ಇದೇ ವೇಳೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಅಕಾಶ ಪಿ.ಯು. ಕಾಲೇಜು ವಿದ್ಯಾರ್ಥಿಗಳಿಗೆ ವಿಜಯನಗರ ಜಿಲ್ಲೆಯ  ಜಿಲ್ಲಾಧಿಕಾರಿಗಳಾದ ಎಂ.ಎಸ್. ದಿವಾಕರ್ ರವರು ಸನ್ಮಾನಿಸಿ ಅಭಿನಂದಸಿದ್ದಾರೆ.

ಅವರು ಮಾತನಾಡಿ ವಿದ್ಯಾರ್ಥಿಗಳು ನಿಖಕರವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸ ಮಾಡಿದಲ್ಲಿ ತಪ್ಪದೇ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಹಾಗೂ ಉತ್ತಮ ಶಿಕ್ಷಕರ  ತರಬೇತಿ ಮಾರ್ಗದರ್ಶನ  ಪ್ರೇರಣೆಯಿಂದ  ಮತ್ತಷ್ಟು ಸಾಧನೆಗೆ ಸರಳವಾಗುತ್ತದೆ ಎಂದರು,  ನೀಟ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ದತೆಗೊಳಿಸಿದ   ಶಿಕ್ಷಣ ಸಂಸ್ಥೆಗೆ ಅಭಿನಂದನೆ ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಮಹೇಶ ರವರು ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಇದು ಬಹಳ ಕಠಿಣ ಪರೀಕ್ಷೆ ಯಾಗಿದ್ದು ಅವರನ್ನು ನೀಟ್ ಗೆ ಸಜ್ಜುಗೊಳಿಸಿಲು ನಾವು ನಮ್ಮ ಆಡಳಿತ ಮಂಡಳಿ ಹೆಚ್ಚು ಶ್ರಮಪಟ್ಟಿದ್ದೇವೆ ಇದು ನಮಗೆ ಫಲಿತಾಂಶದ ಮೂಲಕ ಫಲ ನೀಡಿದೆ ಮತ್ತು ಕಾಲೇಜಿನ ಕೀರ್ತಿ ಯನ್ನು ಹೆಚ್ಚಿಸಿದೆ. ಕಾಲೇಜಿನ ನಮ್ಮ ಬೋಧನಾ ವಿಧಾನ ಉತ್ತುಮ ಶಿಕ್ಷಕರು, ಉತ್ತಮ ಸೌಲಭ್ಯಗಳು, ನಿರಂತರ ಅಭ್ಯಾಸ ,ಶಿಸ್ತು ನೈತಿಕ ಮೌಲ್ಯಗಳು  ಎಲ್ಲರಿಗೂ ಮಾದರಿಯಾಗಿವೆ, ವಿದ್ಯಾರ್ಥಿಗಳ ಕನಸ್ಸು ನಮ್ಮ ಕನಸ್ಸಾಗಿದೆ ವೈದ್ಯಕೀಯ ಪ್ರವೇಶಕ್ಕಾಗಿ ಅವಕಾಶ ಪಡೆದವರು ಇತರೆ ವಿಧ್ಯಾರ್ಥಿಗಳಿಗೆ ಮಾದರಿಯಾಗಿ ಉನ್ನತ ವ್ಯಾಸಂಗ ಮಾಡಬೇಕು ಎಂದರು. 

ಆಕಾಶ್  ಪಿಯು ಕಾಲೇಜ್ ನ  ಅಧ್ಯಕ್ಷರಾದ ಶ್ರೀ. ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ೨೦೨೩-೨೪ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ  ಅತ್ಯಂತ ಹೆಚ್ಚಿನ ಅಂಕಗಳನ್ನು ಪಡೆದು ಕಾಲೇಜಿನ, ಗುರುಗಳ ಹಾಗೂ ಪೋಷಕರ ಗೌರವವನ್ನು ಉಳಿಸಿ ಬೆಳೆಸಿರುವಂತ ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಿರ್ವಾದಗಳನ್ನು ಕೋರಿದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾನ್ನುಡಿಯಂತೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಬರುವಂತೆ ಎಲ್ಲಾ ವಿದ್ಯಾರ್ಥಿಗಳು, ಶ್ರಮಪಟ್ಟು ಓದಬೇಕೆಂದು ತಿಳಿಸಿದರು.

ಈ ವೇಳೆ  ನೀಟ್ ಲ್ಲಿ ಉತ್ತಮ ಅಂಕ ಪಡೆದ ವಿಧ್ಯಾರ್ಥಿಗಳು, ಪೋಷಕರು ಮತ್ತು ಕಾಲೇಜು ಸಿಬ್ಬಂದಿಗಳು ಇದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here