ವೀಕೆಂಡ್ ಕರ್ಫ್ಯೂ ಪೊಲೀಸ್ ಬಿಗಿ ಬಂದೋಬಸ್ತ್!!!

0
301

ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್
ಹೊಸಪೇಟೆ

ದಿನದಿಂದ ದಿನಕ್ಕೆ ಕರೋನ ವೈರಸ್ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಸರ್ಕಾರದ ಆದೇಶ ಪ್ರಕಾರ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವೀಕೆಂಡ್ ಕರ್ಫ್ಯೂ!!!

ಹೊಸಪೇಟೆಯ ಹೃದಯಭಾಗದಲ್ಲಿರುವ ಪುನೀತ್ ರಾಜಕುಮಾರ್ ವೃತ. KSRTC ಬಸ್ ನಿಲ್ದಾಣ. ಮೇನ್ ಬಜಾರ್. ದರ್ಗಾ ಜಾಮಿಯಾ ಮಸ್ಜಿದ್ ಸರ್ಕಲ್. ಹೊಸಪೇಟೆಯ ಪ್ರಮುಖ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆದಿತ್ತು.

ಅನಾವಶ್ಯಕವಾಗಿ ಹೊರಗಡೆ ಓಡಾಡುತ್ತಿರುವ ಜನರ ವಾಹನ ಜಪ್ತಿ ಮಾಡಬೇಕೆಂದು ಟೌನ್ ಪಿಎಸ್ಐ ಶ್ರೀನಿವಾಸರಾವ್ ರವರು ತಮ್ಮ ಸಿಬ್ಬಂದಿಗಳಿಗೆ ಸೂಚಿಸಿದರು.

ವಿಶ್ವ ಪರಂಪರೆಯ ಹಂಪಿ ವೀಕ್ಷಣೆಗೆ ಬಂದಿರುವ ಪ್ರವಾಸಿಗರು ಸರ್ಕಾರದ ಆದೇಶವನ್ನು ಪಾಲಿಸುತ್ತೇವೆ.ಆದರೆ,ವೀಕೆಂಡ್ ಕರ್ಫ್ಯೂ ಜಾರಿಗೊಳಿಸುವುದರಿಂದ ಎಷ್ಟರಮಟ್ಟಿಗೆ ರೋಗ ತಡೆಗಟ್ಟಬಹುದು!

ಜನಸಾಮಾನ್ಯರು ಈಗಲೂ ಮಾಸ್ಕ್ ಇಲ್ಲದೆ ಮನೆಯಿಂದ ಹೊರಗಡೆ ಬರುತ್ತಿದ್ದಾರೆ ಮತ್ತು ಮುಖ್ಯವಾದ ವಿಷಯ ಏನೆಂದರೆ ಸರ್ಕಾರದ ಆದೇಶದ ಪ್ರಕಾರ ಆರೋಗ್ಯ ಇಲಾಖೆಯಿಂದ ಕೋವಿಡ್ ವ್ಯಾಕ್ಸಿನ್ ಮತ್ತು ಕೋವಿಡ್ ಶೀಲ್ಡ್ ಎರಡು ವ್ಯಾಕ್ಸಿನ್ ಡೊಸ್ ಹಾಕಿಸಿದ್ದರು ರೋಗ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಅಂದರೆ ಇದರ ಅರ್ಥವೇನು ಅಂತ ಜನಸಾಮಾನ್ಯರು ಮತ್ತು ಪ್ರವಾಸಿಗರ ಮನೆಮಾತಾಗಿತ್ತು!!!

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here