ವಿರಾಟ್ 4 ವರ್ಷ ಮಗುವಿನ ಸಾವಿಗೆ ನ್ಯಾಯಕ್ಕಾಗಿ 35 ನಗರಸಭೆ ಸದಸ್ಯರ ಹೋರಾಟ,!!

0
320
oplus_1024

ವಿಜಯನಗರ :ಜಾಗೃತಿ ಬೆಳಕು,ಬ್ರೇಕಿಂಗ್

ನಗರದ 35 ವಾರ್ಡ್ ನಗರಸಭೆ ಸದಸ್ಯರು ಏಕಕಾಲಕ್ಕೆ ನಗರಸಭೆ ಮುಂದೆ ಪ್ರತಿ ಭಟನೆ ಹಮ್ಮಿಕೊಂಡಿದ್ದರು.

ಚರಂಡಿಗೆ ಬಿದ್ದು 4 ವರ್ಷದ ಮಗು ಸಾವು. ಅಧಿಕಾರಿಗಳ ನಿರ್ಲಕ್ಷ ಸಾರ್ವಜನಿಕರು ಆಕ್ರೋಶ.

ವಿಜಯನಗರ ಜಿಲ್ಲೆ, ಹೊಸಪೇಟೆ ತಾಲ್ಲೂಕಿನ ನಗರಸಭೆ ವ್ಯಾಪ್ತಿಗೆ ಬರುವ 7ನೇ ವಾರ್ಡಿನ ಅನಂತಶಯನ ಗುಡಿಯಲ್ಲಿ ನಾಲ್ಕು ವರ್ಷದ ಬಾಲಕ ವಿರಾಟ್ 4 ವರ್ಷ ಶುಕ್ರವಾರ ಮಧ್ಯಾಹ್ನ ತೆರದ ಚರಂಡಿಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದ್ದು ಈ ಸಾವಿಗೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ ಮತ್ತು ಜಾಗದ ಮಾಲೀಕರೆ ಕಾರಣ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತಪಟ್ಟ ಮಗು ವಿರಾಟ್ 4 ವರ್ಷ ಇಲ್ಲಿನ ಅಂಗನವಾಡಿ ಶಾಲೆಗೆ ಹೋಗಿ ಬಂದು ಮನೆಯಲ್ಲಿ ಊಟ ಮಾಡಿದ ನಂತರ ಸುಮಾರು ಮಧ್ಯಾಹ್ನ 3 ಗಂಟೆಗೆ ಮನೆ ಹತ್ತಿರ ಆಟವಾಡಲು ಹೋದ ಸಂದರ್ಭದಲ್ಲಿ ಮನೆಯ ಮುಂದಿದ್ದ ಖಾಸಗಿ ಸ್ಥಳದಲ್ಲಿದ್ದ ಅಗಲವಾದ ಗುಂಡಿಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.
ಮಧ್ಯಾಹ್ನ 3 ಗಂಟೆಯಿಂದ ಮಗು ವಿರಾಟ್ ಕಾಣದೆ ಇರುವುದರಿಂದ ಮಗುವಿನ ತಾಯಿ ಹರ್ಷಿತಾ ಜೋಗಿ ತಂದೆ ಮಚ್ಚೇಂದ್ರನಾಥ್ ಜೋಗಿಯ ಗಮನಕ್ಕೆ ಬಂದಿದ್ದು ಈ ವೇಳೆ ಮಗುವನ್ನು ಎಲ್ಲಾ ಕಡೆ ಹುಡುಕಾಡಿದ್ದಾರೆ ಕೊನೆಗೆ ಮಗುವಿನ ತಂದೆಯ ಸ್ನೇಹಿತ ಅಗ್ನಿಶಾಮಕ ದಳಕ್ಕೆ (ಫೈಯರ್ ಆಫೀಸಿಗೆ) ಕರೆ ಮಾಡಿ ನಡೆದ ವಿಷಯ ಬಗ್ಗೆ ತಿಳಿಸಿದಾಗ ಅಧಿಕಾರಿಗಳು ರಾತ್ರಿ 8:30 ಕ್ಕೆ ಬಂದು ಚರಂಡಿಯಲ್ಲಿ ಹುಡುಕಿದಾಗ ಮಗು ಹೆಣವಾಗಿ ಪತ್ತೆಯಾಗಿದೆ.

ಜಾಗದ ಮಾಲೀಕನಿಗೆ ಎಷ್ಟೋ ಬಾರಿ ಹೋಗಿ ಚರಂಡಿ ಮುಚ್ಚಲು ಮನವಿ ಮಾಡಿಕೊಂಡರು ಕೂಡ ಇಂದು ನಾಳೆ ಎನ್ನುವ ವಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಜಾಗದ ಮಾಲೀಕ ದಳವಾಯಿ ಕೊನೆಗೆ ಗುಂಡಿ ಮುಚ್ಚಲೇ ಇಲ್ಲ ನಂತರ ವಾರ್ಡಿನ ಸದಸ್ಯರಾದ ಕಣಕಮ್ಮ ಗಂಡ ಎರಿಸ್ವಾಮಿ ಇವರಿಗೆ ತಿಳಿಸಿದರೆ ಇವರು ಮುಚ್ಚಲು ಪ್ರಯತ್ನಿಸಿದಾಗ ಅಡ್ಡಪಡಿಸಿದ ಜಾಗದ ಮಾಲೀಕ ನಮಗೆ ಯಾರ ಸಹಾಯವೂ ಬೇಡ ಎಂದು ವಾರ್ಡಿನ ಸದಸ್ಯರಿಗೆ ಹೇಳಿದ್ದಾನೆ ಹಾಗಾಗಿ ದುರ್ಘಟನೆ ನಡೆದಿದೆ. ನಮ್ಮ ಮಾತು ಕೇಳಿ ಚರಂಡಿ ಮುಚ್ಚಿದ್ದರೆ ಭವಿಷ್ಯದ ಮಗುವಿನ ಜೀವ ಉಳಿಯುತ್ತಿತ್ತುಈ ದುರ್ಘಟನೆಗೆ ನೇರ ಹೊಣೆ ಜಾಗದ ಮಾಲೀಕ ದಳವಾಯಿ ಎಂದು ಕಣ್ಣೀರಿಟ್ಟರು.

ಮಗು ಮರಣ ಹೊಂದಿ ಎರಡು ದಿನವಾದರೂ ಜಾಗದ ಮಾಲೀಕ ದಳವಾಯಿ ಅಲ್ಲೇ ಇದ್ದರೂ ಸ್ಥಳಕ್ಕೆ ಬಾರದೇ ಇರುವುದು ಖಂಡನೆಯ ಆಟವಾಡಲು ಹೋಗಿ ಅಗಲ ಚರಂಡಿಗೆ ಬಿದ್ದು ಸಾವನ್ನಪ್ಪಿದ ವಿರಾಟ್ ಹೆಸರಿನಲ್ಲಿ ಮಕ್ಕಳಿಗಾಗಿ
ಆಟಿಕೆ ಸಾಮಾನುಗಳಿರುವ ಉದ್ಯಾನವನ ಮಾಡಬೇಕೆಂದು ಸಾರ್ವಜನಿಕರು ಮತ್ತು ನಗರ ಸಭೆ ಸರ್ವಸದಸ್ಯರು ಇಂದು ನಗರ ಸಭೆ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಪ್ರತಿಭಟನೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ ಒದಗಿಸಲಾಗಿತ್ತು.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here