ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ವಾಗ್ದಾಳಿ!!

0
430

ವಿಜಯನಗರ ಜಿಲ್ಲೆ

ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ವಿಧಾನ ಪರಿಷತ್ ಚುನಾವಣೆಯ ಪ್ರಚಾರಕ್ಕಾಗಿ ಆಗಮಿಸಿದ ಕೆ.ಸಿ. ಕೊಂಡಯ್ಯನವರು ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ವಿಧಾನ ಪರಿಷತ್ ಚುನಾವಣೆಗೆ ಮತದಾನದ ಹಕ್ಕನ್ನ ಚಲಾಯಿಸುವ ಅವಕಾಶವನ್ನು ಸಂಸತ್ತಿನ ಅದಿವೇಶನದಲ್ಲಿ ಆಗಿನ ಪ್ರಧಾನಿ ನರಸಿಂಹರಾವ್ ಅವರನ್ನು ಮನವಲಿಸಿ ಜಾರಿಗೊಳಿಸಲಾಯಿತು. ಮತ್ತು ಗ್ರಾಮ ಪಂಚಾಯಿತಿಯಲ್ಲಿ ಪಿ.ಡಿ.ಓ.ಗಳ ಅಧಿಕಾರ ದುರ್ಬಳಕೆಯನ್ನು ತಡೆಯಲು ತಾವುಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಮತ ನೀಡುವಂತೆ ಕೇಳಿಕೊಂಡರು.

ಅನಂದ್ ಸಿಂಗ್ ಹಾಗೂ ಶ್ರೀರಾಮುಲು ಅವರಿಗೆ ತಾಕತ್ತಿದ್ದರೆ ಕೊಂಡಯ್ಯ ಅವರನ್ನು ಸೋಲಿಸಲಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸವಾಲು ಹಾಕಿದರು. ಕೂಡ್ಲಿಗಿ ಪಟ್ಟಣದ ವಾಸವಿ ಶಾಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯಸಭಾ ಸದಸ್ಯರಾದ ನಾಸೀರ್ ಹುಸೇನ್ ಮಾತನಾಡಿ ಕೃಷಿ ಕಾಯಿದೆ ವಿರುದ್ಧ ಪ್ರತಿಭಟನೆಮಾಡಿದಾಗ ನಾನು ಮತ್ತು ನನ್ನ ಜೊತೆ ಎಂಟು ಸಂಸದರನ್ನ ಸಂಸತ್ ನಿಂದ ಹೊರಹಾಕಿದರು ಅದೇ ಬಿಜೆಪಿ ಸರ್ಕಾರವು ಇಂದು ಅವಮಾನಕ್ಕೆ ಇಡಾಗಿ ಆ ಕಾಯಿದೆ ಗಳನ್ನ ವಾಪಾಸ್ ತೆಗೆದುಕೊಂಡಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ರಮೇಶ್ ಕುಮಾರ್ ಮಾತನಾಡಿ ಗ್ರಾಮ ಪಂಚಾಯತ್ ಸದಸ್ಯರುಗಳು ತಮ್ಮ ಅಧಿಕಾರವನ್ನು ಹೇಗೆ ಚಲಾಯಿಸಬೇಕು ಎನ್ನುವ ಬಗ್ಗೆ ಮಾಹಿತಿ ಕೊಟ್ಟರು. ಮತ್ತು ಕೆ.ಸಿ.ಕೊಂಡಯ್ಯನವರಿಗೆ ತಮ್ಮ ಮತವನ್ನು ಹಾಕಿದರೆ ಹಳ್ಳಿಗಳಲ್ಲಿ ಗ್ರಾಮಗಳ ಸದಸ್ಯರ ಧ್ವನಿಯಾಗಿ ತಮ್ಮ ಸಮಸ್ಯೆಗಳನ್ನ ಬಗೆಹರಿಸುವ ಶಕ್ತಿಯಾಗಿ ಕೆಲಸಮಾಡುತ್ತಾರೆ ಎಂದು ಹೇಳಿದರು. ಮತ್ತು ಸಭೆಯಲ್ಲಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವಿನಾಯಕ ಶೆಟ್ಟರ್ ಕಾಂಗ್ರೆಸ್ ಹಿರಿಯ ಮುಖಂಡರಾದ ಗುಜ್ಜಲ ನಾಗರಾಜ ಮತ್ತು ಎಐಸಿಸಿ ST cellನ ಸದಸ್ಯರಾದ ಗುಜ್ಜಲ ರಘು ಅವರು ಕಾಂಗ್ರೆಸ್ ಹಿರಿಯ ಮುಖಂಡರಾದ ದೀಪಕ್ ಸಿಂಗ್ ಅವರು ಹುಡಾ ಮಾಜಿ ಅಧ್ಯಕ್ಷರಾದ ಸಿದ್ದನಗೌಡರವರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಎಂ.ಹಾಲಪ್ಪ ನವರು
ಕಲ್ಯಾಣ ಕರ್ನಾಟಕ ಭಾಗದ ಸಾಮಾಜಿಕ ಜಾಲತಾಣದ ಉಸ್ತುವಾರಿಯಾದ ನಿಂಬಗಲ್ ರಾಮಕೃಷ್ಣರವರು ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ಹೆಚ್. ಎನ್.ಎಫ್.ಇಮಾಮ್ ನಿಯಾಜಿಯವರು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ಹೇಮಣ್ಣನವರು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ವಿ.ಸೋಮಪ್ಪ ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವಿಭಾಗದ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಪಿನಾಯಕನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರು ಕೆ.ತಿಪ್ಪೇಸ್ವಾಮಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಭರತ್ ಕುಮಾರ್ ಅವರು ವೀರಭದ್ರ ನಾಯಕ ಅಂಕ್ಲೇಶ ನಾಯಕ ಪಿ ಕೆ ಹಳ್ಳಿ. ಮತ್ತು ಪಾಪಿನಾಯಕನಹಳ್ಳಿ ಗಾದಿಗನೂರು ಬೈಲುವದ್ದಿಗೇರಿ ಕಲ್ಲಹಳ್ಳಿ ಸೀತರಾಂ ತಾಂಡ ನಾಗೇನಹಳ್ಳಿ ಹೊಸೂರು ಮಲಪನಗುಡಿ ಗಾಮ ಪಂಚಾಯತ್ ಸದಸ್ಯರುಗಳು ಅಧ್ಯಕ್ಷರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here