ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನಕೊಡಬೇಕು ದೇಶದ ಬೆನ್ನೆಲುಬಾಗಬೇಕು :- ಎಸ್ಪಿ ಶ್ರೀಹರಿಬಾಬು,

0
78
oplus_0

ಹೊಸಪೇಟೆ :-ಜಾಗೃತಿ ಬೆಳಕು ನ್ಯೂಸ್

 ಜೂನ್ , 26. ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಬಕಾರಿ ಇಲಾಖೆ ಸಂಯುಕ್ತಾಶ್ರಯದಲ್ಲಿ  ಜನಜಾಗೃತಿ ಜಾಥಾ
ಮಾದಕ ವಸ್ತು ಸೇವನೆ ಮಾಡುವುದಿಲ್ಲ ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಸಮುದಾಯಕ್ಕೆ ಜಾಗೃತಿ ಮೂಡಿಸುತ್ತೇವೆ
ಪ್ರತಿಜ್ಞಾ ವಿಧಿ ಬೋಧಿಸಿ ಹಸಿರು ನಿಶಾನೆ ತೋರಿಸುವ ಜನಜಾಗೃತಿ ಜಾಥಾಕ್ಕೆ

ವಿಜಯನಗರ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಲ್.ಶ್ರೀಹರಿಬಾಬು  ರವರು ನಗರದ ಪುನೀತ್ ರಾಜಕುಮಾರ್ ವೃತ್ತದಲ್ಲಿ  ಚಾಲನೆ  ನೀಡಿದರು.
ನಗರದ ಪುನೀತ್ ರಾಜ್ ಕುಮಾರ ವೃತ್ತದಿಂದ ಪ್ರಾರಂಭವಾಗಿ ನಗರದ ನಾನಾ  ಭಾಗದಲ್ಲಿ ಸಂಚರಿಸಿದ ಜಾಥ
ಮಾದಕ ವಸ್ತುಗಳನ್ನು ಸೇವನೆ ಹಾಗೂ ಕಳ್ಳಸಾಗಣೆ ಮಾಡೋದು ಅಪರಾಧ
ಸಾರ್ವಜನಿಕರು ಮಾದಕ ವಸ್ತುಗಳ ಸೇವನೆ ಮಾಡಬಾರದು ಅಂತಾ ನಾಮಫಲಕಗಳನ್ನು ಹಿಡಿದು ಜಾಗೃತಿ ಜಾಥಾದಲ್ಲಿ ನಾನಾ  ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

ವಿಜಯನಗರ  ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಣೆ ವಿರೋಧಿ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ವಿದ್ಯಾಲಯದಲ್ಲಿ ಓದಕ್ಕೆ ಬರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಬಗ್ಗೆ ಗಮನಕೊಟ್ಟು ಉನ್ನತ ಮಟ್ಟದಲ್ಲಿ ವಿದ್ಯಾಭ್ಯಾಸ ಮಾಡುವ ಮೂಲಕ ದೇಶದ ಬೆನ್ನೆಲುಬಾಗಿ ಕೆಲಸ ಮಾಡಬೇಕೆ ಎಂದು  ವಿದ್ಯಾರ್ಥಿಗಳಲ್ಲಿ ಮದುಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ವಿಜಯನಗರ ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್. ಶ್ರೀಹರಿಬಾಬು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here