ವಿಜಯನಗರ ಜಿಲ್ಲೆ ಹೊಸಪೇಟೆ ಯುಜಿಡಿ ಕೆಲಸದ ನೆಪದಲ್ಲಿ ಸಿಸಿ ರೋಡ್ ಹಾಳಾಗುತ್ತಿವೆ..!!

0
269

ವಿಜಯನಗರ ಜಿಲ್ಲೆ ಹೊಸಪೇಟೆ ಯುಜಿಡಿ ಕೆಲಸದ ನೆಪದಲ್ಲಿ ಸಿಸಿ ರೋಡ್ ಹಾಳಾಗುತ್ತಿವೆ..!!

ನಗರದ ಮುಖ್ಯ ರಸ್ತೆ ಬಸ್ ಡಿಪೋ ಇಂದ ಚಿತ್ರಕೆರೆಯ ಮುದ್ದುಪ್ಪನ ತಾತಾ ಸರ್ಕಲ್ ತನಕ ರಸ್ತೆಯ ಮಧ್ಯೆ UGD ಕೆಲಸ ಕಾಮಗಾರಿ ನಡೆಯುತಿದು ಕಾಮಗಾರಿಗೆ ತುಂಬಾ ವಿಳಂಬ ಆಗುತ್ತದೆ ಎಂದು ಜನಸಾಮಾನ್ಯರು ತುಂಬ ಆಕ್ರೋಶಗೊಂಡಿದ್ದಾರೆ…
ರಸ್ತೆ ಮಧ್ಯೆ 10 ರಿಂದ 20 ಅಡಿ ಆಳವಾಗಿ ತೆಗ್ಗು ಗುಂಡಿಗಳನ್ನು ತೆಗೆದುಬಿಟ್ಟು 15 ರಿಂದ 20 ದಿನಗಳು ಕಳೆದರು ನಗರಸಭೆ ಸದಸ್ಯರಾಗಲಿ.. ನಗರಸಭೆ ಅಧಿಕಾರಿಗಳಾಗಲಿ ಸಂಬಂಧಪಟ್ಟ ಗುತ್ತಿಗೆದಾರರ ಆಗಲಿ ಇತ್ತ ಕಡೆ ಬರೋದಿಲ್ಲ….


ಮುಖ್ಯರಸ್ತೆ ಇರುವುದರಿಂದ ದ್ವಿಚಕ್ರ ವಾಹನ ಓಡಾಟ ಹೆಚ್ಚಾಗಿರುತದೆ ಅನಾಹುತ ಆಗುವ ಸಂಭವ ಹೆಚ್ಚಾಗಿರುತ್ತದೆ ಸಾಮಾನ್ಯ ಜನರಿಗೆ ತುಂಬಾ ಕಷ್ಟ ಅನುಭವಿಸುತ್ತಿದ್ದೇವೆ ಎಂದು ಹಿಡಿಶಾಪ ಹಾಕಿದರು..

ಸಂಬಂಧಪಟ್ಟ ನಗರಸಭಾ ಸದಸ್ಯರು ನಗರಸಭೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಇದನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ಮಾಧ್ಯಮದ ಮುಂದೆ ಜನಸಾಮಾನ್ಯರು ಹೇಳಿಕೊಂಡರು…..

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here