ವಿಜಯನಗರ ಜಿಲ್ಲೆಯಲ್ಲಿ ಹೆಚ್ಚೆಚ್ಚು ರಕ್ತದಾನ ಶಿಬಿರಗಳು ಆಯೋಜಿಸಿ:ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್!

0
210

ಹೊಸಪೇಟೆ ಬ್ರೇಕಿಂಗ್ ನ್ಯೂಸ್ (ಜಾಗೃತಿ ಬೆಳಕು)

ರಕ್ತ ಸುರಕ್ಷತಾ ಸಮಿತಿ ಸಭೆ
ವಿಜಯನಗರ ಜಿಲ್ಲೆಯಲ್ಲಿ ಹೆಚ್ಚೆಚ್ಚು ರಕ್ತದಾನ ಶಿಬಿರಗಳು ಆಯೋಜಿಸಿ:ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್!

ವಿಜಯನಗರ ಜಿಲ್ಲೆಯಲ್ಲಿ ರಕ್ತ ಸಂಗ್ರಹ ಕೊರತೆ ಇರುವುದು ಗಮನಕ್ಕಿದ್ದು, ಆರೋಗ್ಯ ಇಲಾಖೆ ವಿಶೇಷ ಮುತುವರ್ಜಿ ವಹಿಸಿ ಹೆಚ್ಚೆಚ್ಚು ರಕ್ತದಾನ ಶಿಬಿರಗಳನ್ನು ಜಿಲ್ಲೆಯಲ್ಲಿ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಕ್ತ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 15ರಿಂದ 16ಲಕ್ಷ ಜನಸಂಖ್ಯೆ ಹೊಂದಿದ್ದು,ಶೇ.1ರಷ್ಟು ರಕ್ತ ಸಂಗ್ರಹವಿರಬೇಕಿದೆ;ಆದರೇ ಅದರ ಪ್ರಮಾಣ ತೀರಾ ಕಡಿಮೆ ಇದ್ದು,ಅದನ್ನು ಹೆಚ್ಚಿಸಲು ವಿಶೇಷ ಮುತುವರ್ಜಿ ವಹಿಸಬೇಕು. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಾರ್ಷಿಕ 8 ರಕ್ತದಾನ ಶಿಬಿರಗಳು ಕಡ್ಡಾಯ;ಅದಕ್ಕಿಂತ ಹೆಚ್ಚು ಶಿಬಿರಗಳು ಸಹ ಮಾಡಬಹುದಾಗಿದೆ. ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳು ಹೆಚ್ಚೆಚ್ಚು ರಕ್ತದಾನ ಶಿಬಿರ ಮಾಡಬೇಕು. ತಿಂಗಳಲ್ಲಿ ಒಂದು ದಿನ ಕಡ್ಡಾಯವಾಗಿ ರಕ್ತದಾನ ದಿನ ಆಂದೋಲನ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ವಿಜಯನಗರ ಜಿಲ್ಲೆಯಲ್ಲಿ ವಿವೇಕಾನಂದ ಬ್ಲಡ್ ಬ್ಯಾಂಕ್, ಬಲ್ಡೋಟಾ ಮತ್ತು ಚಿರಂಜೀವಿ ಬ್ಲಡ್ ಬ್ಯಾಂಕ್‍ಗಳಿದ್ದು, ಈ ಬ್ಲಡ್ ಬ್ಯಾಂಕ್‍ಗಳು ಪ್ರತಿ ಗ್ರಾಪಂಗಳಿಗೆ ಮತ್ತು ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ರಕ್ತದ ಯೂನಿಟ್‍ಗಳ ಸಂಗ್ರಹಕ್ಕೆ ಮುಂದಾಗಬೇಕು;ತಮಗೆ ಬೇಕಾದ ಅಗತ್ಯ ಸಹಾಯ ಸಹಕಾರಗಳನ್ನು ಜಿಲ್ಲಾಡಳಿತ ಒದಗಿಸಲಿದೆ ಹೇಳಿದ ಅವರು ಮೂರು ಬ್ಲಡ್ ಬ್ಯಾಂಕ್‍ಗಳಿಗೂ ರಕ್ತದಾನ ಶಿಬಿರ ಏರ್ಪಡಿಸುವುದಕ್ಕೆ ಸಂಬಂಧಿಸಿದಂತೆ ವಿವಿಧ ತಾಲೂಕುಗಳನ್ನು ಹಂಚಿಕೆ ಮಾಡಿದರು.
ಬ್ಲಡ್ ಬ್ಯಾಂಕ್‍ಗಳು ಕಡ್ಡಾಯವಾಗಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು;ಒಂದು ವೇಳೆ ಉಲ್ಲಂಘಿಸಿದಲ್ಲಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ಗರ್ಭೀಣಿಯರಿಗೆ ರಕ್ತಭಂಡಾರ ಕೇಂದ್ರಗಳು ರಕ್ತದ ಯೂನಿಟ್ ಒದಗಿಸುವ ಸಂದರ್ಭದಲ್ಲಿ ನಿಗದಿಪಡಿಸಿದ ದರವನ್ನೇ ವಸೂಲಿ ಮಾಡಲು ಅವರು ಸೂಚಿಸಿದರು.
ಕೂಡ್ಲಿಗಿ,ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹಡಗಲಿ, ಹರಪನಳ್ಳಿ ಸಾರ್ವಜನಿಕ ಆಸ್ಪತ್ರೆಗಳ ರಕ್ತ ಶೇಖರಣಾ ಘಟಕಗಳ ಪರವಾನಿಗೆ ನವೀಕರಿಸುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಇದೇ ಸಂದರ್ಭದಲ್ಲಿ ನೀಡಿದರು.
ರೆಡ್‍ಕ್ರಾಸ್ ವಿಜಯನಗರ ಜಿಲ್ಲಾ ಘಟಕದ ಗೌರವಾಧ್ಯಕ್ಷರನ್ನಾಗಿ ಇದೇ ಸಂದರ್ಭದಲ್ಲಿ ಡಾ.ಸೋಮಶೇಖರ ಅವರನ್ನು ಸಮಿತಿ ಆಯ್ಕೆ ಮಾಡಿತು,


ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here