ವಿಜಯನಗರ ಜಿಲ್ಲೆಯಲ್ಲಿ ಅಧಿಕಾರಿಗಳ ನಿರ್ಲಕ್ಷತೆಯಿಂದ ನಿಂತು ಹೋದ ಗಡಿಯಾರ!!!

0
269

ಹೊಸಪೇಟೆ :- ಜಾಗೃತಿ ಬೆಳಕು, (ಬಿಗ್ ಬ್ರೇಕಿಂಗ್)

ಮಾ,4. ನಮ್ಮ ಮನೆಯಲ್ಲಿ ಗಡಿಯಾರ ನಿಂತು ಹೋದರೆ ನಾವು ಅದನ್ನು ಅಪಶಕುನ ಎಂದು ಹೇಳುತ್ತೇವೆ,
ಇದರ ಅರ್ಥ ನಮ್ಮ ಕೆಲಸ ಕೆಲಸ ಕಾರ್ಯಗಳಲ್ಲಿ ತೊಡಕು ಉಂಟಾಗುವ ಸೂಚನೆಯನ್ನು ಕೊಡುತ್ತದೆ ಅದನ್ನು ಅರ್ಥ ಮಾಡಿಕೊಂಡು ನಾವು ಅದೇ ಕ್ಷಣ ಆ ಗಡಿಯಾರವನ್ನು ಸರಿಪಡಿಸಿ ಯಥಾರೀತಿ ಅದೇ ಜಾಗದಲ್ಲಿ ಗೋಡೆಗೆ ಹಾಕುತ್ತೇವೆ ಆದರೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೃದಯ ಭಾಗದಲ್ಲಿರುವ ರಾಮ ಟಾಕೀಸ್ ಸರ್ಕಲ್ ಎಂದೆ ಹೆಸರಾದಂತಹ ನೂತನವಾಗಿ ವೀರ ಮದಕರಿ ನಾಯಕ ವೃತ್ತವೆಂದು ನಾಮಕರಣವಾಗಿದ್ದು ಈ ವೃತ್ತದಲ್ಲಿರುವ ಸುಮಾರು ವರ್ಷದ ಗಡಿಯಾರ ಸ್ಥಂಬವು ಇದ್ದು ಇಲ್ಲದಂತಾಗಿದೆ.

ಈ ಗಡಿಯಾರ ಸ್ಥಂಬಕ್ಕೆ ನಾಲ್ಕು ದಿಕ್ಕಿನಲ್ಲಿ ಗಡಿಯಾರವಿದ್ದು ಕಾರ್ಯನಿರ್ವಹಿಸುತ್ತಿಲ್ಲ ಸಾರ್ವಜನಿಕರ ಹಿತಾಸಕ್ತಿಯಿಂದ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರು ಸಹ ಅದನ್ನು ಸರಿಪಡಿಸದೆ ನಿರ್ಲಕ್ಷ ವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಕ್ಷವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಆ ಗಡಿಯಾರವನ್ನು ಸರಿಪಡಿಸಿ ಮುಂದಿನ ದಿನಮಾನಗಳಲ್ಲಿ ಈ ತರಹದ ಆಯಿತಕರ ಘಟನೆ ನಡೆದಂತೆ ನೋಡಿಕೊಳ್ಳಬೇಕೆಂದು ಮಾಧ್ಯಮದ ಮುಖಾಂತರ ಜನಸಾಮಾನ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here