ವಿಜಯನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದಿಸಿದರು!

0
162

ಹೊಸಪೇಟೆ: ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್)

ಅ.19 ರಂದು ಎಐಸಿಸಿ ಅಧ್ಯಕ್ಷ (Congress President) ಸ್ಥಾನಕ್ಕೆ ಅಕ್ಟೋಬರ್ 17ರಂದು ನಡೆದಿದ್ದ ಚುನಾವಣೆಯ ಫಲಿಂತಾಶ ಹೊರ ಬಿದ್ದಿದ್ದು, ಹಿರಿಯ ನಾಯಕ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅದ್ದರಿಂದ ಇಂದು ಸಂಜೆ 19-10-222 ರಂದು ಹೊಸಪೇಟೆ ನಗರದ ಜೈ ಭೀಮ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಹೊಸಪೇಟೆ ಮತ್ತು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿದ ನಂತರ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ನಂತರ ನೆಹರು ಕಾಲೋನಿ ಕೆ.ಇ.ಬಿ ಕಚೇರಿಯ ಎದುರುಗಡೆ ಇರುವ ಪಂಡಿತ್ ಜವಹರಲಾಲ್ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿನ ಮಹಾತ್ಮಾ ಗಾಂಧೀಜಿ ಯವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಗುಜ್ಜಲ ನಾಗರಾಜ, ರಾಜಶೇಖರ್ ಹಿಟ್ನಾಳ, ಹೆಚ್.ಎನ್.ಎಫ್, ಮೊಹಮ್ಮದ್ ಇಮಾನ್ ನಿಯಾಜಿ, ರಘು ಗುಜ್ಜಲ, ಎಂ.ಸಿ.ವೀರಸ್ವಾಮಿ,ನಿಂಬಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್, ಬಿ.ಮಾರೆಣ್ಣ,ನಗರಸಭೆ ಸಧ್ಯಸರಾದ ಹೆಚ್.ರಾಘವೇಂದ್ರ ಮುಖಂಡರಾದ ಬಣ್ಣಧ ಮನೆ ಸೋಮಶೇಖರ್, ಕೆ.ಬಡಾವಲಿ, ಹೆಚ್.ಯರ್ರಿಸ್ವಾಮಿ, ರಾಮಾಂಜಿನಿ, ವಿ.ಸೋಮಪ್ಪ, ಲಿಂಗಣ್ಣ ನಾಯಕ, ತಮ್ಮನಳ್ಳೆಪ್ಪ, ಮೋಹಮ್ಮದ್ ಗೌಸ್, ಕರಿ ಹನುಮಂತ, ವಿಜಯಕುಮಾರ್, ಎಸ್.ಬಿ.ಮಂಜುನಾಥ್, ಹೆಚ್.ಮಹೇಶ್, ಅಲಂ ನವಾಜ್ , ಅಲನ್ ಭಕ್ಷೀ, ಗೋಪಾಲಕೃಷ್ಣ, ಯೊಗಲಕ್ಷ್ಮೀ, ಮಂಜುಳಾ, ಪ್ರಮೌದ್ ಶೆಟ್ಟಿ, ಎಃ.ಡಿ.ಜಾವೆದ್, ಸಜ್ಜಾದ್ ಖಾನ್, ಪ್ರಫುಲ್, ಯಶವಂತ, ನಾಗೇಶ್, ರಾಘವೇಂದ್ರ, ಮತ್ತಿರರು ಇದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here