ರೈತರಿಗೆ ಸ್ಪಂದಿಸಿದ ಉಸ್ತುವಾರಿ ಸಚಿವ ಬಿ. ಝೆಡ್,,!!

0
219

ಹೊಸಪೇಟೆ, ವಿಜಯನಗರ:- ಜಾಗೃತಿ ಬೆಳಕು ನ್ಯೂಸ್

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹೊಸಪೇಟೆ ನಗರದ ವೈಕುಂಟದಲ್ಲಿರುವ ಪ್ರವಾಸಿ ಮಂದಿರದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಝಡ್ ಜಮೀರ್ ಅಹಮ್ಮದ್‌ಖಾನ್ ಹಾಗೂ ವಿಜಯನಗರ ಕ್ಷೇತ್ರದ ಶಾಸಕರಾದ ಹೆಚ್.ಆರ್.ಗವಿಯಪ್ಪರವರನ್ನು ಸನ್ಮಾನಿಸಲಾಯಿತು. ನಂತರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಹತ್ತಿರ ರೈತ ಮುಖಂಡರಾದ ಜೆ.ಕಾರ್ತಿಕ್‌ರವರು ಮಾತನಾಡಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದರು.

ಅದೇ ರೀತಿಯಾಗಿ ಈಗಾಗಲೇ ಮುಂಗಾರು ಮಳೆ ಕೈಕೊಟ್ಟಿದ್ದು ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕೆಂದು ಮತ್ತು ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದರು.

ರಾಜ್ಯದಲ್ಲಿ ಸುಮಾರು ೧೨ ಜಿಲ್ಲೆಗಳಲ್ಲಿ ರೈತರು ಭತ್ತ ಬೆಳೆಯುತ್ತಿದ್ದು ಅನ್ನಾಬಾಗ್ಯ ಯೋಜನೆಯಲ್ಲಿ ರೈತರು ಬೆಳೆದಂತಹ ಸೋನಾ ಮಸೂರಿ ಅಕ್ಕಿಯನ್ನು ಅನ್ನ ಭಾಗ್ಯ ಯೋಜನೆಯಲ್ಲಿ ನೀಡಿದರೆ ರೈತರಿಗೂ ಸ್ವಲ್ಪ ಸಹಾಯಕವಾಗುತ್ತದೆ.

ಈಗ ಪ್ರಸ್ತುತ ಭತ್ತದ ಬೆಂಬಲ ಬೆಲೆ ರೂ.೨೧೮೩/-ಒಂದು ಕ್ವಿಂಟಲ್‌ಗೆ ಇದ್ದು ಸರ್ಕಾರವು ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಮಾಡಬೇಕು. ಮತ್ತು ಅವರ್ತ ನಿಧಿ ಹತ್ತು ಸಾವಿರ ಕೋಟಿ ನಿಗಧಿ ಮಾಡಿ ಖರೀದಿ ಮಾಡಬೇಕು. ಆಗ ರೂ.೩೦೦೦/-ಗೆ ಒಂದು ಕ್ವಿಂಟಲ್ ಅಕ್ಕಿ ಸರ್ಕಾರಕ್ಕೆ ಸಿಕ್ಕಂತಾಗುತ್ತದೆ. ಸರ್ಕಾರಕ್ಕೂ ಸ್ವಲ್ಪ ವೆಚ್ಚ ಕಡಿಮೆ ಮಾಡಿದಂತಾಗುತ್ತದೆ. ಅನ್ನಭಾಗ್ಯದ ಯೋಜನೆ ಅಡಿಯಲ್ಲಿ ಎಲ್ಲರಿಗೂ ಸೋನಮಸೂರಿ ಸಿಗುವಂತಾಗುತ್ತದೆ.

ಈಗಾಗಲೇ ಬಳ್ಳಾರಿ, ದಾವಣಗೆರೆ, ಕೊಪ್ಪಳ್ಳ ಜಿಲ್ಲೆಗಳಿಂದ ರಸಗೊಬ್ಬರಗಳನ್ನು ನಮ್ಮ ಜಿಲ್ಲೆಗೆ ಬರುತ್ತಿದ್ದು, ಆದರೆ ರೈತರಿಗೆ ಸರಿಯಾದ ಸಮಯಕ್ಕೆ ರಸಗೊಬ್ಬರ ಸಿಗುತ್ತಿಲ್ಲ. ಮತ್ತು ಹೆಚ್ಚಿನ ಬೆಲೆಯಲ್ಲಿ ರಸಗೊಬ್ಬರ ರೈತರು ಖರೀದಿ ಮಾಡುತ್ತಿರುತ್ತಾರೆ. ಆದ ಕಾರಣ ಕೊಟ್ಟೂರು ತಾಲೂಕಿನ ಒಂದು ಲಕ್ಷ ಟನ್ ಸಾಮರ್ಥ್ಯವುಳ್ಳ ರೈಲ್ವೆ ರೇಕ್ ಪಾಯಿಂಟ್, ಗೋಡಾನ್, ಎಲ್ಲಾ ತರಹದ ಹವಮಾನಕ್ಕೆ ತಕ್ಕಂತೆ ಗೂಡ್ಸ್ಸೆಡ್ ಮತ್ತು ಪ್ಲಾಟ್ ನಿರ್ಮಾಣ ಮಾಡಬೇಕು. ಇದರಿಂದ ವಿಜಯನಗರ ಜಿಲ್ಲೆಯ ತಾಲೂಕುಗಳಿಗೆ ಈ ರೇಕ್‌ಪಾಯಿಂಟ್‌ನಿAದ ಮಧ್ಯ ಭಾಗವಾಗಿರುತ್ತದೆ. ಮತ್ತು ರಸಗೊಬ್ಬರವು ರೈತರಿಗೆ ಸರಿಯಾದ ಸಮಯಕ್ಕೆ ಸಿಗುತ್ತದೆ.

ಹೊಸಪೇಟೆಯಲ್ಲಿ ಸುಮಾರು ೫ ಲಕ್ಷ ಟನ್ ಕಬ್ಬನ್ನು ರೈತರು ಬೆಳೆಯುತ್ತಿದ್ದು, ಆದರೆ ಇಲ್ಲಿ ಸ್ಥಳೀಯವಾಗಿ ಸಕ್ಕರೆ ಕಾರ್ಖಾನೆ ೮ ವರ್ಷಗಳಿಂದ ಮುಚ್ಚಿದ್ದು, ಕಾರಣ ಇಲ್ಲಿ ಸಣ್ಣ, ಅತೀ ಸಣ್ಣ ರೈತರು ಕೃಷಿ ಮಾಡುತ್ತಿದ್ದು ಇಲ್ಲಿ ಬೆಳೆದಂತಹ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಪೂರೈಸಲು ಕಷ್ಟವಾಗುತ್ತದೆ. ಮತ್ತು ಟ್ರಾನ್ಸ್ಪೋರ್ಟಿಂಗ್ ಚಾರ್ಜ್ ದುಬಾರಿಯಾಗಿರುವುದರಿಂದ ಸರ್ಕಾರವು, ಸರ್ಕಾರಿ ಸೌಮ್ಯದಲ್ಲಾಗಲಿ ಅಥವಾ ಸಹಕಾರ ಸಹಬಾಗಿತ್ವದಲ್ಲಾಗಲಿ ಹೊಸಪೇಟೆಯಲ್ಲಿ ನೂತನ ಸಕ್ಕರೆ ಕಾರ್ಖಾನೆಯನ್ನು ನಿರ್ಮಾಣ ಮಾಡಬೇಕೆಂದು ಹೇಳಲಾಯಿತು.

ಇದಕ್ಕೆ ಸ್ಪಂಧಿಸಿದ ಸಚಿವರು ನಿಮ್ಮ ಎಲ್ಲಾ ವಿಚಾರಗಳನ್ನು ಮಾನ್ಯ ಮುಖ್ಯಮಂತ್ರಿಗಳ ಹತ್ತಿರ ಮಾತನಾಡುತ್ತೇನೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರವು ತೀರ್ಮಾನ ತೆಗೆದುಕೊಳ್ಳುತ್ತದೆಂದರು.

ಈ ಸಂದರ್ಭದಲ್ಲಿ ಜಿ.ಕಾರ್ತಿಕ್ ಹೆಚ್.ಜಿ.ಮಲ್ಲಿಕಾರ್ಜುನ, ಕೆ.ಹೇಮರೆಡ್ಡಿ, ಮಹಾಂತೇಶ್.ಕೆ.ಹೆಚ್. ಹನುಮಂತಪ್ಪ, ನಲ್ಲಪ್ಪ, ದ್ರಾಕ್ಷಾಯಣಮ್ಮ, ಸರೋಜಮ್ಮ, ಸುಶೀಲಮ್ಮ ನಾಗರಾಜ್, ಜಿ.ಮಲ್ಲಪ್ಪ, ಗಿಡ್ಡಯ್ಯ, ಹನುಮಂತಪ್ಪ, ಇನ್ನು ಹಲವು ರೈತ ಮುಖಂಡರು ಇದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here