ರಾಹುಲ್ ಗಾಂಧಿ ಅವರು ಪುನೀತ್ ರಾಜಕುಮಾರ್ ರವರ ಭಾವಚಿತ್ರವನ್ನು ನೋಡಿ ಮಾಡಿದ್ದೇನು!

0
350

ಹೊಸಪೇಟೆ: ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್)

ಕಾಂಗ್ರೆಸ್ ನಾಯಕ ಶ್ರೀ ರಾಹುಲ್ ಗಾಂಧಿ ಅವರು ಭರತ್ ಜೋಡು ಪಾದಯಾತ್ರೆ ಕನ್ಯಾಕುಮಾರಿ ಯಿಂದ ಕಾಶ್ಮೀರವರಿಗೆ ಕೈಗೊಂಡುದು. ವಿಶೇಷವಾಗಿ ಹೊಸಪೇಟೆಯಿಂದ
ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾದ ರೋಷನ್ ಜಮೀರ್ ಚಿತ್ತವಾಡಗಿ ನಿವಾಸಿ ಹೊಸಪೇಟೆ ಅವರು ಬಳ್ಳಾರಿಯಲಿ ನಡೆದ ಪಾದಯಾತ್ರೆಯಲ್ಲಿ ಭಾಗಿಯಾಗಿ ಹೊಸಪೇಟೆಯ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ ವತಿಯಿಂದ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಕೊಡುವ ಮುಖಾಂತರ ಭಾರತ್
ಜೋಡೋ ಯಾತ್ರೆಯನ್ನು ಬೆಂಬಲಿಸಿದರು.
ರಾಹುಲ್ ಗಾಂಧಿ ಅವರು ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಸ್ವೀಕರಿಸುತ್ತಾ ಗೌರವಿಸುತ್ತಾ ಕೃತಜ್ಞತೆಯನ್ನು ಸಲ್ಲಿಸಿದರು.
ರೋಷನ್ ಜಮೀರ್ ರವರು ಪ್ರಜಾವಾಹಿನಿ ಜೊತೆ ಮಾತನಾಡಿ ಪುನೀತ್ ರಾಜಕುಮಾರ್ ರವರು ನನ್ನ ಪ್ರಾಣ ಅವರ ಒಂದು ಭಾವಚಿತ್ರವನ್ನು ರಾಹುಲ್ ಗಾಂಧಿ ಅವರಿಗೆ ಕೊಡುಗೆ ರೂಪದಲ್ಲಿ ಕೊಡಬೇಕೆಂದು ಅನ್ಕೊಂಡಿದ್ದೆ,
ಮಹಾನ್ ಗಣ್ಯತಿ ಗಣ್ಯರು ಅವರ ಹತ್ತಿರ ಹೋಗಕ್ಕೆ ಆಗಲಿಲ್ಲ ಅಂತದರಲ್ಲಿ ಪುನೀತ್ ರಾಜಕುಮಾರ್ ರವರ ಭಾವಚಿತ್ರವನ್ನು ಎತ್ತಿ ಹಿಡಿದಿರುವುದನ್ನು ನೋಡಿದ ರಾಹುಲ್ ಗಾಂಧಿ ರವರು ಕೈ ಸೊನ್ನೆ ಯಿಂದ ನನ್ನನ್ನು ಕರೆದು ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಸ್ವೀಕರಿಸಿ ಕೃತಜ್ಞತೆಯನ್ನು ಸಲ್ಲಿಸಿದರು ಎಂದು ರೋಷನ್ ರವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ವರದಿ:-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here