ರಾಜ್ಯದಲ್ಲಿ ಬಿಟ್-ಕಾಯಿನ್ ಹಾವಳಿ!!ಬಿಟ್-ಕಾಯಿನ್ ಅಂದರೇನು?

0
307

ಬೆಂಗಳೂರು

ಕೆಲ ದಿನಗಳ ಹಿಂದಷ್ಟೇ ಬಿಟ್ಕಾಯಿನ್ ಕರಾಳಮುಖವನ್ನ ರಾಷ್ಟ್ರೀಯ ಮಾಧ್ಯಮಗಳು ರಿವೀಲ್ ಮಾಡಿದ್ದವು. ರಾಜ್ಯದಲ್ಲಿ ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಹಗರಣದಲ್ಲಿ ಪ್ರಮುಖ ರಾಜಕೀಯ ನಾಯಕರ ಮೇಲೆ ಇಡಿ, ಎನ್ಸಿಬಿ ದಾಳಿ ಮಾಡಲಿದೆ ಎಂಬ ಮಾಹಿತಿ ನೀಡಿದ್ದವು. ಈ ವರದಿ ಬೆನ್ನಲ್ಲೇ ಇದು ಪೊಲಿಟಿಕಲ್ ಬಿಸಿ ಸುದ್ದಿಯಾಗಿ ಪರಿಣಮಿಸಿತ್ತು.

ಅದರ ಬೆನ್ನಲ್ಲೇ ಮತ್ತಷ್ಟು ಕುತೂಹಲಕಾರಿ ಮಾಹಿತಿಗಳು ಹೊರಬಿದ್ದಿವೆ.
ಕ್ರಿಪ್ಟೋ ಕರೆನ್ಸಿ ಹಗರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಪಿಎಂ ಕಚೇರಿಯಿಂದ ಡಿಜಿ-ಐಜಿಪಿಗೆ ಯಾವಾಗ ಪತ್ರ ಬಂತೋ ಕೆಲ ರಾಜಕಾರಣಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಗಳು ನಿರಂತರವಾಗಿ ಮಾಹಿತಿ ನೀಡುತ್ತಲೇ ಇವೆ. ಜೊತೆಗೆ ಬಿಟ್ಕಾಯಿನ್ ಬಗೆಗಿನ ಪ್ರಮುಖ ಮಾಹಿತಿಯನ್ನ ನೀಡುತ್ತಿವೆ. ಆದ್ರೀಗ ನಿಜಕ್ಕೂ ಬಿಟ್ ಕಾಯಿನ್ ಕೇಸ್, ಅದರಲ್ಲಿ ಭಾಗಿಯಾದವರಿಗೆ ಸಂಕಷ್ಟ ತಂದಿಡುತ್ತಾ ಎಂಬ ಪ್ರಶ್ನೆಯೊಂದು ಉದ್ಭವಿಸಿದೆ. ಯಾಕಂದ್ರೆ, ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ಅಥವಾ ಬಿಟ್ ಕಾಯಿನ್ ಬಗ್ಗೆ ಯಾವುದೇ ಕಾನೂನಿಲ್ಲ. ಹೀಗಾಗಿ ಆರೋಪ ಸಾಬೀತು ಪಡಿಸಲು ಸಾಕಷ್ಟು ಅಡೆತಡೆಗಳೂ ಇವೆ.

ಆರೋಪಿಗಳನ್ನ ‘ಬಿಟ್’ ಬಿಡ್ತಾರಾ?

ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಸಂಬಂಧ ಯಾವುದೇ ಕಾನೂನುಗಳಿಲ್ಲ

2019ರಲ್ಲಿ ನಿಯಮಾವಳಿ ರೂಪಿಸಲು ಸುಪ್ರೀಂ ಸರ್ಕಾರಕ್ಕೆ ಸೂಚಿಸಿತ್ತು

ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ಸಂಬಂಧ ಯಾವುದೇ ಕಾನೂನುಗಳಿಲ್ಲ

ಕ್ರಿಪ್ಟೋ ಕರೆನ್ಸಿಗೆ ರಿಸರ್ವ್ ಬ್ಯಾಂಕ್ ಮತ್ತು ಸರ್ಕಾರ ಮಾನ್ಯತೆ ನೀಡಿಲ್ಲ

ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ವಹಿವಾಟಿಗೆ ಯಾವುದೇ ಮಾನ್ಯತೆ ನೀಡಿಲ್ಲ

ಆದ್ರೂ ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ಕಾನೂನು ಬಾಹಿರ ಅಂತ ನಿಷೇಧಿಸಿಲ್ಲ

ತನಿಖಾ ಸಂಸ್ಥೆಗಳು ಕರೆನ್ಸಿ ರಿಕವರಿ ಮಾಡುವಷ್ಟು ಆಧುನಿಕಗೊಂಡಿಲ್ಲ

ಇದುವರೆಗೂ ಹ್ಯಾಕ್ ಮಾಡಿದ ಕ್ರಿಪ್ಟೋ ಕರೆನ್ಸಿ ರಿಕವರಿ ಮಾಡಲಾಗಿಲ್ಲ

ಸಿಸಿಬಿ ₹9 ಕೋಟಿ ಮೌಲ್ಯದ ಬಿಟ್ ಕಾಯಿನ್ ರಿಕವರಿ ಆಗಿದೆ ಎಂದಿತ್ತು

ನಂತರ ಬಿಟ್ ಕಾಯಿನ್ ಈವರೆಗೂ ರಿಕವರಿ ಆಗಿಲ್ಲವೆಂಬ ಸತ್ಯ ಬಯಲು

ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಸಂಬಂಧ ಯಾವುದೇ ಕಾನೂನುಗಳಿಲ್ಲ ಎಂಬುದು ತನಿಖೆಗೆ ದೊಡ್ಡ ತೊಡಕಾಗಿ ಪರಿಣಮಿಸಲಿದೆ. ಈ ಹಿಂದೆ 2019ರಲ್ಲಿ ಬಿಟ್ ಕಾಯಿನ್ ಬಗ್ಗೆ ನಿಯಮಾವಳಿ ರೂಪಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಆದ್ರೆ, ಸದ್ಯ ಈ ಬಗ್ಗೆ ಯಾವುದೇ ಕಾನೂನುಗಳಿಲ್ಲ. ಜೊತೆಗೆ ಕ್ರಿಪ್ಟೋ ಕರೆನ್ಸಿಗೆ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ವಹಿವಾಟಿಗೆ ಯಾವುದೇ ಮಾನ್ಯತೆ ನೀಡಿಲ್ಲ. ಆದ್ರೆ, ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ಕಾನೂನು ಬಾಹಿರ ಅಂತ ನಿಷೇಧವನ್ನೂ ಹೇರಿಲ್ಲ.
ಇದರ ಜೊತೆಗೆ ಸರ್ಕಾರದ ತನಿಖಾ ಸಂಸ್ಥೆಗಳು ಕ್ರಿಪ್ಟೋ ಕರೆನ್ಸಿ ರಿಕವರಿ ಮಾಡುವಷ್ಟು ಆಧುನಿಕರಣಗೊಂಡಿಲ್ಲ. ಅಲ್ಲದೇ ಇದುವರೆಗೂ ಹ್ಯಾಕ್ ಮಾಡಿದ ಕ್ರಿಪ್ಟೋ ಕರೆನ್ಸಿಯನ್ನ ರಿಕವರಿ ಮಾಡಿಲ್ಲ. ಅಲ್ಲದೇ ಸಿಸಿಬಿ 9 ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ರಿಕವರಿ ಆಗಿದೆ ಎಂದಿತ್ತು. ಆದ್ರೆ, ಬಿಟ್ ಕಾಯಿನ್ಗಳನ್ನ ಈವರೆಗೂ ರಿಕವರಿ ಆಗಿಲ್ಲವೆಂಬ ಸತ್ಯ ಬಯಲಾಗಿದೆ. ಇದು ಸದ್ಯ ಬಿಟ್ ಕಾಯಿನ್ ಕೇಸ್ ತನಿಖೆಗೆ ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ.

ಇನ್ನು ಬಿಟ್ ಕಾಯಿನ್ ರಿಕವರಿ ಮಾಡೋದು ತನಿಖಾ ಸಂಸ್ಥೆಗಳಿಗೆ ಅಸಾಧ್ಯವಾದ ಕೆಲಸವಾಗಿದೆ. ಒಂದು ವೇಳೆ ಹೇಗಾದ್ರು ಮಾಡಿ ಈ ಪ್ರಕರಣ ಭೇದಿಸುತ್ತೇವೆ ಅಂದ್ರೂ ಟೆಕ್ನಾಲಜಿಯ ಕೊರತೆ ಇದೆ. ಇದ್ರಿಂದ ತನಿಖೆಗೆ ಹಾದಿ ಅಷ್ಟೋಂದು ಸುಗಮವಿಲ್ಲ. ಹಾಗಾದ್ರೆ ಏನಿದು ಬಿಟ್ಕಾಯಿನ್, ಇದರ ವಹಿವಾಟು ಹೇಗೆಲ್ಲ ನಡೆಯುತ್ತೆ ಅಂತಾ ತೋರಿಸ್ತೀವಿ ನೋಡಿ.

ಏನಿದು ಬಿಟ್ ಕಾಯಿನ್?

1)ಬಿಟ್ ಕಾಯಿನ್ ಅಂದರೆ ಡಿಜಿಟಲ್ ಕರೆನ್ಸಿ, ಅಂದರೆ ನಗದಲ್ಲದ ಹಣ

2)ಹಲವು ರೀತಿಯ ಡಿಜಿಟಲ್/ಕ್ರಿಪ್ಟೋ ಕರೆನ್ಸಿ ಇವತ್ತು ಚಾಲ್ತಿಯಲ್ಲಿ ಇವೆ

3)ಕೌಶಲ್ಯವಿದ್ದರೆ ಅನಾಮಧೇಯವಾಗಿ ಇದರ ವಹಿವಾಟು ನಡೆಸಬಹುದು

4)ಜಾಗತಿಕವಾಗಿ ಇದರ ನಿಯಂತ್ರಣಕ್ಕೆ ಯಾವುದೇ ನಿರ್ದಿಷ್ಟ ಸಂಸ್ಥೆಯಿಲ್ಲ

5)ಇದರ ಬಳಕೆ, ವಹಿವಾಟಿಗೆ ಭೌಗೋಳಿಕ ಮಿತಿ, ಕಡಿವಾಣಗಳು ಇಲ್ಲ

6)ಇಂಟರ್ನೆಟ್ನ ಮೂರು ವೇದಿಕೆಗಳಲ್ಲಿ ಬಿಟ್ ಕಾಯಿನ್ ಬಳಕೆ ಆಗುತ್ತೆ

7)ಕ್ಲಿಯರ್ ನೆಟ್, ಡೀಪ್ ವೆಬ್, ಡಾರ್ಕ್ ವೆಬ್ಗಳಲ್ಲಿ ಬಿಟ್ ಕಾಯಿನ್ ಬಳಕೆ

8)ಕ್ಲಿಯರ್ ನೆಟ್ ಅಂದ್ರೆ ಸಾಮಾನ್ಯವಾಗಿ ನಾವು ಬಳಸುವ ಇಂಟರ್ನೆಟ್

9)ಡೀಪ್ ವೆಬ್ ಅಂದರೆ ಕೆಲವರಿಗೆ ಮಾತ್ರ ಇದರ ಮಾಹಿತಿ, ಌಕ್ಸೆಸ್ ಇರುತ್ತೆ

10)ಡಾರ್ಕ್ ವೆಬ್ನಲ್ಲಿ ಅನಾಮಧೇಯವಾಗಿ ವಹಿವಾಟು ನಡೆಸಬಹುದು

ಬಿಟ್ ಕಾಯಿನ್ ಅಂದ್ರೆ ಡಿಜಿಟಲ್ ಕರೆನ್ಸಿ, ಅಂದರೆ ಇದು ನಗದು ಅಲ್ಲದ ಹಣವಾಗಿದೆ. ಹಲವು ರೀತಿಯ ಡಿಜಿಟಲ್ ಅಥವಾ ಕ್ರಿಪ್ಟೋ ಕರೆನ್ಸಿ ಇವತ್ತು ಚಾಲ್ತಿಯಲ್ಲಿ ಇವೆ. ಈ ಬಗ್ಗೆ ಕೌಶಲ್ಯವಿದ್ದರೆ ಅನಾಮಧೇಯವಾಗಿ ಇದರ ವಹಿವಾಟು ನಡೆಸಬಹುದಾಗಿದೆ. ಆದ್ರೆ, ಜಾಗತಿಕವಾಗಿ ಇದರ ನಿಯಂತ್ರಣಕ್ಕೆ ಯಾವುದೇ ನಿರ್ದಿಷ್ಟ ಸಂಸ್ಥೆಯಿಲ್ಲ. ಇದರ ಬಳಕೆ, ವಹಿವಾಟಿಗೆ ಭೌಗೋಳಿಕ ಮಿತಿ, ಕಡಿವಾಣಗಳೂ ಇಲ್ಲ.

ಇಂಟರ್ನೆಟ್ನ ಮೂರು ವೇದಿಕೆಗಳಲ್ಲಿ ಬಿಟ್ ಕಾಯಿನ್ನ ಬಳಕೆ ಆಗುತ್ತಿದೆ. ಒಂದು ಕ್ಲಿಯರ್ ನೆಟ್, ಎರಡನೆಯದು ಡೀಪ್ ವೆಬ್, ಮೂರನೆಯದು ಡಾರ್ಕ್ ವೆಬ್. ಇಲ್ಲಿ ಕ್ಲಿಯರ್ ನೆಟ್ ಅಂದ್ರೆ ಸಾಮಾನ್ಯವಾಗಿ ನಾವು ಬಳಸುವ ಇಂಟರ್ನೆಟ್. ಡೀಪ್ ವೆಬ್ ಅಂದ್ರೆ ಕೆಲವರಿಗೆ ಮಾತ್ರ ಇದರ ಮಾಹಿತಿ, ಌಕ್ಸೆಸ್ ಇರುತ್ತೆ. ಡಾರ್ಕ್ ವೆಬ್ನಲ್ಲಿ ಅನಾಮಧೇಯವಾಗಿ ಬಿಟ್ ಕಾಯಿನ್ ವಹಿವಾಟು ನಡೆಸಬಹುದಾಗಿದೆ.

ಬಿಟ್ ಕಾಯಿನ್ ಕೇಸ್ನಲ್ಲಿ ಬಿಜೆಪಿ ನಾಯಕರು ಶಾಮೀಲಾಗಿದ್ದಾರೆ ಅಂತಾ ಕಾಂಗ್ರೆಸ್ ನಾಯಕರು ಆರೋಪಿಸುತ್ತಲೇ ಇದ್ದಾರೆ. ಇದರ ಬೆನ್ನಲ್ಲೇ ಬಿಟ್ ಕಾಯಿನ್ ಕೇಸ್ ವಿಚಾರವಾಗಿ ಕಾಂಗ್ರೆಸ್ ಆರ್ಟಿಐ ಮೊರೆ ಹೋಗಲಿದೆ ಅಂತಾ ಕೆಪಿಸಿಸಿ ಅಧ್ಯಕ್ಷರು ತಿಳಿಸಿದ್ದಾರೆ.
ಒಟ್ಟಾರೆ, ಕ್ರಿಪ್ಟೋ ಕರೆನ್ಸಿ ದಂಧೆಯ ಆರೋಪಿಗಳನ್ನ ಬಂಧಿಸಿ ಅವರಿಗೆ ಶಿಕ್ಷೆ ಕೊಡಿಸೋದು, ಕಾಣದ ಕರೆನ್ಸಿ ದಂಧೆಯನ್ನ ಭೇದಿಸೋದೇ ತನಿಖಾ ಸಂಸ್ಥಗಳ ಮುಂದಿರೋ ಸವಾಲು.

ಏನಿದು ಬಿಟ್ ಕಾಯಿನ್? ಈ ಕೇಸ್ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ತಂದೊಡ್ಡಲಿದೆಯಾ ಸಂಕಷ್ಟ? 

ಕೆಲ ದಿನಗಳ ಹಿಂದಷ್ಟೇ ಬಿಟ್ಕಾಯಿನ್ ಕರಾಳಮುಖವನ್ನ ರಾಷ್ಟ್ರೀಯ ಮಾಧ್ಯಮಗಳು ರಿವೀಲ್ ಮಾಡಿದ್ದವು. ರಾಜ್ಯದಲ್ಲಿ ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಹಗರಣದಲ್ಲಿ ಪ್ರಮುಖ ರಾಜಕೀಯ ನಾಯಕರ ಮೇಲೆ ಇಡಿ, ಎನ್ಸಿಬಿ ದಾಳಿ ಮಾಡಲಿದೆ ಎಂಬ ಮಾಹಿತಿ ನೀಡಿದ್ದವು. ಈ ವರದಿ ಬೆನ್ನಲ್ಲೇ ಇದು ಪೊಲಿಟಿಕಲ್ ಬಿಸಿ ಸುದ್ದಿಯಾಗಿ ಪರಿಣಮಿಸಿತ್ತು.

ಆದರೆ ಬಿಟ್-ಕಾಯಿನ್ ಹೂಡಿಕೆದಾರರು ರಾಜ್ಯದಲ್ಲಿ ಹಲವಡೆ ಇದ್ದಾರೆ ಎಂದು ಮಾಹಿತಿ. ಇದರಲ್ಲಿ ವಿಶೇಷ ವಾಗಿ ವಿಜಯನಗರ ಜಿಲ್ಲೆಯಲ್ಲೂ ಕೋಟಿ ಕೋಟಿ ಹಣ ಸಂಸ್ಥೆಯ ಹೆಸರನ್ನು ಬಳಸಿಕೊಂಡು ಜನಸಾಮಾನ್ಯರ ದುಡ್ಡನ್ನು ಬಿಟ್ ಕಾಯಿನ್ ಕ್ರಿಪ್ತೋಕರೆನ್ಸಿ ಮುಖದಲ್ಲಿ ಜನಸಾಮಾನ್ಯರನ್ನು ವಂಚಿಸಿದ್ದಾರೆ ಎಂದು ಜನಸಾಮಾನ್ಯರು ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು!!!

ಮುಂದಿನ ಭಾಗದಲ್ಲಿ ಇದರ ಬಗ್ಗೆ ವಿಸ್ತಾರವಾಗಿ ಮಾಹಿತಿ ಕೊಡುತ್ತೇವೆ.

ವರದಿ :-ಕ್ಯಾಮರಾ ಮೈನುದ್ದಿನ್

LEAVE A REPLY

Please enter your comment!
Please enter your name here