ಮೋಸಿನ ಮತ್ತು ಆರಿಫ್ ಗೆ ರಾಜ್ಯ ಪ್ರಶಸ್ತಿ ಪುರಸ್ಕಾರ!!!

0
251

ಬೆಂಗಳೂರು

ಮೋಸಿನ ಮತ್ತು ಆರಿಫ್ ಗೆ ರಾಜ್ಯ ಪ್ರಶಸ್ತಿ ಪುರಸ್ಕಾರ

ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ವತಿಯಿಂದ ಪ್ರತಿ ಎರಡು ವರ್ಷಕೆ ಒಂದು ಸರಿ ನಡೆಯುವ ರಾಜ್ಯ ಪ್ರಶಸ್ತಿ ವಿತರಣೆ ಕಾರ್ಯಕ್ರಮ ದಲ್ಲಿ ನೈಜ ನಿಖರ ನಿರ್ಭಿತ ಸಮಾಜ ಸುಧಾರಣೆಯ ಸುದ್ದಿ ಗಳನ್ನು ಮಾಡಿರುವುದನ್ನು ಗುರುತಿಸಿ ಜೆಕೆ news ಕನ್ನಡ ಸಂಪಾದಕ ಸೈಯದ್ ಮೋಸಿನ ಅಲಿ ಮತ್ತು ಸಹ ಸಂಪಾದಕ ಆರಿಫ್ ಮಣಿಯಾರ ರವರನ್ನು ಪತ್ರಿಕೋದ್ಯಮ ರತ್ನ ಮತ್ತು ಪತ್ರಕರ್ತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಹಿಂದೆ ಜನಜಾಗೃತಿ ಸುದ್ದಿವಾಹಿನಿಯಲ್ಲಿ ಬೀದರ್ ಜಿಲ್ಲೆಯ ಸಂಪಾದಕರನ್ನಾಗಿ ಉತ್ತಮ ಪ್ರದರ್ಶನ ನೀಡಿರುವುದನ್ನು ಗಮನಿಸಿ,

ಬಡವ ನಿರ್ಗತಿಕರ ಪರ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯ ನಿರ್ವಹಿಸಿದ ಇವರು ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಯಾದಂತಹ ಛಾಪು ಮೂಡಿಸಿದ್ದಾರೆ ಇವರಿಬ್ಬರನ್ನು ಗುರುತಿಸಿದ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ನಾಯಕರು ಹೆಸರಾಂತ ಕಲಾವಿದರು ಗುರು ಹಿರಿಯರಿಂದ ಗೌರವಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಜನಜಾಗೃತಿ ಸುದ್ದಿವಾಹಿನಿ ಮತ್ತು ಜಾಗೃತಿ ಬೆಳಕು ವಾರ ಪತ್ರಿಕೆಯ ಸಂಪಾದಕರು ಮಹಮ್ಮದ್ ಗೌಸ್ ರವರು ಶುಭಕೋರಿದರು 🙏

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here