ಮಹಿಳಾ ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ವಿಜಯನಗರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ!!!

0
302

ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್

ಹಿಜಬ್ (ಶಿರವಸ್ತ್ರ) ಸಂಬಂಧಿಸಿದಂತೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಸಮವಸ್ತ್ರದ ಜೊತೆಗೆ ಅದೇ ಬಣ್ಣದ ಶಿರವಸ್ತ್ರ ಧರಿಸಲು ಅನುಮತಿ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ,,

ನಾವು ನಮ್ಮ ಕಾಲೇಜುಗಳಲ್ಲಿ ಸರಸ್ವತಿ ಪೂಜೆ,ಲಕ್ಷ್ಮಿ ಪೂಜೆ, ಗಣೇಶ್ ಚತುರ್ಥಿ ಇನ್ನಿತರ ಧಾರ್ಮಿಕ ಹಬ್ಬಗಳಲ್ಲಿ ಜೊತೆಯಲ್ಲಿ ಸೇರಿಕೊಂಡು ಹೊಂದಾಣಿಕೆಯಿಂದ ಜಾತಿ ಭೇದ ವಿಲ್ಲದೆ ಆಚರಿಸುತ್ತೇವೆ!!!

ಆದರೆ ನಾವು ಹಾಕಿಕೊಳ್ಳುವ ಶಿರವಸ್ತ್ರ ದ ಬಗ್ಗೆ ಯಾಕೆ ಇಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದರ ಎಂದು ವಿದ್ಯಾರ್ಥಿನಿ ತನ್ನ ಮನದಾಳದ ಮಾತನ್ನು ಜಿಲ್ಲಾಧಿಕಾರಿಯ ಆವರಣದಲ್ಲಿ ಮಾಧ್ಯಮದ ಜೊತೆಗೆ ಹಂಚಿಕೊಂಡರು,

ಪದವಿ ಪೂರ್ವ ಶಿಕ್ಷಣ ಇಲಾಖೆಯ 2021ರಿಂದ 2022ರ ಮಾರ್ಗ ಸೂಚಿಯ ಅನುಸಾರವಾಗಿ ಸಮವಸ್ತ್ರ ಕಡ್ಡಾಯವಾಗಿರುವುದಿಲ್ಲ ಹಾಗೂ ಸಮವಸ್ತ್ರವನ್ನು ಆಯಾ ಕಾಲೇಜಿನ ಆಡಳಿತ ಮಂಡಳಿ ಅಥವಾ ಪ್ರಾಂಶುಪಾಲರು ಕಡ್ಡಾಯಗೊಳಿಸಿದರೆ ಕಾನೂನುಬಾಹಿರವೆಂದು ಉಲ್ಲೇಖಿಸಿ, ಸಮವಸ್ತ್ರ ಕಡ್ಡಾಯಗೊಳಿಸಿದ್ದಲ್ಲಿ ಗಂಭೀರವಾಗಿ ಪರಿಗಣಿಸುವ ಸೂಚನೆಯೂ ಸಹ ನೀಡಲಾಗಿತ್ತು ಆದರೆ ಉಡುಪಿಯ ಪದವಿ ಪೂರ್ವ ಕಾಲೇಜಿನಲ್ಲಿ ಸಮವಸ್ತ್ರದ ನೆಪವನ್ನಿಟ್ಟು ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದ ಜೊತ ಶಿರವಸ್ತ್ರ ಧರಿಸಿದ್ದ ಏಕೈಕ ಕಾರಣಕ್ಕಾಗಿ ಸುಮಾರು ಒಂದು ತಿಂಗಳಿಂದ ತರಗತಿಗಳಿಗೆ ನಿರ್ಬಂಧಿಸಲಾಗಿದೆ,,

ಈ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಚರ್ಚೆಗಳು ಆಗಿವೆ. ಈ ರೀತಿ ನಡೆಯುವ ಸಂದರ್ಭದಲ್ಲಿಯೇ ಕುಂದಾಪುರ ಸರಕಾರಿ ಕಾಲೇಜಿನಲ್ಲೂ ಪ್ರಾಂಶುಪಾಲರು ಕಳೆದ ಹಲವು ದಿನಗಳಿಂದ ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿಯರನ್ನು ಗೇಟಿನ ಹೊರ ಹಾಕಿ ತರಗತಿಗೆ ಅವಕಾಶ ಕೊಂಡದ ಸುಡು ಬಿಸಿಲಿನ ಬೇಗೆಯಲ್ಲಿ ನಿಲ್ಲುವಂತೆ ಅಮಾನವೀಯವಾಗಿ ಮೆರೆದಿದ್ದಾರೆ.ಇಸ್ಲಾಂ ಧರ್ಮದ ಧಾರ್ಮಿಕ ಮೂಲಭೂತ ತತ್ವಗಳ ಅನುಗುಣವಾಗಿ ಹೆಣ್ಣು ಶಿರವಸ್ತ್ರ ಧರಿಸುವುದು ಕಡ್ಡಾಯಗೊಳಿಸಿದೆ. ಸಂವಿಧಾನದ ಅನುಚ್ಛೇದ 25, 26 ರ ಪ್ರಕಾರ ಧಾರ್ಮಿಕ ನಂಬಿಕಗಳ, ಅಚಾರಗಳ ಅನುಸರಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಆದುದರಿಂದ ಒಂದು ವೇಳೆ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದರೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಸಮವಸ್ತ್ರದ ಭಾಗವಾಗಿರುವ ಶಾಲನ್ನು ಬಳಸಿ ಶಿರವಸ್ತ್ರ ಧರಿಸಲು ಅವಕಾಶ ನೀಡಿ, ಸಂವಿಧಾನಬದ್ಧವಾದ ಧಾರ್ಮಿಕ ಅಡಿಯಲ್ಲಿ ವಿನಂತಿಸಿಕೊಳ್ಳುತ್ತೇವೆ. ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸಬೇಕೆಂದು,

ಮಹಿಳಾ ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ಈ ದಿನ ಜಿಲ್ಲಾ ಕಛೇರಿಯ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತು,,

ಗ್ರಾಮಾಂತರ ಪೊಲೀಸ್ ಸ್ಟೇಷನ್ PI ನಿವಾಸ್ ಮೇಟಿ ರವರ ನೇತೃತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಯಿತು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here