ಭಾರತ್ ಜೋಡೊ ಯಾತ್ರೆಗೆ ಬೆಂಬಲ ನೀಡಲು ಬಂದ ತನ್ವೀರ್ ಸೇಟ್!

0
229

ಹೊಸಪೇಟೆ: ಜಾಗೃತಿ ಬೆಳಕು ಬಿಗ್ ಬ್ರೇಕಿಂಗ್

ದೇಶದಲ್ಲಿ ನಡೆಯುತ್ತಿರುವ ದುರಾಡಳಿತ, ಬಿಜೆಪಿಯ ತತ್ವ ಸಿದ್ಧಾಂತಗಳಿಂದ ದೇಶದ ಉದ್ದಗಲಕ್ಕೂ ವಿನಾಕಾರಣ ಸಂಘರ್ಷಕ್ಕೆ ಎಡೆ ಮಾಡುತ್ತಿ ರುವುದರಿಂದ, ಪ್ರತಿಪಕ್ಷವನ್ನು ಸದನದ ಒಳಗೆ ಹಾಗೂ ಹೊರಗೆ ತುಳಿಯುವಂತ ವ್ಯವಸ್ಥೆ ಬಿಜೆಪಿ ಪಕ್ಷಮಾಡುತ್ತಿದೆ. ದ್ವೇಷದ ಹಾಗೂ ಹಿಂಸೆಯ ಕಾರ್ಯಕ್ರಮಗಳನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಉದ್ದೇಶದಿಂದ ಅವುಗಳ ವಿರುದ್ಧ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರು ಭಾರತ್ ಜೋಡೋ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ತನ್ವೀರ್ ಸೆಟ್ ಹೇಳಿದರು.


ಬಳ್ಳಾರಿಯಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಭಾಗವಹಿಸಲು ಹೊಸಪೇಟೆ ಮಾರ್ಗವಾಗಿ ಹೋಗುತ್ತಿರುವ ಸಂದರ್ಭ ದಲ್ಲಿ ಜಾಗೃತಿ ಬೆಳಕು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಭಾರತ್ ಜೋಡೋ ಯಾತ್ರೆಯು ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮನಸ್ಸು ಗಳನ್ನು ಜೋಡಿಸುವ ಒಂದು ಐತಿಹಾಸಿಕ ಕಾರ್ಯಕ್ರಮ ವಾಗಿದೆ. ಸ್ವತಂತ್ರ ಪೂರ್ವ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾ ಮದಲ್ಲಿ ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಿಂದ ಇಡೀ ದೇಶವನ್ನು ಒಗ್ಗೂಡಿಸುವಂತೆ ಅಹಿಂಸೆಯ ತತ್ವದ ಆಧಾ ರದ ಮೇಲೆ,ಮಹಾತ್ಮ ಗಾಂಧೀಜಿಯವರು ಹಾಕಿ ಕೊಟ್ಟಂ ತಹ ಮಾದರಿಯಲ್ಲಿ ಇವತ್ತು ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ರಾಹುಲ್ ಗಾಂಧಿಜಿಯವರು ಕನ್ಯಾಕುಮಾ ರಿಯಿಂದ ಕಾಶ್ಮೀರದವರೆಗೆ 3500 ಕಾಲ್ ನಡಿಗೆಯ ಮೂಲಕ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ.
ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಬಳ್ಳಾ ರಿಯವರಿಗೆ 1000 ಕಿಲೋಮೀಟರ್ ಭಾರತ್ ಜೋಡೋ ಪಾದಯಾತ್ರೆ ಮಾಡಿದ್ದಾರೆ. ಪ್ರಸ್ತುತ ಪಾದಯಾತ್ರೆಯಲ್ಲಿ ಜನರ ಭಾವನೆ ಹಾಗೂ ಪ್ರತಿಕ್ರಿಯೆಗಳು ಹಾಗೇನೇ ಯಾತ್ರೆಯಲ್ಲಿ ಸೇರುತ್ತಿರುವ ಜನಸಂಖ್ಯೆಯನ್ನು ನೋಡಿ ದರೆ ಪ್ರತಿಯೊಬ್ಬರಿಗೂ ನೆಮ್ಮದಿಯ ಜೀವನ ಬೇಕಾಗಿದೆ. ರಾಜಕೀಯ ಹಾಗೂ ರಾಜಕಾರಣಿ ಈ ಪದಗಳಿಂದ ಬೇಸ ತ್ತಿರುವ ಜನರಿಂದ ಮರು ವಿಶ್ವಾಸ ಪಡೆಯಬೇಕಾದರೆ ಬಹಳ ಸ್ವಚ್ಛವಾದ ಆಡಳಿತ ಕೊಡುವಂತ ಸನ್ನಿವೇಶಕ್ಕೆ 2023 ರಲ್ಲಿ ನಡೆಯುವ ವಿಧಾನಸಭೆ ಹಾಗೂ ದೇಶದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನ ಜನರ ಮನಸ್ಸನ್ನು ಗೆಲ್ಲುವಂತ ಕಾರ್ಯಕ್ರಮ ಮಾಡಬೇಕಾಗಿದೆ. ಪ್ರಸ್ತುತ ದಿನಗಳಲ್ಲಿ ಯುವಕರಿಗೆ ದಿಕ್ಕಿಲ್ಲದ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆ. ಉದ್ಯೋಗಗಳು ಸೃಷ್ಟಿ ಯಾಗುತ್ತಿಲ್ಲ ಇರುವ ಉದ್ಯೋಗಗಳನ್ನು ಸಹ ಕಳೆದು ಕೊ ಳ್ಳುತ್ತಿದ್ದಾರೆ ನಿರುದ್ಯೋಗದ ಸಮಸ್ಯೆ ಯೆದರಿಸುತ್ತಿದ್ದಾರೆ. ರೈತರ ಅನೇಕ ಸಮಸ್ಯೆಗಳು ಹಾಗೇನೆ ಎಲ್ಲಾ ವರ್ಗದ ಸಮಸ್ಯೆಗಳನ್ನು ನಾವು ಸಮರ್ಥ ರೀತಿಯಲ್ಲಿ ಎದುರಿಸ ಬೇಕಾಗಿದೆ.
ಕಾಂಗ್ರೆಸ್ ಪಕ್ಷ 70 ವರ್ಷದ ಅವಧಿಯಲ್ಲಿ ಏನು ಮಾಡಿದೆ ಎಂದು ಕೇಳುವವರಿಗೆ, ಆ ಅವಧಿಯಲ್ಲಿ ಮನುಷ್ಯರನ್ನು ದ್ವೇಷಿಸುವ ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷ ಯಾವತ್ತು ಮಾಡಿಲ್ಲ. ಆದರೆ ಬಿಜೆಪಿಯವರು ವ್ಯವಸ್ಥಿತವಾಗಿ ಸಿದ್ಧಾಂ ತದ ಮೇಲೆ ಈ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ದೇಶದ ಜನರು ನೆಮ್ಮದಿಯಿಂದ ಇರಬೇಕಾದರೆ ನಾವೆಲ್ಲ ರೂ ಸಂಪೂರ್ಣವಾಗಿ ರಾಹುಲ್ ಗಾಂಧಿಯವರ ಜೊತೆ ಯಲ್ಲಿ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.
ಇತಿಹಾಸ ಅರಿವು ಗೊತ್ತಿಲ್ಲದವರು ಈ ರೀತಿ ಮಾತನಾಡ ಬಾರದು, ದೇಶದಲ್ಲಿ 433 ರಾಜ ಮಹಾರಾಜರುಗಳು ಸಣ್ಣ ಸಣ್ಣ ಪ್ರಮಾಣದ ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ಆಡಳಿತ ನಡೆಸುತ್ತಿದ್ದರು. ಯುದ್ಧ ಮಾಡುವಂತ ಸಂದರ್ಭ ದಲ್ಲಿ ಯಾರು ಪ್ರೀತಿ ಮಾಡಲು ಬರುವುದಿಲ್ಲ.ಇವತ್ತು ನಿಜ ವಾದ ಇತಿಹಾಸವನ್ನು ಸಂಪೂರ್ಣವಾಗಿ ತಿರುಚುವಂತ ಕೆಲಸ ಮಾಡುತ್ತಿದ್ದಾರೆ. 433 ರಾಜ ಮಹಾರಾಜರುಗಳನ್ನು ಒಂದುಗೂಡಿಸುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿ ಮಹಾತ್ಮ ಗಾಂಧೀಜಿ ಜವಾಹರ್ ಲಾಲ್ ನೆಹರು ಸರ್ದಾರ್ ವಲ್ಲಭಭಾಯಿ ಪಟೇಲ್, ಮೌನ ಅಬ್ದುಲ್ ಕಲಾಂ ಆಜಾದ್ ಸೇರಿದಂತೆ ಅನೇಕ ನಾಯಕರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ದೇಶವನ್ನು ಕಟ್ಟಿದ್ದಾರೆ ಎಂದು ಹೇಳಿದರು. ನೆಹರು ಕಾಲದಲ್ಲಿ ಇರಬಹುವುದು ಅಥವಾ ಇಂದಿರಾ ಗಾಂಧಿ ಅವರ ಕಾಲದಲ್ಲಿ ಇರಬಹುದು ದೇಶದಲ್ಲಿ ಉದ್ಭ ವವಾಗಿದ್ದ ತುರ್ತು ಪರಿಸ್ಥಿತಿಯನ್ನು ವ್ಯವಸ್ಥಿತ ರೀತಿಯಲ್ಲಿ ನಿಭಾಯಿಸಲು ಮುಂದಾದರು. ಹಾಗೇನೆ ಇವತ್ತು ದೇಶದ ಘನತೆಗೆ ಕಿಂಚಿತ್ತುಧಕ್ಕೆ ಬರದ ರೀತಿಯಲ್ಲಿ ನಾವೆಲ್ಲರೂ ನಡೆದುಕೊಳ್ಳಬೇಕಾಗಿದೆ. ದೇಶಾಭಿಮಾನ ಸ್ವಾಭಿಮಾನ ಹಾಗೂ ದೇಶದಲ್ಲಿರುವಂತ 135 ಕೋಟಿ ಜನರ ಬದುಕ ನ್ನು ಹಸನಮಾಡುವಂತ ಕಾರ್ಯಕ್ರಮಗಳನ್ನು ಮಾಡು ವಂತಹ ಸರ್ಕಾರ ಬೇಕಾಗಿದೆ. ಇವತ್ತು ವಿನಹ ಕಾರಣ ಇಲ್ಲದೆ ಇರುವ ವಿಚಾರಗಳನ್ನು ಕೆದಕಿ ಜನರ ಮನಸ್ಸನ್ನು ಹಾಳು ಮಾಡುವಂತಹ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ಎಲ್ಲಿ ಕೊಡಬೇಕು ಅಲ್ಲಿ ಕೊಡುತ್ತೇವೆ ಎಂದು ಹೇಳಿದರು. ಇತಿಹಾಸದ ಅರಿವು ಇಲ್ಲದವರಿಗೆ ಏನು ಹೇಳಿ ದರು ಅರ್ಥವಾಗುವುದಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರುತ್ತೇವೆ ಯಂದು ಬಿಜೆಪಿ ನಾಯಕ ಮಾತಿಗೆ ಪ್ರತಿಕ್ರಿಸಿದ ತನ್ವೀರ್ ಸೆಟ್ ರವರು ವಾಮ ಮಾರ್ಗದಿಂದ ಅಧಿಕಾರ ನಡೆಸಬೇಕೆಂದು ಕಲಿಯುವ ಬೇಕಾದರೆ ಬಿಜೆಪಿ ಅವ ರಿಂದ ಕಲಿಯಬೇಕಾಗಿದೆ. ಇವರಿಗೆ 2008ರಲ್ಲೂ ಸ್ಪಷ್ಟ ಬಹುಮತ ಇರಲಿಲ್ಲ ಯಾವಾಗಲೂ ಸಹ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರು ಈಗಲೂ ಸಹ ಅವರಿಗೆ ಸ್ಪಷ್ಟ ಬಹುಮತ ಇಲ್ಲ ಇವರು ವಾಮ ಮಾರ್ಗ ದಿಂದಲೇ ಸರ್ಕಾರ ರಚನೆ ಮಾಡಿದ್ದಾರೆ. ಇವತ್ತು ಜನರ ಮನಸ್ಸಿನಲ್ಲಿ ಸಂಶಯ ಬರುವ ರೀತಿಯಲ್ಲಿ ಮತದಾರ ಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರು ನೇರವಾಗಿ ಬ್ಯಾಲೆಟ್ ಪೇಪರ್ ಮುಖಾಂತರ ಚುನಾವಣೆ ನಡೆಸಲಿ ಇವರ ನಿಜವಾದ ಬಂಡವಾಳ ಬಯಲಾಗು ತ್ತದೆ. ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುತ್ತೇವೆಂದು ಹೇಳುವವರು ಎಷ್ಟು ಜನ ನಿರ್ನಾಮವಾಗಿ ಹೋಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ, ಅವರಿಗೆ ತಕ್ಕ ಶಾಸ್ತಿ ಜನ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here