ಫಾರಂ ನಂಬರ್ 3 ಸಮಸ್ಯೆ ಬಗೆಹರಿಸಿದ ಶಾಸಕ ಎಚ್ ಆರ್ ಜಿ ಗವಿಯಪ್ಪ,!

0
1184

ಜಾಗೃತಿ ಬೆಳಕು :-ಹೊಸಪೇಟೆ

ಫಾರಂ ನಂಬರ್ 3 ಸಮಸ್ಯೆ ಬಗೆಹರಿಸಿದ ಶಾಸಕ ಎಚ್ ಆರ್ ಜಿ ಗವಿಯಪ್ಪ ನಗರಸಭೆ ಸದಸ್ಯ ಮಹೇಶ್ ಮೆಚ್ಚುಗೆ ವ್ಯಕ್ತ!!

ಜೂ.24 ಹೊಸಪೇಟೆಯ ನಗರಸಭೆಯಲ್ಲಿ ಸಾಮಾನ್ಯ ಸಭೆ ನಡೆಯಿತು,,
ನಗರಸಭೆಯ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರು ಮತ್ತು ಪೌರ ಆಯುಕ್ತರ ನೇತ್ರತ್ವದಲ್ಲಿ ಸಾಮಾನ್ಯ ಸಭೆ ನಡೆಸಲಾಯಿತು
ಸಭೆಯಲ್ಲಿ ಒಳಚರಂಡಿ ಕಾಮಗಾರಿಗೆ ಸೇರಿದಂತೆ ವಾರ್ಡ್ ನಲ್ಲಿ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಪ್ರಮುಖವಾಗಿ ಹಲವಾರು ವರ್ಷಗಳಿಂದ
ಫಾರಂ ನಂಬರ್ 3 ಸಮಸ್ಯೆ ಇತ್ತು 6 ರಿಂದ 8 ತಿಂಗಳದ ವರೆಗೆ ನಗರಸಭೆಗೆ ಅಲೆದು ಅಲೆದು ಸುಸ್ತಾಗಿ ಹೋಗಿದ್ದ ಜನರ ಮುಖದಲ್ಲಿ ಸಂತಸ ಮೂಡಿದೆ ಈಗ ಫಾರಂ ನಂಬರ್ 3
ಕೇವಲ 7 ರಿಂದ 8 ದಿನದಲ್ಲಿ ಸಿಗುತ್ತದೆ ಇದೆಲ್ಲಾ ನಮ್ಮ ವಿಜಯನಗರ ಜಿಲ್ಲೆ, ಹೊಸಪೇಟೆ ಕ್ಷೇತ್ರದ ಶಾಸಕರಾದ ಎಚ್ ಆರ್ ಜಿ ಗವಿಯಪ್ಪ ನವರ ಕೃಪೆಯಿಂದ ಜನರ ಸಮಸ್ಯೆ ಬಗೆಹರಿದಿದೆ ನಗರ ಸಭೆ ಸದಸ್ಯ ಖಾರದಪುಡಿ ಮಹೇಶ್ ರವರು ಶಾಸಕರಿಗೆ ಮತ್ತು ನಗರ ಸಭೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಸಿರ್ ಸಿಂಕಲ್.ಆಜದ್ ನಗರ.ಮೀನಾಕ್ಷಿ ಲೇಔಟ್. ಹಂಪಿ ರೋಡ್. ವಾರ್ಡುಗಳ ಮುಖಾಂತರ ಮಳೆ ಬಂದರೆ ನೀರಿನ ಹಳ್ಳ ಹರಿದು ಹೋಗುತ್ತದೆ ವಾರ್ಡ್ ಗಳಲ್ಲೆಲ್ಲ ನೀರು ತುಂಬಿ ತುಳುಕುತ್ತದೆ ಜನಜೀವನ ಅಸ್ತ ವೇಸ್ತ ಆಗುತ್ತದೆ ಜೆ.ಸಿ.ಬಿ ಬೋಲ್ಡ್ ಜರ್ ಕಳಿಸಿದರೆ ಸಮಸ್ಯೆ ಬಗೆಹರಿಯಲ್ಲ.
ಜನರು ಈ ಸಮಸ್ಯೆಯಿಂದ ಹಲವಾರು ವರ್ಷಗಳಿಂದ ಕಷ್ಟ ಅನುಭವಿಸುತ್ತಿದ್ದಾರೆ ಜನಸಾಮಾನ್ಯರು ನನ್ನ ಮುಖಾಂತರ ನಗರಸಭೆ ಅಧ್ಯಕ್ಷರಿಗೆ ಮತ್ತು ಪೌರ ಆಯುಕ್ತರಿಗೆ ಇತ್ತ ಕಡೆ ಗಮನಹರಿಸಿ ಈ ಸಮಸ್ಯೆಯನ್ನು ಬಗೆಹರಿಸುವಂತೆ
ಮನವಿ ಮಾಡಿಕೊಂಡಿದ್ದಾರೆ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಡಿ.ಎಂ.ಎಸ್. ಫಂಡ್ ನಲ್ಲಿ ಸಮಸ್ಯೆ ಬಗೆಹರಿಸಿ ಕೊಡಬೇಕೆಂದು ನಗರಸಭೆ ಸದಸ್ಯ ಖಾರದ ಪುಡಿ ಮಹೇಶ್ ರವರು ಮನವಿ ಮಾಡಿಕೊಂಡರು.

ವರದಿ :-ಮಹಮ್ಮದ್ ಗೌಸ್

LEAVE A REPLY

Please enter your comment!
Please enter your name here