ಪಿಯು ಸೈನ್ಸ್ ಕಾಲೇಜು ಉಪನ್ಯಾಸಕ ಅನುಮಾನಾಸ್ಪದ ಸಾವು!!!

0
319

ಮುದ್ದೇಬಿಹಾಳ : ತಾಲೂಕಿನ ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜು ಉಪನ್ಯಾಸಕರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ತಾಲೂಕಿನ ಮಲಗಲದಿನ್ನಿ ಗ್ರಾಮದ ಬಳಿ ರಸ್ತೆ ಬದಿ ಉಪನ್ಯಾಸಕನ ಮೃತದೇಹ ಒಂದು ಕಡೆ ಬೈಕ್ ಮತ್ತೊಂದು ಕಡೆ ಬಿದ್ದಿದ್ದು ತನ್ನ ಸ್ವಂತ ಊರು ತಾಳಿಕೋಟಿಗೆ ತೆರಳುವ ವೇಳೆ ಅಪಘಾತದ ರೀತಿಯಲ್ಲಿ ಈ ಘಟನೆ ಕಂಡು ಬರುತ್ತಿದೆ.ತಾಳಿಕೋಟಿ ನಿವಾಸಿ ಕಾಶೀನಾಥ ಶರಬಯ್ಯ ಪುರಾಣಿಕಮಠ (27) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಉಪನ್ಯಾಸಕ‌.
ನಾಗರಬೆಟ್ಟದ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇವರು ನಿತ್ಯ ತಾಳಿಕೋಟಿಗೆ ಹೋಗಿ ಬರುವುದು ಮಾಡುತ್ತಿದ್ದರು.ನಿನ್ನೆ ರಾತ್ರಿ 8.20 ಕ್ಕೆ ಶಾಲೆಯಿಂದ ಊರಿನ ಕಡೆಗೆ ಬೈಕ್ ಮೇಲೆ ತೆರಳಿದ್ದಾರೆ.ಊರಿಗೆ ಬಾರದೇ ಇರುವುದರಿಂದ ಕಾಲೇಜಿನವರನ್ನು ವಿಚಾರಿಸಿದಾಗ ಅವರು ಊರಿಗೆ ತೆರಳಿದ್ದಾರೆ ಎಂದು ಕಾಲೇಜಿನವರು ಉತ್ತರಿಸಿದ್ದಾರೆ.

ಉಪನ್ಯಾಸಕನನ್ನು ಮನೆಯವರು ಹುಡುಕಾಡಿದಾಗ ರಾತ್ರಿಯಾದರು ಪತ್ತೆಯಾಗಿರಲಿಲ್ಲ ಬೆಳಿಗ್ಗೆ ರಸ್ತೆ ಬದಿ ಬೈಕ್ ಒಂದು ಕಡೆ ಉಪನ್ಯಾಸಕನ ಶವ ಒಂದು ಕಡೆ ಬಿದ್ದಿರುವುದು ಕಂಡಾಗ
ಇದೊಂದು ಅನುಮಾನಾಸ್ಪದ ಸಾವು ಎಂದು ಮೃತ ಉಪನ್ಯಾಸಕ ಕಾಶೀನಾಥನ ಪಾಲಕರು ಸಂಶಯ ವ್ಯಕ್ತಪಡಿಸಿದ್ದಾರೆ.ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿದ್ದಾರೆ.ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು,

ವರದಿ :- ಗಫುರ್ ಮುಜಾವರ್

LEAVE A REPLY

Please enter your comment!
Please enter your name here