ಪರಿಸರದ ಬಗ್ಗೆ ಜಾಗೃತಿ ಮೂಡಿಸಿದ ನಗರಸಭೆ ಸದಸ್ಯ ಮಹೇಶ್!!

0
336

ಹೊಸಪೇಟೆ ನ್ಯೂಸ್ (ಜಾಗೃತಿ ಬೆಳಕು)

ಹೊಸಪೇಟೆ ನಗರದ 20ನೇ ವಾರ್ಡ್, ನೇತಾಜಿ ಶಾಲೆಯ ಹತ್ತಿರವಿರುವ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಗೀನ್ ಆರ್ಮಿ ಅಸೋಸಿಯೇಷನ್‌ (ರಿ) ಹಾಗೂ ಸರ್ವೋಜನ ಸುಖಿನೋಭವಂತು ಟ್ರಸ್ಟ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಸನ್ಮಾನ್ಯ ಶ್ರೀ ಹೆಚ್.ಆರ್.ಗವಿಯಪ್ಪರವರು ಮಾಜಿ ಶಾಸಕರು ವಿಜಯನಗರ ಜಿಲ್ಲೆ, ಹೊಸಪೇಟೆ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನ ನೀಡಿದರು.
ಅಧ್ಯಕ್ಷತೆಯನ್ನು ಕೆ.ಮಹೇಶ್‌ ಕುಮಾರ್‌ ನಗರಸಭೆ ಸದಸ್ಯರು ಮತ್ತು ಡಿ.ಜೆ.ಮಂಜುನಾಥ್, ಕರ್ನಾಟಕ ರಾಜ್ಯ ಗ್ರೀನ್ ಆರ್ಮಿ ಅಸೋಸಿಯೇಷನ್ ಹೊಸಪೇಟೆ,ಭಾಗವಹಿಸಿದ್ದರು.


ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ಹೆಚ್.ಆರ್.ಗವಿಯಪ್ಪರವರು ಪರಿಸರದ ಬಗ್ಗೆ ಅಪಾರ ಕಾಳಜಿ, ಒಳ್ಳೆಯ ವಾತಾವರಣವನ್ನು ಬೆಳೆಸುವುದು, ಮನುಷ್ಯ ಜೀವನದ ಬಹಳ ಅವಶ್ಯಕವಾಗಿದ್ದು.
ಮನುಷ್ಯನಿಗೆ ಅವಶ್ಯಕವಾದದ್ದು ಆಮ್ಲಜನಕ
ಇದರ ಕೊರತೆಯಾದರೆ ರೋಗಗಳಿಗೆ ಆಹ್ವಾನ ಮಾಡಿದಂತಾಗುತ್ತದೆ ಆದಕಾರಣ ನಾವು ಆದಷ್ಟು ಗಿಡಮರಗಳನ್ನು ಬೆಳೆಸಬೇಕು ಇದಕ್ಕೆ ಸಂಪೂರ್ಣ ಬೆಂಬಲ ನನ್ನದಾಗಿರುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ನಂತರ ಮತನಡಿದ ಕೆ.ಮಹೇಶ್‌ ಕುಮಾರ್‌ರವರು ಮುಂದಿನ ದಿನಗಳಲ್ಲಿ 20ನೇ ವಾರ್ಡ್‌ನಲ್ಲಿ ಅಪಾರ ಗಿಡಮರಗಳನ್ನು ಬೆಳೆಸಿ ಹಸಿರುಮಯವನ್ನಾಗಿ ಮಾಡುತ್ತೇನೆಂದು ಹೇಳಿದರು.ನಂತರ ಡಿ.ಜೆ.ಮಂಜುನಾಥರವರು ಮಾತನಾಡಿ ‘ಮನೆಗೊಂದು ಊರಿಗೊಂದು ತೋಪು, ತಾಲೂಕಿಗೊಂದು ಕಿರು ಅರಣ್ಯ ಜಿಲ್ಲೆಗೊಂದು ಕಾಡು, ನಿರ್ಮಿಸುವುದರಿಂದ ಕಾಲಕಾಲಕ್ಕೆ ಮಳೆಯಾಗುತ್ತದೆ. ಮುಂದಿನ ಪೀಳಿಗೆಗೆ ಉತ್ತಮವಾದ ಗಾಳಿ ಉತ್ತಮವಾದ ಆಹಾರ, ಉತ್ತಮ ಆರೋಗ್ಯ ಪ್ರಕೃತಿ ನಮಗೆ ದೊರಕಿಸಿಕೊಡುತ್ತದೆ.


ಈ ಕಾರ್ಯಕ್ರಮದಲ್ಲಿ ಎಂ.ಎಸ್.ಪಿ.ಎಲ್, ಪರಿಸರ ಅಧಿಕಾರಿಗಳಾದ ನಾಗರಾಜ್‌, ನಗರಸಭೆ ಸದಸ್ಯರುಗಳಾದ ರೋಹಿಣಿ ವೆಂಕಟೇಶ್‌, ಪರಗಂಟ ಗುಜ್ಜಲ್‌ ರಾಘವೇಂದ್ರ, ಗೌಸ್, ಮುನ್ನಿ, ಮಂಜುನಾಥ, ಸಂತೋಷ, ಹುಲುಗಪ್ಪ, ಸತ್ಯನಾರಾಯಣ, ಮಾಜಿ ನಗರಸಭೆ ಸದಸ್ಯರಾದ ಗಂಜಿ ಮಂಜುನಾಥ. ಯುವ ಮುಖಂಡರು ಮೊಹಮ್ಮದ ರಿಯಾನ್, ಗುಜ್ಜಲ್ ಧರ್ಮಪ್ಪ, ಇಂಬಾನ್, ಹಾಗೂ ಗ್ರೀನ್ ರಾಜ್ಯ ಗೌರವಾಧ್ಯಕ್ಷರಾದ ಎ.ಶಾಂತ್ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ರಘುನಾಯಕ, ರಾಜ್ಯ ಉಪಾಧ್ಯಕ್ಷರು ಜೆ.ಕುಬೇರ, ತಾಲೂಕು ಅಧ್ಯಕ್ಷರು ಕೇಶವರಾಜ್, ವಲಿಬಾಷ ತಾಲೂಕು ಉಪಾಧ್ಯಕ್ಷರು, ಕುಂಬಾರ ಸಂತೋಷ, ಪ್ರಭಾಕರ್, ಹಾಗೂ ಸರ್ವೆಜನ ಸುಖಿನೋಭವಂತ್ ಟ್ರಸ್ಟ್‌ನ ಪದಾಧಿಕಾರಿಗಳು, 20th ವಾರ್ಡ್‌ನ ಮುಖಂಡರು. ಯುವಕರು, ಸಾರ್ವಜನಿಕರು ಭಾಗವಹಿಸಿ 250 ಕು ಹೆಚ್ಚು ಸಸಿ ನೆಡುವ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ:-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here