ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ.ಮುಖ್ಯ ಕ.ನಿ.ಅಧಿಕಾರಿಗೆ ದೂರು ನೀಡಿದ ಸಣ್ಣಕ್ಕಿ ಲಕ್ಷ್ಮಣ್ ಜಿಲ್ಲಾ ಅಧ್ಯಕ್ಷರು!!!

0
1201

ವಿಜಯನಗರ ಜಿಲ್ಲೆ – ಬಿಗ್ ಬ್ರೇಕಿಂಗ್

ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭೋಯರ್ ಹರ್ಷಲ್ ನಾರಾಯಣರಾವ್ ರವರನ್ನು ಭೇಟಿ ಮಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಯ ಸಾಮಗ್ರಿ ಮೊತ್ತ ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಮತ್ತು ಸಾಮಾನ್ಯ ಸಭೆಗಳು ನಡೆಯದಿರುವುದು ನಡವಳಿ ಪ್ರತಿಗಳನ್ನು ಸದಸ್ಯರಿಗೆ ನೀಡದಿರುವುದು ಸರ್ಕಾರದ ಸುತ್ತೋಲೆಗಳ ಮಾಹಿತಿಯನ್ನು ನೀಡದಿರುವುದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳಿಗೆ ಸರಿಯಾಗಿ ಭೇಟಿ ನೀಡದಿರುವುದು ಸದಸ್ಯರ ಮಾತುಗಳಿಗೆ ನಿರ್ಲಕ್ಷ್ಯ ತೋರಿಸುವುದು ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮಗಳ ಸಮಸ್ಯೆಗಳನ್ನು ಅಭಿವೃದ್ಧಿ ಅಧಿಕಾರಿಗಳಿಗೆ ಹೇಳಿಕೊಂಡರೆ ಸ್ಪಂದಿಸದಿರುವುದು ನಮ್ಮ ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿ ನಡೆಯುವ ಮಾದರಿ ಕೆಲಸಗಳನ್ನು ನಮ್ಮ ಜಿಲ್ಲೆಯಲ್ಲಿ ನಡೆಯುವಂತೆ ಕ್ರಮವಹಿಸಬೇಕೆಂದು ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದ ಸಣ್ಣಕ್ಕಿ ಲಕ್ಷ್ಮಣ್
ಕರ್ನಾಟಕ ರಾಜ್ಯ #ಗ್ರಾಮ ಪಂಚಾಯತಿ
ಸದಸ್ಯರ ಒಕ್ಕೂಟದ #ವಿಜಯನಗರ ಜಿಲ್ಲಾ #ಅಧ್ಯಕ್ಷರು

ಕೊಟ್ಟೂರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ನಿರ್ಲಕ್ಷ್ಯ ಹಾಗೂ 15ನೇ #ಹಣಕಾಸಿನ ಬಿಲ್ ಮಾಡಲು ಇಂಜಿನಿಯರುಗಳ ನಿರ್ಲಕ್ಷ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕೊರತೆ ಇನ್ನಿತರ ನಮ್ಮ ವಿಜಯನಗರ ಜಿಲ್ಲೆಯ ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಡೆಯ ಬಗ್ಗೆ ಕುಲಂಕುಶವಾಗಿ ಚರ್ಚಿಸಿ ನಂತರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡಿ ನಾವುಗಳು ಸಮಸ್ಯೆಗಳನ್ನು ಆದಷ್ಟು ಬೇಗನೆ ಸರಿಪಡಿಸುತ್ತೇವೆ ನಿಮ್ಮ ಮಾಹಿತಿಯಿಂದ ನಮಗೆ ತುಂಬಾ ಸಹಕಾರಿಯಾಗಿದೆ ನೀವು ಕೇಳಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಾಮಗ್ರಿ ಮೊತ್ತದಲ್ಲಿ 10 #ಕೋಟಿ BOC ಮೊತ್ತವನ್ನು ವಿಜಯನಗರ ಜಿಲ್ಲೆಗೆ ತರಲು ಹತ್ತು ದಿನಗಳ ಕಾಲ ನಮ್ಮ ಜಿಲ್ಲೆಯ ಅಧಿಕಾರಿಗಳನ್ನು ಬೆಂಗಳೂರಿನಲ್ಲಿ ಇರಿಸಲಾಗಿತ್ತು ಇನ್ನುಳಿದ ಬಾಕಿ ಮೊತ್ತಕ್ಕೆ ಪ್ರಯತ್ನಿಸುತ್ತಿದ್ದೇವೆ ಮುಂದಿನ ದಿನಗಳಲ್ಲಿ ಬಾಕಿ ಮೊತ್ತವನ್ನು ನಾವು ನಮ್ಮ ಜಿಲ್ಲೆಗೆ ತರುತ್ತೇವೆ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಸಾಮಾನ್ಯ ಸಭೆಗಳ ನಡಾವಳಿಗಳನ್ನು ನೋಟಿಸ್ ಬೋರ್ಡಿನಲ್ಲಿ ತಪ್ಪದೆ ಲಗತ್ತಿಸುವುದು ಗ್ರಾಮ ಪಂಚಾಯಿತಿ ಸದಸ್ಯರಿಗೆ ಪ್ರತಿಗಳನ್ನು ನೀಡುವುದು ಅಥವಾ ವಾಟ್ಸಪ್ ಗ್ರೂಪ್ ಗಳ ಮೂಲಕ ಹಂಚಿಕೊಳ್ಳುವ ಕೆಲಸವನ್ನು ಮಾಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಮತ್ತು ವಿಜಯನಗರ ಜಿಲ್ಲೆಯಲ್ಲಿ 137 ಗ್ರಾಮ ಪಂಚಾಯತಿಗಳಿಗೆ 80 ಅಭಿವೃದ್ಧಿ ಅಧಿಕಾರಿಗಳು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನಾವು ಅಧಿಕಾರಿಗಳನ್ನು ನೇಮಿಸುವ ಪ್ರಯತ್ನ ನಾವು ಮಾಡಿದ್ದೇವೆ ಇನ್ನುಳಿದ 57 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಕೆಲಸ ಸರಕಾರ ಮಾಡಬೇಕಾಗಿದೆ ಇದರ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸ ನಿಮ್ಮದಾಗಿರುತ್ತದೆ ಮುಂದಿನ ದಿನಗಳಲ್ಲಿ ಇಂತಹ #ಸಮಸ್ಯೆಗಳನ್ನು ಮರುಕಳಿಸಿದಂತೆ ಕ್ರಮ ವಹಿಸುತ್ತೇವೆ ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭೋಯರ್ ಹರ್ಷಲ್ ನಾರಾಯಣರಾವ್ ರವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ
ಸಣ್ಣಕ್ಕಿ ಲಕ್ಷ್ಮಣ್
ಕರ್ನಾಟಕ ರಾಜ್ಯ #ಗ್ರಾಮ ಪಂಚಾಯತಿ
ಸದಸ್ಯರ ಒಕ್ಕೂಟದ #ವಿಜಯನಗರ ಜಿಲ್ಲಾ #ಅಧ್ಯಕ್ಷರು
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೈ ಚನ್ನಪ್ಪ ರವರು ಹೊಸಪೇಟೆ ತಾಲೂಕು ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಗೋವಿಂದ ನಾಯಕ್ ರವರು ಹಾಗೂ ಜಿಲ್ಲಾ ಮತ್ತು ತಾಲೂಕು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here