ನೂತನ ವಿಜಯನಗರ ಜಿಲ್ಲೆಗೆ ರಾಜ್ಯ ಚುನಾವಣಾ ಆಯೋಗದಿಂದ ಹೊಸಪೇಟೆ ನಗರಸಭೆಯ ಚುನಾವಣೆ ದಿನಾಂಕ ಘೋಷಣೆ

0
565

ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್

ದಿನಾಂಕ: 07-03-2013 ರಂದು ಚಿಕ್ಕಮಗಳೂರು, ಗದಗ-ಬೆಟಗೇಲಿ, ಹೊಸಪೇಟೆ ಮತ್ತು ಶಿರಾ ನಗರಸಭೆಗಳು ಹಾಗೂ ಅಥಣಿ, ಅಣ್ಣಿಗೇರಿ ಮತ್ತು ಬಂಕಾಪುರ ಪುರಸಭೆಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲಾಗಿರುತ್ತದೆ. ಸದರಿ ನಗರ ಸ್ಥಳೀಯ ಸಂಸ್ಥೆಗಳ ಅವಧಿಯು 2019ನೇ ಸಾಲಿನ ಮಾರ್ಚ್ ಮಾಹೆಯ ವಿವಿಧ ದಿನಾಂಕಗಳಲ್ಲಿ ಮುಕ್ತಾಯವಾಗಿರುತ್ತದೆ. ಸದರಿ 7 ನಗರ ಸ್ಥಳೀಯ ಸಂಸ್ಥೆಗಳಿಗೆ (ಅನುಬಂಧ-1) 2011ರ ಜನಗಣತಿಯಂತ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆ ಮಾಡಿ, ವಾರ್ಡುವಾರು ಮೀಸಲಾತಿಯನ್ನು ನಿಗದಿಪಡಿಸಿ ಅಧಿಸೂಚಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ಸರ್ಕಾರವು ನಿಗದಿಪಡಿಸಿದ ಕ್ಷೇತ್ರವಿಂಗಡಣೆ ಮತ್ತು ವಾರ್ದುವಾರು ಮೀಸಲಾತಿ ಅಧಿಸೂಚನೆಗಳನ್ನು ಪ್ರಶ್ನಿಸಿ ಮಾನ್ಯ ಉಚ್ಚನ್ಯಾಯಾಲಯದ ವಿವಿಧ ಪೀಠಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಪ್ರಸ್ತುತ ಬೆಂಗಳೂರು, ಮಾನ್ಯ ಉಚ್ಚ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದಾಖಲು ಮಾಡಿಕೊಂಡಿದ್ದು, ಪ್ರಕರಣ ಸಂಖ್ಯೆ: 14925/2020 (SUO-MOTU) ರಲ್ಲಿ ನೀಡಲಾದ ಮಧ್ಯಂತರ ಆದೇಶದಂತ ಸರ್ಕಾರವು ಪರಿಷ್ಕೃತ ವಾರ್ಡುವಾರು ಮೀಸಲಾತಿಯನ್ನು ಆಯೋಗಕ್ಕೆ ದಿನಾಂಕ: 26.11.2021 ರೊಳಗೆ ಒದಗಿಸುವಂತೆ ಹಾಗೂ ದಿನಾಂಕ: 30.12.2021ರ ಒಳಗೆ ಅವಧಿ ಮುಕ್ತಾಯಗೊಂಡಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ಆದೇಶಿಸಿದೆ. ಅದರಂತ, ಸರ್ಕಾರವು ವಾರ್ಡುವಾರು ಅಂತಿಮ ಮೀಸಲಾತಿಯನ್ನು ನಿಗದಪಡಿಸಿ ಅಧಿಸೂಚಿಸಿ ರಾಜ್ಯ ಪತ್ರದಲ್ಲಿ ಪುಕಟಿಸಿದೆ.

2016ನೇ ಸಾಲಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲಾದ 51 ನಗರ ಸ್ಥಳೀಯ ಸಂಸ್ಥೆಗಳ ಅವಧಿಯು 2021ನೇ ಸಾಲಿನ ವಿವಿಧ ಮಾಹಗಳಲ್ಲಿ ಮುಕ್ತಾಯವಾಗಿರುತ್ತದೆ. ಸದರಿ 51 ನಗರ ಸ್ಥಳೀಯ ಸಂಸ್ಥೆಗಳಿಗೂ (ಅನುಬಂಧ-2) 2011ರ ಜನಗಣತಿಯಂತೆ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆ ಮಾಡಿ, ವಾರ್ಡುವಾರು ಮೀಸಲಾತಿಯನ್ನು ನಿಗದಿಪಡಿಸಿ ಅಧಿಸೂಚಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ಒಟ್ಟು 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದು, ವಾರ್ಡುವಾರು ಮತದಾರರ ಪಟ್ಟಿಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಈಗಾಗಲೇ ಪ್ರಕಟಪಡಿಸಿರುತ್ತಾರೆ. ಅಂತಿಮ ವಾರ್ಡುವಾರು ಮೀಸಲಾತಿಯನ್ನು ಆಯೋಗದ ವೆಬ್‌ಸೈಟ್ www.karsec.gov.in ಪ್ರಚಾರ ಪಡಿಸಲಾಗಿದೆ ಹಾಗೂ ಈ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here