ನೀರಿನ ಸಮಸ್ಯೆ ಬಗೆಹರಿಸಿದ ನಗರಸಭೆ ಆಯುಕ್ತರು ಮನೋಹರ್,!

0
235

ವಿಜಯನಗರ ಜಿಲ್ಲೆ:- ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್)

ಮೇ,18.ಹೊಸಪೇಟೆ ನಗರದ 9ನೇ ವಾರ್ಡ್ 4ನೇ ಕ್ರಾಸ್ ಸಿದ್ದಲಿಂಗಪ್ಪ ಚೌಕಿ ನೀರಿನ ಸಮಸ್ಯೆ ಬಗ್ಗೆ ಮೇ,17 ರಂದು ಪ್ರಜಾವಾಹಿನಿ ದಿನಪತ್ರಿಕೆ ಮತ್ತು ಜಾಗೃತಿ ಬೆಳಕು ಪತ್ರಿಕೆಯಲ್ಲಿ ಸುದ್ದಿ ಮಾಡಲಾಗಿತು.

ಈ ಸಮಸ್ಯೆಯ ಬಗ್ಗೆ ನಮ್ಮ ಪತ್ರಿಕೆಯ ಮುಖಾಂತರ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದ ತಕ್ಷಣವೇ ನಗರಸಭೆ ಆಯುಕ್ತರಿಗೆ ಈ ಸಮಸ್ಯೆಯನ್ನು ಬಗೆಹರಿಸಲು ಸೂಚನೆ ನೀಡಿರುತ್ತಾರೆ ತಕ್ಷಣವೇ ನಗರಸಭಾ ಆಯುಕ್ತರಾದ ಮನೋಹರ್ ರವರು ಮತ್ತು ನಗರಸಭೆ ಸದಸ್ಯ ಮುನ್ನಿ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಪರಿಶೀಲನೆ ಮಾಡಿ ಎರಡು ದಿನದಲ್ಲಿ ಹೊಸ ಬೋರ್ವೆಲ್ ಟ್ಯಾಂಕ್ ಅಳವಳಿಸಲಾಗುವುದೆಂದು ಜನರಲ್ಲಿ ಮನವಿ ಮಾಡಿಕೊಂಡರು.

ನಗರಸಭೆ ಆಯುಕ್ತರು ಜಿಲ್ಲಾ ವರದಿಗಾರರಾದ ಮೊಹಮ್ಮದ್ ಗೌಸ್ ರವರಿಗೆ ದೂರವಾಣಿ ಮುಖಾಂತರ ಎರಡು ಮೂರು ದಿನದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವರದಿ :-ಮಹಮ್ಮದ್ ಗೌಸ್

LEAVE A REPLY

Please enter your comment!
Please enter your name here