ನಗರಸಭೆಯ ಅಧ್ಯಕ್ಷಿಣಿ ಬದಲಾವಣೆ ಸಾಧ್ಯವೇ ಜನಸಾಮಾನ್ಯರ ಮನೆಮಾತು,!

0
329

ಹೊಸಪೇಟೆ :- ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್)

ನಾವೆಲ್ಲರೂ ಒಟ್ಟಿಗಿದ್ದೇವೆ ಆವಿಶ್ವಾಸ ಮಂಡನೆ ಪ್ರಮೆಯವೇ ಇಲ್ಲ : ನಗರಸಭೆ ಅಧ್ಯಕ್ಷಿಣಿ ಸುಂಕಮ್ಮ

ನಗರ ಸಭೆಯ ಸಭಾಂಗಣದಲ್ಲಿ ವಿಶೇಷ ಸಾಮಾನ್ಯ ಸಭೆ ಮುಗಿದ ನಂತರ, ಕೆಲ ನಗರಸಭಾ ಸದಸ್ಯರು ಅವಿಶ್ವಾಸ ಮತ ಮಂಡನೆಯ ಮಾತುಗಳು ಕೇಳಿಬರುತ್ತಿವೆ ನಿಮ್ಮ ಅಭಿಪ್ರಾಯಗಳೇನು ಎನ್ನುವ ಮಾಧ್ಯಮದವರ ಪ್ರಶೆಗೆ ಉತ್ತರಿಸಿದ ಅಧ್ಯಕ್ಷಿನಿ ಸುಂಕಮ್ಮ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ಕೆಲವರು ಸುಖಾಸುಮ್ಮನೆ ಅವಿಶ್ವಾಸ ಮಂಡನೆಯ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಸದಸ್ಯರು ಯಾರೂ ತಲೆ ಕೆಡಿಸಿಕೊಳ್ಳಬಾರದು ಎಂದರು.

ಬಿಜೆಪಿ ಪಕ್ಷದಿಂದ ಆಯ್ಕೆಯಾದ ನಾವು ಇಲ್ಲಿಯವರೆಗೂ ಸುಸೂತ್ರವಾಗಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಆಡಳಿತ ನಡೆಸುತ್ತಿದ್ದೇವೆ. ಸಾರ್ವಜನಿಕರಿಗೆ ಅನುಕೂಲ ವಾಗುವ ಕೆಲಸಗಳನ್ನು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇತ್ತೇನೆ. ಅವಧಿ ಮುಗಿದ ನಂತರ ಬಿಜೆಪಿ ಪಕ್ಷವೇ ನಗರಸಭೆ ಆಡಳಿತದ ಚುಕ್ಕಾಣಿ ಮುನ್ನಡೆಸಲಿದೆ. ನಮ್ಮೊಂದಿಗೆ ಪೌರಾಯುಕ್ತರು ಸಹ ಅಭಿವೃದ್ಧಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಸದಸ್ಯರಲ್ಲಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ, ಅಸಮಾಧಾನಗಳು, ತರತಮ್ಯಗಳಾಗಲಿ ಇಲ್ಲ, ಎಲ್ಲಾ ಸದಸ್ಯರು ನಗರದ ಅಭಿವೃದ್ಧಿಗಾಗಿ ಒಂದೇ ಕುಟುಂಬದಂತೆ ಕೆಲಸಮಾಡುತ್ತಿದ್ದೇವೆ. ಎಲ್ಲಾ ಸದಸ್ಯರು ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಎಲ್ ಎಸ್ ಆನಂದ್ ಇದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here