ದಿವಂಗತ ಹುಲುಗೇಶ್ ಅವರ ಮನೆಗೆ ಭೇಟಿ ನೀಡಿದ ಬಂಗ್ಲೆ ಮಲ್ಲಿಕಾರ್ಜುನ್..!!

0
198

ವಿಜಯನಗರ ಜಿಲ್ಲೆ ಕೊಟ್ಟೂರು

ಕೊಟ್ಟೂರಿನ ಕಾ.ನಿ.ಪ.ಸಂಘದ ಅಧ್ಯಕ್ಷರು ಹಾಗೂ ಪತ್ರಕರ್ತರಾದ ದಿವಂಗತ ಹುಲುಗೇಶ್ ರವರ ಕುಟುಂಬ ವರ್ಗಕ್ಕೆ ಬಂಗ್ಲೆ ಯವರಿಂದ ಸಾಂತ್ವನ..

ವಿಜಯನಗರ ಜಿಲ್ಲಾ ಕೊಟ್ಟೂರು ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಹುಲುಗೇಶ್ ರವರ ಮನೆಗೆ ಭೇಟಿ ನೀಡಿ ನನ್ನ ಕೈಲಾದ ಆರ್ಥಿಕ ನೆರವು ಅವರ ಶ್ರೀಮತಿಯವರಿಗೆ ತಲುಪಿಸಿ,ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಬರುವ ನನ್ನ ಆತ್ಮೀಯ ಪತ್ರಕರ್ತರಲ್ಲಿ ವಿನಂತಿಸುವುದೇನೆಂದರ ಕೈಲಾದ ಆರ್ಥಿಕ ನೆರವು ಆ ಕುಟುಂಬ ವರ್ಗಕ್ಕೆ ಸಹಾಯ ಒದಗಿಸಿರಿ ಜೊತೆಗೆ ವಿಜಯನಗರ ಜಿಲ್ಲಾ ಕಾ.ನಿ.ಪ.ಸಂಘದ ಹಂಗಾಮಿ ಅಧ್ಯಕ್ಷರಾದ ಸತ್ಯನಾರಾಯಣರವರಲ್ಲಿ ವಿನಂತಿಸಿ ರಾಜ್ಯ ಸಂಘದಿಂದ 25 ಸಾವಿರ ರೂಗಳ ಸಹಾಯ ಧನವನ್ನು ಒದಗಿಸಿ ದಿವಂಗತರಾದ ಆತ್ಮೀಯ ಪತ್ರಕರ್ತ ಮಿತ್ರರಾದ ಹುಲುಗೇಶ್ ರವರ ಮೂರು ಚಿಕ್ಕ ಮಕ್ಕಳ ವಿಧ್ಯಾಬ್ಯಾಸಕ್ಕೆ ನೆರವಿನ ಹಸ್ತ ಚಾಚುವುದರ ಜೊತೆಗೆ ಹುಲುಗೇಶ್ ಕಾರ್ಯನಿರ್ವಹಿಸುತ್ತಿದ್ದ ಬಳ್ಳಾರಿ ಬೆಳಗಾಯಿತು ಪತ್ರಿಕೆಯ ಸಂಪಾದಕರಿಂದನೂ ಜಿಲ್ಲಾ ಸಂಘವು ಆರ್ಥಿಕ ನರೆವಿಗೆ ಪ್ರಯತ್ನಿಸಬೇಕೆಂದು ಕಳಕಳಿಯ ವಿನಂತಿ.ಬಂಗ್ಲೆ ಮಲ್ಲಿಕಾರ್ಜುನ,ಮಾ.ರಾಜ್ಯ ಕಾರ್ಯದರ್ಶಿಗಳು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ.ಮೋ:-9535290300

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here