ದಿನಾಂಕ 20ರಂದು ಮುಸ್ಲಿಂ ಸಮಾಜದವರು ಸ್ವಯಂಪ್ರೇರಿತವಾಗಿ ಹೊಸಪೇಟೆ ಬಂದ್!!!

0
538

ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್

ತ್ರಿಪುರದಲ್ಲಿ ಎಂ. ಸ್ವಾಮಿ ನರಸಿಂಗಾನಂದ ಮುಸ್ಲಿಂ ಧರ್ಮದ ಮತ್ತು ಪೈಗಂಬರ್ ಮೊಹಮ್ಮದ್ ರವರ ಬಗ್ಗೆ ಅವಾಚ್ಯ ಶಬ್ದಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹೇಳಿರುವ ಬಗ್ಗೆ

ಮುಸ್ಲಿಂ ಧರ್ಮವೆಂದರೆ ಮತ್ತು ಗುರುಗಳು ಎಂದರೆ ಅಷ್ಟು ಕೀಳಾಗಿ ನೋಡುತ್ತಿರುವ ಇಂತಹ ಸ್ವಾಮಿಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಇಡೀ ರಾಜ್ಯಾದ್ಯಂತ ಮತ್ತು ದೇಶಾದ್ಯಂತ ಮುಸ್ಲಿಮ್ಸ್ ಪರ ಸಂಘಟನೆಗಳು ಮತ್ತು ಮುಸ್ಲಿಂ ಸಮಾಜದ ಅಂಜಮನ್ ಖಿದ್ಮಾತ್-ಎ - ಇಸ್ಲಾಂ ಇವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ...

ಒಂದು ಧರ್ಮದ ಬಗ್ಗೆ ಧರ್ಮದ ಗುರುಗಳ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಇಂಡಿಯನ್ ಪಿನಲ್ ಕೋರ್ಟ ಪ್ರಕಾರ ಅಕ್ಷಮ್ಯ ಅಪರಾಧ. ಅವರನ್ನು ಶಿಕ್ಷೆಗೆ ಒಳಪಡಿಸಬಹುದು

ವಿಜಯನಗರ ಜಿಲ್ಲೆಯಲ್ಲಿ
ಅಂಜಮನ್ ಖಿದ್ಮಾತ್-ಎ – ಇಸ್ಲಾಂ ನೇತೃತ್ವದಲ್ಲಿ ಸ್ವಯಂಪ್ರೇರಿತವಾಗಿ ಮುಸ್ಲಿಂ ಸಮಾಜದವರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಕೊಂಡು ಪ್ರತಿಭಟನೆಗೆ ಸೂಕ್ತ ಬೆಂಬಲ ಸೂಚಿಸಬೇಕೆಂದು ವಿಜಯನಗರ ಜಿಲ್ಲೆಯ ಅಂಜಮನ್ ಖಿದ್ಮಾತ್-ಎ-ಇಸ್ಲಾಂ ಅಧ್ಯಕ್ಷರಾದ ಖಾದರ್ ರಫಾಯಿ ಮತ್ತು ಸದಸ್ಯರು ಜನರಲ್ಲಿ ಮನವಿ….

 ಇದು ಮೊದಲನೆಯದು ಮತ್ತು ಕೊನೆಯದಾಗಿ ಇರಬೇಕು ಇಸ್ಲಾಂ ಧರ್ಮದ ಬಗ್ಗೆ ಏನಾದರೂ ಕೆಟ್ಟ ಪದ ಬಳಕೆ ಮಾಡುವ ಕಿಂತ ಮುನ್ನ  ಅವರ ಮೇಲೆ ಯಾವತರ ಕಾನೂನು ಕ್ರಮ ತೆಗೆದುಕೊಳ್ಳುತೆ ಸರ್ಕಾರ ಎಂದು ಅವರಿಗೆ ಅರಿವು ಮೂಡಿಸುವ ಅಧಿಕಾರಿಗಳಿಗೆ ಮನವಿ ಕೊಟ್ಟು ಅವರಿಗೆ ಶಿಕ್ಷೆ ಕೊಡಿಸುವ ಉದ್ದೇಶ ನಮ್ಮದು,, ಎಂದು ಅಂಜಮನ್ ಖಿದ್ಮಾತ್-ಎ-ಇಸ್ಲಾಂ ಅಧ್ಯಕ್ಷರಾದ ಖಾದರ್ ರಫಾಯಿ ಮಾಧ್ಯಮ ಮುಂದೆ ಹೇಳಿಕೊಂಡರು 

 ಮನವಿ ಮುಸ್ಲಿಂ ಸಮಾಜದ ಜನಸಾಮಾನ್ಯರು ಶಾಂತಿಯುತವಾಗಿ ದರ್ಗಾ ಜಾಮಿಯಾ ಮಸ್ಜಿದ್ ಮುಂಭಾಗ 20ನೇ ತಾರೀಖಿನಂದು ಶನಿವಾರದಂದು ಸರಿಯಾಗಿ  ಬೆಳಿಗ್ಗೆ 10:30 ಸೇರಬೇಕಾಗಿ ವಿನಂತಿ,,

ನಮ್ಮ ಪೈಗಂಬರ್ ಅವರ ಸಂದೇಶ ಶಾಂತಿ ಸೌಹಾರ್ದ ಇದನ್ನು ಗಮನದಲ್ಲಿಟ್ಟುಕೊಂಡು ಜೊತೆಯಲ್ಲಿ ಬಲಪ್ರದರ್ಶನ ಮಾಡೋಣ ಜನಸಾಮಾನ್ಯರ ಮಾತಾಗಲಿ,,,

ಅಂಜಮನ್ ಕಿದ್ಮಾತ್-ಎ – ಇಸ್ಲಾಂ ಮುಖ್ಯಸ್ಥರು
ಖಾದರ್ ರಫಾಯಿ ಮತ್ತು ಸದಸ್ಯರು

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here