ದಲಿತ ವಿರೋಧಿ ಸಚಿವ ಪ್ರಭು ಚವಾಣ್ ಕಾಂಗ್ರೆಸ್ ಮುಖಂಡ ಸುಧಾಕರ್ ಕೊಳ್ಳುರ ಆರೋಪ..!!

0
278

ಔರಾದ್ ಕ್ಷೇತ್ರ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದ,ಇಲ್ಲಿಯ ಶಾಸಕರಾಗಿ ಮೂರನೇ ಅವಧಿಗೆ ಆಯ್ಕೆಯಾಗಿರುವ ಸಚಿವ ಪ್ರಭು ಚವಾಣ್ ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ದುರ್ಬಳಕೆ ಮಾಡಿಕೊಂಡು ದಲಿತರ ಮೇಲೆ ದೌರ್ಜನ್ಯ ನಡೆಸುವ ಜೊತೆಗೆ ದಲಿತವಿರೋಧಿ ಯಾಗಿದ್ದಾರೆ.

ತಾಲೂಕಿನ ಬಹುತೇಕ ದಲಿತರು ಓಣೆಗಳಲ್ಲಿ ಕುಡಿಯುವ ನೀರಿಲ್ಲ ಇತರೆ ಮೂಲಭೂತ ಸೌಕರ್ಯಗಳಿಲ್ಲ, ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ scp-tsp ಅನುದಾನ ದುರ್ಬಳಕೆ ಮಾಡಿಕೊಂಡು ದಲಿತರಿಗೆ ಮೋಸ ಮಾಡಿದ್ದಾರೆ,
ದಲಿತ ಸಮುದಾಯದ ಜನಾಂಗಕ್ಕೆ ನೀಡಬೇಕಾದ ಮೂಲಭೂತ ಸೌಕರ್ಯಗಳ ಅನುದಾನವು ದುರ್ಬಳಕೆ ಮಾಡಿಕೊಂಡು ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ.
ದಲಿತ ಓಣೆಗಳೆಗಳಲ್ಲಿ ಕುಡಿಯಲು ನೀರಿಲ್ಲ, ರಸ್ತೆ, ಚರಂಡಿಗಳು ಸರಿಯಾಗಿಲ್ಲ, ಹಾಗಾದರೆ ದಲಿತರ ಅಭಿವೃದ್ಧಿಗಾಗಿ ಬಳಸಲಾದ scp-tsp ಯೋಜನೆ ಅನುದಾನ ಏಲ್ಲಿ ಹೋಯಿತು! ಯಾರ ಮನೆ ತುಂಬಿತ್ತು. ಎಂದು ಸಚಿವರು ಹೇಳಲಿ.
ಸಚಿವರು ತಮಗೆ ಬೇಕಾದ ಗುತ್ತೇದಾರ್ ಗಳಿಗೆ ಕೆಲಸ ನೀಡಿ ಅವರ ಮುಖಾಂತರ ಹಣ ಪಡೆದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಇದರ ಬಗ್ಗೆ ಸಚಿವರು ಸ್ಪಷ್ಟೀಕರಣ ಕೊಡಬೇಕು.

ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ,
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಜನರ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ಇಲ್ಲಿಯ ಶಾಸಕರು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಿಂದ ಈ ಸಮುದಾಯಗಳ ಜನರ ಓಣೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಎಂದು ಕಾಂಗ್ರೆಸ್ ಮುಖಂಡರಾದ ಸುಧಾಕರ ಕೊಳ್ಳುರ ಅವರು ಆರೋಪಿಸಿದ್ದಾರೆ
.

ದಲಿತ ಹೆಣ್ಣುಮಕ್ಕಳ ಮದುವೆಗೆ ವರದಕ್ಷಣೆ ನೀಡಿ ಮದುವೆ ಮಾಡಿದ್ದೇನೆ ಎಂದು ಹೇಳಿಕೆ ನೀಡಿರುವ ಸಚಿವರು ವರದಕ್ಷಿಣೆ ನೀಡುವುದು ಕಾನೂನು ಬಾಹಿರ ಇದು ದೊಡ್ಡ ಅಪರಾಧ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರ ಈ ರೀತಿ ಕಾನೂನು ಬಾಹಿರ ಹೇಳಿಕೆ ನೀಡಿದ್ದಾರೆ ಇದು ಅಪರಾಧ.
ಎಲ್ಲೋ ಒಂದು ಕಡೆ ದಲಿತರ ಹೆಣ್ಣು ಮಗಳ ಮದುವೆಗೆ ಹಣ ನೀಡಿರುವುದು ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿರುವುದು ನೋಡಿದರೆ ಅವರು ದಲಿತರ ಮೇಲೆ ಎಷ್ಟರಮಟ್ಟಿಗೆ ಗೌರವ ಇಟ್ಟಿದ್ದಾರೆ ಮತ್ತು ಯಾವ ಉದ್ದೇಶಕ್ಕಾಗಿ ಸಹಾಯ ಮಾಡಿದ್ದಾರೆ ಎಂಬುದು ತೋರಿಸಿಕೊಡುತ್ತದೆ.

ವರದಿ:- ಸುಧೀರ ಕುಮಾರ್ ಬೀ ಪಾಂಡ್ರೆ

LEAVE A REPLY

Please enter your comment!
Please enter your name here