ತನ್ನ ಮಕ್ಕಳನ್ನು ಕೊಂದು ತಾನು ನೇಣಿಗೆ ಶರಣಾದ ತಾಯಿ,,!

0
147

ವಿಜಯನಗರ ಜಿಲ್ಲೆ,ಹರಪನಹಳ್ಳಿ :-ಹುಲಿಕಟ್ಟಿ:- ಜಾಗೃತಿ ಬೆಳಕು ನ್ಯೂಸ್ (ಬಿಗ್ ಬ್ರೇಕಿಂಗ್ ನ್ಯೂಸ್)

  ಮಕ್ಕಳು ಮಾತು ಕೇಳುತ್ತಿಲ್ಲ ಎಂದು ಮಗಳನ್ನು ಕೊಂದು ನೇಣಿಗೆ ಶರಣಾದ ತಾಯಿ, ಮಗನಿಗೆ ತೀವ್ರ ಗಾಯ,,

ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲ್ಲೂಕ್, ಹುಲಿಕಟ್ಟಿ ಗ್ರಾಮದ ಶ್ರೀಮತಿ ಬೆಂಗ ಗಂಡ ಲೇ. ಶಫಿ ಸಾಬ್, 50 ವರ್ಷ, ಅಡುಗೆ ಕೆಲಸ, ಅವರ ಮಕ್ಕಳಾದ ಕುಮಾರಿ ಶಮಾ ಬಾನು, 18 ವರ್ಷ ಹಾಗು ಮಗನಾದ ಅಮಾನುಲ್ಲಾ, 16 ವರ್ಷ ಇವರು ತನ್ನ ಮಾತನ್ನು ಕೇಳುತ್ತಿಲ್ಲ ಹಾಗು ಮನೆಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ವಿಚಾರದಲ್ಲಿ ದಿನಾಂಕ 13-10-2023 ರಂದು ರಾತ್ರಿ 10-00 ಗಂಟೆಗೆ ತಮ್ಮ ಮನೆಯಲ್ಲಿ ಮಕ್ಕಳೊಂದಿಗೆ ಬಾಯಿಮಾತಿನ ಜಗಳ ಮಾಡಿಕೊಂಡಿದ್ದು, ದಿನಾಂಕ 14-10-2023 ರಂದು ಗ್ರಾದುದಲ್ಲಿ ಎಲ್ಲರೂ ಮಲಗಿರುವ ಸಮಯದಲ್ಲಿ ರಾತ್ರಿ 11-00 ಗಂಟೆಯಿಂದ ಬೆಳಿಗ್ಗೆ 7-00 ಗಂಟೆಯ ಮದ್ಯದ ಸಮಯದಲ್ಲಿ ತಾಯಿ ಶ್ರೀಮತಿ ಬೇಗಂ ಬಿ ರವರು ತನ್ನ ಮಕ್ಕಳು ತನ್ನ ಮಾತನ್ನು ಕೇಳುತ್ತಿಲ್ಲ ಎಂದು ಇಬ್ಬರೂ ಮಕ್ಕಳನ್ನು ಸಾಯಿಸುವ ಉದ್ದೇಶದಿಂದ ಒಂದು ಕಟ್ಟಿಗೆಯಿಂದ ಇಬ್ಬರ ಮಕ್ಕಳ ತಲೆಗೆ ಬಲವಾಗಿ ಹೊಡೆದ ಪರಿಣಾಮ ಮಗಳಾದ ಶಮಾಬಾನು ಸ್ಥಳದಲ್ಲಿಯೇ ಸತ್ತಿದ್ದು, ಮಗ ಅಮಾನುಲ್ಲಾ ಪ್ರಜ್ಞಾಹೀನನಾಗಿ ಬಿದ್ದಿದ್ದು, ಇಬ್ಬರೂ ಮಕ್ಕಳು ಮೃತಪಟ್ಟಿದ್ದಾರೆಂದು ತಾನೂ ಸಹ ತಮ್ಮ ಮನೆಯಲ್ಲಿ ನೇಣುಹಾಕಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಇದೇ ದಿನ ದಿನಾಂಕ 14-10-2023 ರಂದು ಬಳಿಗ್ಗೆ 7-00 ಗಂಟೆಗೆ ಅದೇ ಗ್ರಾಮದ ನನ್ನೆ ಸಾಬ್ ಎನ್ನುವವರು ಬೇಗಂ ಬಿ ರವರ ಮನೆಯ ಹತ್ತಿರ ಹೋಗಿ ಬೇಗಂರವರನ್ನು ಕರೆದಾಗ ಅವರು ಬಾಗಿಲು ತೆರೆಯದಿದ್ದರಿಂದ ಬಾಗಿಲನ್ನು ತಳ್ಳಿದಾಗ ದೇಗಂ ರವರು ನೇಣುಬಿಗಿದುಕೊಂಡು ಮೃತಪಟ್ಟಿರುವುದು ಮತ್ತು ಇಬ್ಬರೂ ಮಕ್ಕಳ ತಲೆಯಲ್ಲಿ ರಕ್ತ ಬಂದು ಬಿದ್ದಿರುವುದನ್ನು ನೋಡಿದಾಗ ಘಟನೆಯು ಗೊತ್ತಾಗಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಅಮಾನುಲ್ಲಾ ಈತನು ಜೀವಂತ ಇರುವುದು ತಿಳಿದಿದ್ದು, ಕೂಡಲೇ ಆತನನ್ನು ಹರಪನಹಳ್ಳಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕಳುಹಿಸಲಾಗಿದ್ದು, ಅಮಾನುಲ್ಲಾ ಈತನು ಚಿಕಿತ್ಸೆ ಪಡೆಯುತ್ತಿದ್ದಾನೆ.









ಈ ಸಂಬಂಧ ಮೃತ ಬೇಗಂ ಬಿ ರವರ ಗಂಡನ ತಮ್ಮ ಅಂಗಡಿ ಅಬ್ದುಲ್ ಸಾಬ್ ರವರು ಹರಪನಹಳ್ಳಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದು ಬೇಗಂ ರವರ ವಿರುದ್ಧ ಕೊಲೆ ಮತ್ತು ಕೊಲೆಯ ಪ್ರಯತ್ನ ಪ್ರಕರಣ ದಾಖಲಾಗಿದ್ದು, ಬೇಗಂ ರವರಿಗೆ ಸಬಂಧಿಸಿದಂತೆ ಆತ್ಮಹತ್ಯೆ ಪ್ರಕರಣ ದಾಖಲಾಗಿರುತ್ತದೆ.

ಘಟನೆಯ ಸಂಬಂಧ ಶ್ರೀ. ಹರಿಬಾಬು ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು, ವಿಜಯನಗರ ಜಿಲ್ಲೆ ಹಾಗು ಶ್ರೀ. ವೆಂಕಟಪ್ಪ ನಾಯಕ, ಡಿ.ವೈ.ಎಸ್.ಪಿ ಹರಪನಹಳ್ಳಿ ರವರು ಸ್ಥಳಕ್ಕೆ ಬೇಟಿ ನೀಡಿ, ಸ್ಥಳವನ್ನು ಪರಿಶೀಲಸಿದ್ದು, ತನಿಖಾಧಿಕಾರಿಗಳಾದ ಶ್ರೀ ನಾಗರಾಜ ಎಂ. ಕಮ್ಮಾರ, ಪೊಲೀಸ್‌ ವೃತ್ತ ನಿರೀಕ್ಷಕರು ಹರಪನಹಳ್ಳಿ ಮತ್ತು ಶ್ರೀ. ಶಂಬುಲಿಂಗ ಹಿರೇಮಠ, ಪಿ.ಎಸ್.ಐ ಹರಪನಹಳ್ಳಿ ಠಾಣೆ ರವರಿಗೆ ಪ್ರಕರಣದ ತನಿಖೆ ಕುರಿತು ಸೂಕ್ತ ಮಾರ್ಗದರ್ಶನವನ್ನು ನೀಡಿರುತ್ತಾರೆ. ಪ್ರಕರಣದ ಹೆಚ್ಚಿನ ಮಾಹಿತಿಗಾಗಿ ಶ್ವಾನದಳ, ಮತ್ತು ಬೆರಳಚ್ಚು ತಜ್ಞರನ್ನು ಹಾಗು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಸ್ಥಳಕ್ಕೆ ಕರೆಯಿಸಿ ಹೆಚ್ಚಿನ ಸಾಕ್ಷಗಳನ್ನು ಸಂಗ್ರಹಿಸಲಾಯಿತು, ಪ್ರಕರಣದ ತನಿಖೆ ಮುಂದುವರೆದಿದೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here