ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ!!!

0
651

ವಿಜಯನಗರ…

ಟ್ಯಾಕ್ಸಿ ಚಾಲಕನ ಮೇಲೆ ಹೊಟೆಲ್ ಸಪ್ಲೇಯರ್ಸ್ ಹಲ್ಲೆಮಾಡಿರುವ ಘಟನೆ ಹೊಸಪೇಟೆ ನಗರದಲ್ಲಿ ನಡೆದಿದೆ. ನಗರದ ತಹಸಿಲ್ದಾರ್ ಕಛೇರಿಯ ಎದುರುಬಾಗದಲ್ಲಿರುವ ಶಾನಬಾಗ್ ಹೊಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಟ್ಯಾಕ್ಸಿ ಚಾಲಕ ಸಿಕಂದರ್ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮುಂದಾಗಿದ್ದಾರೆ.


ಇಂದು ಬೆಳಗಿನ ಜಾವ ಸಿಕಂದರ್ ಹೊಟೆಲ್ ಗೆ ಉಪಹಾರಕ್ಕೆಂದು ತೆರಳಿದಾಗ, ಸಿಕಂದರ್ ಕುಳಿತ ಟೇಬಲ್ ನಿಂದ ಮೇಲೆ ಎಬ್ಬಿಸಿ ಬೇರೆಡೆ ಕುಳಿತುಕೊಳ್ಳಲು ಹೊಟೆಲ್ ಸಪ್ಲೇಯರ್ಸ್ ಹೇಳಿದ್ದಾರೆ, ಈ ವಿಷಯಕ್ಕೆ ಸಂಭಂದಿಸಿದಂತೆ ಸಿಕಂದರ್ ಮತ್ತು ಸಪ್ಲೇಯರ್ ನಡುವೆ ಮಾತಿನ ಚಕಾಮಕಿ ನಡೆದಿದೆ, ಆಗ ಹೊಟೆಲ್ ನ ಐದರಿಂದ ಆರು ಜನ ಸಪ್ಲೇಯರ್ ಹಾಗೂ ಮೇನೆಜರ್ ಸಿಖಂದರ್ ಮೇಲೆ ಹಿಗ್ಗಾಮುಗ್ಗ ತಳಿಸಿ ಹೊಟೆಲ್ ನಿಂದ ಹೊರ ಹಾಕಿದ್ದಾರೆ, ಇನ್ನು ಚಾಲಕನ ಮೇಲೆ ಹಲ್ಲೆ ನಡೆದ ವಿಷಯ ತಿಳಿಯುತಿದ್ದಂತೆ ನಗರದ ಟ್ಯಾಕ್ಸಿ ಚಾಲಕರ ಸಂಘಟನೆಯ ಸದಸ್ಯರುಗಳು ಹೊಟೆಲ್ ಮುಂದೆ ಸೇರಿ ಹೊಟೆಲ್ ಮಾಲೀಕ ಹಾಗೂ ಹಲ್ಲೆ ಮಾಡಿದ ಸಪ್ಲೇಯರ್ಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು, ಇನ್ನು ಈ ಹಿಂದೆ ಕೂಡ ಹೊಟೆಲ್ ಗೆ ಬಂದ ಗ್ರಾಹಕರ ಮೇಲೆ ಇಲ್ಲಿನ ಸಪ್ಲೇಯರ್ಸ ಇದೇರೀತಿಯಾಗಿ ಹಲ್ಲೆ ನಡೆಸಿದ ಪ್ರಕರಣಗಳಿದ್ದು ಪೊಲೀಸ್ ಇಲಾಖೆ ಈ ಹೊಟೆಲ್ ಮಾಲೀಕ ಹಾಗೂ ಸಪ್ಲೇಯರ್ಸ್ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಚಾಲಕರ ಸಂಘಟನೆಯ ಮುಕಂಡರು ಒತ್ತಾತಿಸಿದರು.

ಹೊಸಪೇಟೆ ನಮ್ಮ ಚಾಲಕರ ಟ್ರೇಡ್ ಯೂನಿಯನ್ ಹಾಗೂ ಕರ್ನಾಟಕ ಚಾಲಕರ ಒಕ್ಕೂಟ ಮತ್ತು ರಾಮ್ ರಹಿಮ್ ಟ್ಯಾಕ್ಸಿ ಯೂನಿಯನ್, ಸಂಘಟನೆಯ ಪದಾದಿಕಾರಿಗಳು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಬೇಟಿ ನೀಡಿ ಕ್ರಮಕ್ಕೆ ಒತ್ತಾಯಿಸಿದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here