ಟಿಪ್ಪು ಸುಲ್ತಾನ್ ಮುಸಲ್ಮಾನ ಎಂಬ ಕಾರಣಕ್ಕೆ ಮೂಲೆ ಗುಂಪು ಮಾಡಲಾಗಿದೆ – ಡಾ.ಚಿನ್ನಸ್ವಾಮಿ ಸುಸುಲೆ!

0
274

ಹೊಸಪೇಟೆ:- ಜಾಗೃತಿ ಬೆಳಕು ( ಬಿಗ್ ಬ್ರೇಕಿಂಗ್ )

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಹಂಬಲ್ ಯುನೈಟೆಡ್ ಟ್ರಸ್ಟ್ ವತಿಯಿಂದ ಉಮರ್ ಫಂಕ್ಷನ್ ಹಾಲ್ ನಲ್ಲಿ ನಡೆದ ಹಜರತ್ ಟಿಪ್ಪು ಸುಲ್ತಾನ್ ನೆನಪು ಕಾರ್ಯಕ್ರಮ ನಡೆಯಿತು,

ಮಾತನಾಡಿದ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಚಿನ್ನಸ್ವಾಮಿ ಸುಸುಲೆ ರವರು ಟಿಪ್ಪು ಸುಲ್ತಾನ್ ರವರ ಧರ್ಮ ನೊಡಿ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆದಿದೆ ಹಲವಾರು ಸಾಮಾಜಿಕ ಬದಲಾವಣೆ ಮಾಡಿ ದೀನ ದಲಿತರ ಪರ ಸಮಾಜದಲ್ಲಿ ಕೆಲಸಮಾಡಿದ ಸಮಾನತೆಗಾಗಿ ಶ್ರಮಿಸಿದ ಟಿಪ್ಪು, ಇದನ್ನೆಲ್ಲ ಬಿಟ್ಟು ಅವರ ಧರ್ಮ ನೊಡಿ ಸೂಕ್ತ ಅಧ್ಯಯನ ಮಾಡದೆ ಅವರ ಹೆಸರಿಗೆ ಚುತಿ ತರುವ ಪ್ರಯತ್ನ ನಡೆಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು,

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಸೂರ್ ಅಲಿ ಟಿಪ್ಪು ಮಾತನಾಡಿ ಅವರು ಸರ್ಕಾರ ಟಿಪ್ಪು ಸುಲ್ತಾನ್ ಕಟ್ಟಿದ ಕಟ್ಟಡಗಳನ್ನು ಅವರ ವಸ್ತು ಸಂಗ್ರಹಾಲಯದ ಮುಖಾಂತರ ಕೊಟಿಗಟ್ಟಲೆ ಹಣ ಸಂಗ್ರಹಿಸುತ್ತಿದೆ ಆದರೆ ಅವರಿಗೆ ಸಿಗಬೇಕಿರುವ ಸೂಕ್ತ ಗೌರವವನ್ನು ನೀಡುತ್ತಿಲ ಎಂದು ಸರ್ಕಾರದ ವಿರುದ್ದ ಕಿಡಿ ಕಾರಿದರು ಹಾಗೂ ಎಲ್ಲಾರು ಸಂವಿಧಾನವನ್ನು ಓದಿ ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೆಕು ಎಂದರು,

ಟಿಪ್ಪು ಸುಲ್ತಾನ್ ಅವರ ನೆನಪಿನಲ್ಲಿ ವಾಸ್ತುಪ್ರದರ್ಶನ ಮಾಡಲಾಯಿತು ಸರಿಸುಮಾರು 2000 ಜನ ಆ ವಸ್ತು ಪ್ರದರ್ಶನವನ್ನು ನೋಡಿ ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆಗಳನ್ನು ನೋಡುತ್ತಾ ಸಂತೋಷ ವ್ಯಕ್ತಪಡಿಸಿದರು,

ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು ನಗರಸಭೆ ಸದಸ್ಯರಾದ ಕಾರ್ಯದ ಪುಡಿ ಮಹೇಶ್, ಸಮಾಜ ಸೇವಕರಾದ ಸಿ.ಎ ಮಹಮ್ಮದ್, ಜೆ.ಡಿ.ಎಸ್ ಮುಖಂಡರಾದ ಶಫಿ ಬರ್ಕಾತಿ, ನಗರಸಭೆ ಸದಸ್ಯರಾದ ಅಸ್ಲಾಂ ಮಳಗಿ, ಬಾಬಾ ಸಾಹೇಬ್ ಅಂಬೇಡ್ಕರ್ ಯುವ ಮುಖಂಡ, ಉದಯ್ ಕುಮಾರ್,

ಹಂಬಲ್ ಯುನೈಟೆಡ್ ಟ್ರಸ್ಟ್ ನ ಅಧ್ಯಕ್ಷ : ಎಂ.ಎ ರಿಯಾಜ್ ಪಟೇಲ್ ಉಪಾಧ್ಯಕ್ಷ : ಶಕೀಲ್ ಅಹ್ಮದ್ ಖಜಾಂಚಿ : ಅಬ್ದುಲ್‌ ಏಜಾಜ್ ಕಾರ್ಯದರ್ಶಿ : ಖಾದರ್ ಬಾಷಜಂಟಿ ಕಾರ್ಯದರ್ಶಿ : ಎಂ ಎ ನವಾಜ್ ಆಸಿಫ್ ಬೇಗ್ , ಮೆಹಬೂಬ್ ಬಾಷ , ಶಾಹಿದ್, ಗೌಸ್, ಇರ್ಶದ್ ,ಇರ್ಫಾನ್ , ಫಯಾಜ್ ಮತ್ತು ಮುಂತಾದವರು ಹಾಜರಿದ್ದರು ಬೆಳಿಗ್ಗೆ 9 ಗಂಟೆ ಇಂದ ರಾತ್ರಿ 10 ರ ವರೆಗೆ‌ ಟಿಪ್ಪು ಸುಲ್ತಾನ್ ರವರಿಗೆ ಸಂಬಂಧಿಸಿದ ಪುಸ್ತಕಗಳನ್ನು ಹಾಗೂ ಮಾಹಿತಿವುಳ್ಳ ಫಲಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ವರದಿ :-ಮೊಹಮ್ಮದ್. ಗೌಸ್

LEAVE A REPLY

Please enter your comment!
Please enter your name here