ಜೆಡಿಎಸ್ ಮೈನಾರಿಟಿ ಯೂತ್ ಐಕಾನ್ ಹೊಸಪೇಟೆಗೆ ಭೇಟಿ!!

0
664

ವಿಜಯನಗರ ಜಿಲ್ಲೆ (ಹೊಸಪೇಟೆ)

ಬಿಬಿಎಂಪಿ ಮಾಜಿ ಸದಸ್ಯರು ಮತ್ತು ಬಿಬಿಎಂಪಿ ಮಾಜಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಶ್ರೀಯುತ ಇಮ್ರಾನ್ ಪಾಷಾ ರವರು ಹಾಗೂ ಶ್ರೀಯುತ ಮುನ್ನಾಭಾಯಿ ಬಳ್ಳಾರಿ ರಾಜ್ಯ ಅಲ್ಪಸಂಖ್ಯಾತರ ವಿಭಾಗ ಮಾಜಿ ಉಪಾಧ್ಯಕ್ಷರು ಜನತಾದಳ ಮತ್ತು
ಶ್ರೀ ವಿಜಯಕುಮಾರ್. ಡಿ ಬಳ್ಳಾರಿ ನಗರ ಅಧ್ಯಕ್ಷರು ಜನತಾದಳ ರವರು ಸಿಂದಗಿ ಉಪಚುನಾವಣೆ ಪ್ರಚಾರ ಮುಗಿಸಿಕೊಂಡು ಬೆಂಗಳೂರಿಗೆ ಹೋಗುವ ಮಾರ್ಗಮಧ್ಯೆ ಹೊಸಪೇಟೆಯ ಜೆಡಿಎಸ್ ಮುಖಂಡರಾದ ಶಬ್ಬೀರ್ ಹೆಚ್ ರವರ ಕಚೇರಿಗೆ ಭೇಟಿ ನೀಡಿದರು.

ಇಮ್ರಾನ್ ಪಾಷಾ ರವರು ಮಾತನಾಡಿ ಮುಂದಿನ 23ರ ಚುನಾವಣೆಗೆ ಪಕ್ಷದಿಂದ ಕಾರ್ಯಗಾರ ನಡೆದಿದ್ದು ರಾಜ್ಯದ 224 ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಲಾಗುವುದು ಹಾಗೂ ಪ್ರತಿ ಕ್ಷೇತ್ರದಲ್ಲೂ ಅಲ್ಪಸಂಖ್ಯಾತರನ್ನು ಒಟ್ಟುಗೂಡಿಸಿ ಪಕ್ಷ
ಬಲಪಡಿಸುವುದಾಗಿ ತಿಳಿಸಿದ ಅವರು ಮುಂದಿನ ದಿನಗಳಲ್ಲಿ ವಿಶೇಷವಾಗಿ ಅಲ್ಪಸಂಖ್ಯಾತರನ್ನು ಪಕ್ಷದಲ್ಲಿ ವಿಶೇಷವಾಗಿ ಗುರುತಿಸಲಾಗುವುದು ಎಂದು ತಿಳಿಸಿದರು,

ವಿಜಯನಗರ ಕ್ಷೇತ್ರದ ಮುಖಂಡರಾದ ಸಹೋದರ ಶಬ್ಬೀರ್ ಅವರು ನಮ್ಮ ಆತ್ಮೀಯರಾಗಿದ್ದು ಮುಂದಿನ ದಿನಗಳಲ್ಲಿ ಅವರೊಂದಿಗೆ ಇರುವುದಾಗಿ ತಿಳಿಸಿದರು

ಈ ಸಂದರ್ಭದಲ್ಲಿ ಮುಖಂಡರಾದ ಇಸ್ಮಾಯಿಲ್ ಭಯ್ ಮಾಜಿ ಅಧ್ಯಕ್ಷರು ಲಾರಿ ಚಾಲಕರ ಸಂಘ, ಖಾಜಾವಲಿ, ಪರಶುರಾಮ್, ಅಮ್ಮನ ಡ್ಯಾನಿಲ್, ಅಬ್ದುಲ್, ಕುಮಾರಸ್ವಾಮಿ, ಎಂ ಡಿ ಜಾಕೀರ್, ಹುಸೇನ್ ಮುಂತಾದವರಿದ್ದರು.

ವರದಿ:-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here