ಜಿಲ್ಲಾ ಕಾಂಗ್ರೆಸ್ ನಿಂದ ಮೌನ ಪ್ರತಿಭಟನೆ,!

0
248

ಹೊಸಪೇಟೆ :-ಜಾಗೃತಿ ಬೆಳಕು ನ್ಯೂಸ್

ನಗರದ ಪತ್ರಿಕ ಭವನದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಇಮಾಮ ನಿಯಾಜಿ ಇವರ ನೇತೃತ್ವದಲ್ಲಿ ಪತ್ರಿಕೆ ಗೋಷ್ಟಿ ನಡೆಸಲಾಯಿತು.

ಮಾ, 7. ನಗರದ ಗಾಂಧಿ ಸರ್ಕಲ್ ನಿಂದ ತಾಲೂಕು ಕಚೇರಿ ಅವರಿಗೆ ಮೌನ ಪ್ರತಿಭಟನೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ ರಾಜ್ಯಕ್ಕೆ ಸಂದೇಶ ಕೊಡುವ ಮುಖಾಂತರ ಆರು ಏಳು ತಿಂಗಳಿನಿಂದ ಪಕ್ಷದಿಂದ ಬಿಜೆಪಿ ಭ್ರಷ್ಟ ಆಡಳಿತದಿಂದ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದೇವೆ ಪಿ.ಎಸ್.ಐ.ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ, ಬಿಜೆಪಿ ಸರ್ಕಾರ ಯುನಿವರ್ಸಿಟಿ ನೇಮಕಾತಿ ಹಗರಣ, ವಿಜಯನಗರ ಜಿಲ್ಲೆಯಲ್ಲಿ ಬಿಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಕೂಡ ಹಗರಣ ನಡೆದಿರುತ್ತದೆ, ಕೋವಿಡ್ ನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿರೋದು ಈ ಬಿಜೆಪಿ ಸರ್ಕಾರ ಜನರನ್ನು ಮೋಸ ಮಾಡಿ ಲೂಟಿ ಹೊಡೆಯುತ್ತಿದೆ ಮುಂದಿನ ಚುನಾವಣೆಯಲ್ಲಿ ಜನಸಾಮಾನ್ಯರೆ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿಕೊಂಡರು, ನಮ್ಮ ಪಕ್ಷದ ವತಿಯಿಂದ ಮನವಿ ಮಾಡಿಕೊಳ್ಳೋದೇನೆಂದರೆ 9ನೇ ತಾರೀಖಿನಂದು ಬೆಳಿಗ್ಗೆ 9:00 ಗಂಟೆ ಯಿಂದ 11:00 ಗಂಟೆಯವರೆಗೆ ನಮ್ಮ ಕಾಂಗ್ರೆಸ್ ಪಕ್ಷದಿಂದ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಸ್ವಯಂ ಪ್ರೇರಿತ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದು ಮಾಡುವ ಮುಖಾಂತರ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕೆಂದು ಮಾಧ್ಯಮದ ಮುಖಾಂತರ ಮೊಹಮ್ಮದ್ ಇಮಾಮ ನಿಯಾಜಿ ಮನವಿ ಮಾಡಿಕೊಂಡರು


ಪತ್ರಿಕಾ ಘೋಷ್ಠಿಗೆ ಭಾಗವಹಿಸಿದವರು :-ಮೊಹಮ್ಮದ್ ಇಮಾಮ ನಿಯಾಜಿ, ಗುಜ್ಜಲ್ ನಾಗರಾಜ್, ಖಾಜಾ . ಮಾರಣ್ಣ. ಸತ್ಯನಾರಾಯಣ. ವಕೀಲರು ಮಹೇಶ್.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here