ಜಿಲ್ಲಾ ಅಧ್ಯಕ್ಷರಿಗೆ ಅಟ್ರಾ ಸಿಟಿ ಕೇಸ್,! ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರ ಗತಿ ಏನು?

0
160

ಹೊಸಪೇಟೆ :-ಜಾಗೃತಿ ಬೆಳಕು

ಹೊಸಪೇಟೆ ನಗರದಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ನಡೆಸಲಾಯಿತು

ಐದು ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಜಿಲ್ಲಾ ಸಮಿತಿ ಪದಾಧಿಕಾರಿಗಳು, ಜಿಲ್ಲಾ ಮುಂಚೂಣಿ ಘಟಕಗಳ ಜಿಲ್ಲಾಧ್ಯಕ್ಷರುಗಳು ಹಿರಿಯ ಮುಖಂಡರು ಸಭೆಯಲ್ಲಿ ಸೇರಿದ್ದು, ವಿಜಯನಗರ ಜಿಲ್ಲಾ ಅಧ್ಯಕ್ಷ ಸಿರಾಜ್ ಶೇಖ್ ರವರ ಮೇಲೆ ದ್ವೇಷ ಹಾಗೂ ದುರುದ್ದೇಶದಿಂದ ಅಟ್ರಾಸಿಟಿ, ಕೊಲೆ ಅರೋಪ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತಂದು ಮುಜುಗರ ಉಂಟು ಮಾಡಲು ಕಾರಣರಾದ ಮಾಜಿ ಶಾಸಕ ಕೆ.ಎಂ.ಎಫ್ ಅಧ್ಯಕ್ಷ ಭೀಮಾ ನಾಯ್ಕ ಮತ್ತು ಹಗರಿಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿ ಬಸಪ್ಪ, ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ.ಎಂ.ದ್ವಾರಕೀಶ್ ರವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಸಲುವಾಗಿ ನಿರ್ಣಯ ಮಾಡಿ, ಕೆಪಿಸಿಸಿ ಅಧ್ಯಕ್ಷರಿಗೆ ನಿರ್ಣಯ ಪತ್ರವನ್ನು ನೀಡಲು ನಿಯೋಗ ಹೋಗಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾಮಾಡಿದರು ಎಂದು ಮೂಲಗಳಿಂದ ತಿಳಿದು ಬಂದಿರುತ್ತದೆ

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಿಗೆ ಇತರ ಆದರೆ ಸಾಮಾನ್ಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಗತಿ ಏನು ಎಂಬ ಪ್ರಶ್ನೆ ವಿಜಯನಗರ ಜಿಲ್ಲೆಯಲ್ಲಿ ಹರಡುತ್ತಿದೆ
ಪಕ್ಷಕ್ಕೆ ಕೆಲಸ ಮಾಡಲು ಯಾರು ಬರುತ್ತಾರೆ, ಮುಂಬರುವ ಲೋಕಸಭಾ, ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೊಂದರೆಯಾಗುತ್ತದೆ ಅದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ರವರ ಮೂಲಕ ಮಾಜಿ ಶಾಸಕ ಭೀಮ ನಾಯಕ್ ಹಾಗೂ ಹಗರಿಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಮತ್ತು ಎಐಸಿಸಿ ಅಥವಾ ಕೆಪಿಸಿಸಿ ವರಿಷ್ಠರು ವಿಜಯನಗರ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್ ರವರ ಮೇಲೆ ಜರುಗಿದ ಸುಳ್ಳು ಪ್ರಕರಣ ದಾಖಲಾದ ಬಗ್ಗೆ ಸತ್ಯಾಸತ್ಯತೆ ತಿಳಿದುಕೋಂಡು, ನಿಗಾವಹಿಸಿ ಅತಿ ಶೀಘ್ರದಲ್ಲೇ ಬಗೆಹರಿಸಲು ಒತ್ತಾಯಿಸಿ
ವಿಜಯನಗರ ಜಿಲ್ಲೆಯಲ್ಲಿ ಇಷ್ಟೇಲ್ಲಾ ಘಟನೆ ಜರುಗಿದರು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ರವರು ಮೂಕ ಪ್ರೇಕ್ಷಕರಂತೆ ವರ್ದರಿಸುತ್ತಿದ್ದಾರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಸಚಿವರು ವಿರುದ್ಧ ಅಸಮಾದಾನ ವ್ಯಕ್ತವಾಯಿತು. ಅತಿ ಶೀಘ್ರದಲ್ಲೇ ಬಗೆಹರಿಸಲು ಕ್ರಮ ಜರುಗಿಸಲು ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷರಿಗೆ ಮತ್ತು ರಾಜ್ಯದ ಮುಖ್ಯಮಂತ್ರಿ ರವರಿಗೆ ಮನವಿ ನೀಡಲು ನಿಯೋಗ ಹೋಗಲು ತಿರ್ಮಾನ ಮಾಡಿದ್ದಾರೆಂದು ತಿಳಿದು ಬಂದಿದೆ

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here