ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ SDPI ಪ್ರತಿಭಟನೆ..!!

0
166

ಹೊಸಪೇಟೆ-ವಿಜಯನಗರ ಜಿಲ್ಲೆ


ಆರ್ಥಿಕ ಸಂಕಷ್ಟದಿಂದ ದೇಶವು ದಿವಾಳಿ ಆಗುವ ಮುಂಚೆ ಸರ್ಕಾರ ಎಚ್ಚೆತ್ತು ಕೊಂಡು ಜನಸಾಮಾನ್ಯರ ಹಿತಾಸಕ್ತಿಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಕ್ಷಣ ಕಡಿವಾಣ ಹಾಕಿ ಎಸ್.ಡಿ.ಪಿ.ಐ ಪ್ರತಿಭಟನೆ.
ಆರ್ಥಿಕ ಸಂಕಷ್ಟದಿಂದ ದೇಶವು ದಿವಾಳಿ ಆಗುವ ಮುಂಚೆ ಸರ್ಕಾರ ಎಚ್ಚೆತ್ತು ಕೊಂಡು ಜನಸಾಮಾನ್ಯರ ಹಿತಾಸಕ್ತಿಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಕ್ಷಣ ಕಡಿವಾಣ ಹಾಕಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವಿಜಯನಗರ ಜಿಲ್ಲಾ ಸಮಿತಿ ಒತ್ತಾಯಿಸಿ ಪ್ರತಿಭಟನೆ ಮಾಡಿದರು. 
ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ಅವರು ಮಾತನಾಡಿದ ಅವರು ಕೊರೊನಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮೇಲೇಳಲು ಚಡಪಡಿಸುತ್ತಿರುವ ಜನಸಾಮಾನ್ಯರ ಸ್ಥಿತಿ ಚಿಂತಾಜನಕವಾಗಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಇರವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬದುಕು ನಿರ್ವ ಹಣೆ ಹೇ ಗೆ ಎಂಬ ಚಿಂತೆ ಜನಸಾಮಾನ್ಯರಿಗೆ ಕಾಡುತ್ತಿದೆ. ಬೆಲೆ ನಿಯಂತ್ರಣದ ವ್ಯವಸ್ಥೆ ಸರ್ಕಾ ರದ ಮಟ್ಟದಲ್ಲಿ ಜಾರಿಯಾಗದೆ ಹೋ ದರೆ ಅಥವಾ ಅಗತ್ಯ ವಸ್ತುಗಳ ಧಾರಣೆ ನಿಯಂತ್ರಣವಾಗದೆ ಹೋ ದರೆ ಮುಂದಿನ ದಿನಗಳಲ್ಲಿ ಭಾರತ ಶ್ರೀಲಂಕಾ ಮಾದರಿಯಲ್ಲಿ ಆರ್ಥಿ ಕ ಸಂಕಷ್ಟಕ್ಕೊ ಳಗಾಗುವ ಭಯ ಕಾಡುತ್ತಿದೆ. 
ಆದರೆ ಸರಕಾರ ಇದಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ “ಕ್ರಿಯೆಗೆ ಪ್ರತಿಕ್ರಿಯೆ” ಹೇಳಿಕೆ ಮೂಲಕ ಕೋಮು ವಿದ್ವೇಷಕ್ಕೆ ನಿರಂತರ ಕುಮ್ಮಕ್ಕು ನೀಡುತ್ತಿದೆ. ಮಾತುಮಾತಿಗೆ ಡಬಲ್ ಇಂಜಿನ್ ಸರಕಾರ ಎನ್ನುತ್ತಿರುವ ಬಿಜೆಪಿಯ ಅಧಿಕಾರದಲ್ಲಿ ಪೆಟ್ರೋಲ್, ಡೀ ಸೆಲ್, ಅಡುಗೆ ಅನಿಲ ಮಾತ್ರವಲ್ಲದೆ ಬೆಲೆ ಏರಿಕೆಯ ಬಿಸಿ ಔಷಧಿ ಪದಾರ್ಥ ಗಳನ್ನೂ ಬಿಟ್ಟಿಲ್ಲ.
ಇದೀ ಗ ಔಷಧಿಗಳ ಬೆಲೆಯೂ ಶೇ ಕಡ 10.76 ರಷ್ಟು ಏರಿಕೆಯಾಗಿದೆ. ಇನ್ನು ಕೃಷಿ ವಲಯವೂ ಕೂಡ ಬೆಲೆ ಏರಿಕೆಯಿಂದ ತನ್ನನ್ನು ಕಾಪಾಡಿಕೊ ಳ್ಳಲು ಸಾಧ್ಯವಾಗಿಲ್ಲ. ಪ್ರಧಾನ ಮಂತ್ರಿ ಮೋ ದಿಯವರು ರೈ ತರ ಆದಾಯ ಹೆಚ್ಚಿಸುತ್ತೇನೆ ಎಂದರು.
ಕೀಟನಾಶಕಗಳ ಮೇಲೆ 18%, ಕೃಷಿ ಯಂತ್ರೋಪಕರಣಗಳ ಮೇಲೆ 12% ಮತ್ತು ರಸಗೊ ಬ್ಬರಗಳ ಮೇಲೆ 5% ಜಿ.ಎಸ್.ಟಿ ವಿಧಿಸುವ ಮೂಲಕ ರೈ ತರಿಗೆ ಬರುತ್ತಿದ್ದ ಅಲ್ಪಸ್ವಲ್ಪ ಆದಾಯಕ್ಕೂ ಸರ್ಕಾರ ಅಡ್ಡಗಾಲು ಹಾಕಿದೆ. 
ಅಗತ್ಯ ವಸ್ತುಗಳ ಬೆಲೆ ಏರಿಕೆಯ ದುಷ್ಪರಿಣಾಮಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾ ರದ ದುರಾಡಳಿತವೇ ಪ್ರಮುಖ ಕಾರಣವಾಗಿದೆ. ಅಧಿಕಾರ ಲಭಿಸಿದ ದಿನದಿಂದ ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಬಿಜೆಪಿ ಸರ್ಕಾ ರ ತನ್ನ ವೈ ಫಲ್ಯಗಳನ್ನು ಮರೆಮಾಚಲು ಕೆಲ ದುಷ್ಟ ಶಕ್ತಿಗಳನ್ನು ಸಮಾಜದಲ್ಲಿ ಚೂಬಿಡುವ ಮೂಲಕ ಧರ್ಮ ಗಳ ಮಧ್ಯೆ ವಿಷ ಬೀಜ ಬಿತ್ತಿ ಆಜಾಗೃ ಕತೆ ಸೃಷ್ಟಿಸುತ್ತಿದೆ. 
ಜನಸಾಮಾನ್ಯರು ಮೂಕ ಪ್ರೇಕ್ಷಕರಾಗಿ ಚುನಾವಣೆಗೆ ಮುಂಚೆ ಭರವಸೆ ನೀ ಡಲಾಗಿದ್ದ “ಅಚ್ಚೇ ದಿನ್” ಅಂದರೆ ಇದೇ ನಾ ಎಂದು ನೋಡುವಂತಾಗಿದೆ. ಸರ್ಕಾರದ ಈ ದುರಾಡಳಿತವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾತೀವ್ರವಾಗಿ ಖಂಡಿಸುತ್ತದೆ.


ಆರ್ಥಿಕ ಸಂಕಷ್ಟದಿಂದ ದೇಶವು ದಿವಾಳಿ ಆಗುವ ಮುಂಚೆ ಸರ್ಕಾರ ಎಚ್ಚೆತ್ತು ಕೊಂಡು ಜನಸಾಮಾನ್ಯರ ಹಿತಾಸಕ್ತಿಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಕ್ಷಣ ಕಡಿವಾಣ ಹಾಕಬೇಕು ಎಂದು ಎಸ್.ಡಿ.ಪಿ.ಐ ವಿಜಯನಗರ ಜಿಲ್ಲಾ ಸಮಿತಿ ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ವಲಿ ಬಾಷಾ ಜಿಲ್ಲಾಧ್ಯಕ್ಷ, ನಝೀರ್ ಖಾನ್ ಜಿಲ್ಲಾ ಉಪಾಧ್ಯಕ್ಷ, ಜೆ ಹಬೀಬುಲ್ಲಾ ಪ್ರಧಾನ ಕಾರ್ಯದರ್ಶಿ, ಇರ್ಫಾನ್ ಕಟಗಿ ಕಾರ್ಯದರ್ಶಿ, ಶೋಯಬ್ ನಿಯಾಜಿ, ಜಿಲ್ಲಾ ಸಮಿತಿ ಸದಸ್ಯರು ಎಂಡಿ ರಫೀಕ್, ಇಬ್ರಾಹಿಂ ಬಳ್ಳಾರಿ, ಸಲೀಂ ಸಮೀರ್ ಅಸೆಂಬ್ಲಿಯ ಅಧ್ಯಕ್ಷ ಆಸ್ಸೆಂಬಲಿ ಸದಸ್ಯರು, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here