ಜನಸಾಮಾನ್ಯರ ಗೋಳು ಕೇಳೋರು ಯಾರು,!!

0
403

ವಿಜಯನಗರ ಜಿಲ್ಲೆ:- ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್)

ಮೇ.17.ಹೊಸಪೇಟೆ ನಗರದಲ್ಲಿ ನೀರಿನ ಸಮಸ್ಯೆ ಯಾವಾಗ ಬಗೆಹರಿಯುತ್ತೋ ಗೊತ್ತಿಲ್ಲ ಆದರೆ ಜನರು ಪರದಾಡುತ್ತಿರುವುದನ್ನು ನಗರಸಭೆ ಸದಸ್ಯ ರಗಲಿ ನಗರಸಭೆ ಅಧಿಕಾರಿಗಳಾಗಲಿ ಇತ್ತ ಕಡೆ ಗಮನ ಹರಿಸುವುದೇ ಇಲ್ಲ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿರುವ ನಗರದ 9ನೇ ವಾರ್ಡ್ ಸಿದ್ದಲಿಂಗಪ್ಪ ಚೌಕಿ 4ನೇ ಅಡ್ಡರಸ್ತೆ ಜನಸಾಮಾನ್ಯರು.

ಕೂಲಿ ಕಾರ್ಮಿಕರಿದ್ದಾರೆ ಅವರು ಕೆಲಸಕ್ಕೆ ಹೋಗಿರುತ್ತಾರೆ ಅಂತಹ ಸಮಯದಲ್ಲಿ ನೀರಿನ ಟ್ಯಾಂಕರ್ ಬಂದರೆ ಅವರು ಯಾವ ತರ ಶೇಖರಣೆ ಮಾಡಿ ಇಡಬೇಕು ನೀವೇ ಹೇಳಿ ಎಂದು ಮಾಧ್ಯಮದ ಮುಂದೆ ಕಾರ್ಮಿಕ ತನ್ನ ಮನದಾಳದ ಮಾತು ಹಂಚಿಕೊಂಡರು

9ನೇ ವಾರ್ಡ್ 4ನೇ ಕ್ರಾಸ್ ನಲ್ಲಿ ಶಾರದಾ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಒಂದು ಬೋರ್ವೆಲ್ ಟ್ಯಾಂಕ್ ಇದೆ ಮೋಟಾರ್ ಸಮಸ್ಯೆಯಾಗಿ ಕೆಟ್ಟು ಹೋಗಿರುತ್ತದೆ ಅದನ್ನು ಸರಿಪಡಿಸಿದರೆ ಈ ಸಮಸ್ಯೆ ಬಗೆಹರಿಯುತ್ತದೆ ಆದರೆ ನಗರಸಭೆ ಸದಸ್ಯ ಇದರ ಬಗ್ಗೆ ಗಮನಹರಿಸುತ್ತಿಲ್ಲ ನಗರಸಭೆ ಅಧಿಕಾರಿಗಳಾಗಲಿ ಜಿಲ್ಲಾಧಿಕಾರಿಗಳಾಗಲಿ ಈತಗಡೆ ಗಮನಹರಿಸಿ ನಮ್ಮ ಸಮಸ್ಯೆ ಬಗೆಹರಿಸಿ ಕೊಡಬೇಕೆಂದು ತಮ್ಮಲ್ಲಿ ಮಾಧ್ಯಮದ ಮುಖಾಂತರ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಜನಸಾಮಾನ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು

ಒಂದುವರೆ ವರ್ಷದಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಜನರ ಗೋಳು ಕೇಳೋರ್ಯಾರು.
ನಮ್ಮ ಸಮಸ್ಯೆ ಬಗೆಹರಿಯದಿದ್ದರೆ ಜಿಲ್ಲಾ ಆಡಳಿತ ಕಚೇರಿಯ ಮುಂದೆ ಖಾಲಿ ಕೊಡಪಾನಗಳನ್ನು ತೆಗೆದುಕೊಂಡು ಹೋರಾಟಕ್ಕೆ ನಿಲ್ಲಬೇಕಾಗುತ್ತದೆ ಎಂದು ಜನಸಾಮಾನ್ಯರು ತಮ್ಮ ಅಭಿಪ್ರಾಯವನ್ನು ಮಾಧ್ಯಮದ ಜೊತೆಗೆ ಹಂಚಿಕೊಂಡರು.

ವರದಿ :-ಮಹಮ್ಮದ್ ಗೌಸ್

LEAVE A REPLY

Please enter your comment!
Please enter your name here