ಜನನಿ ಸಮಿತಿಯ ವತಿಯಿಂದ ವ್ಯಕ್ತಿತ್ವ ವಿಕಸನ ತರಬೇತಿ!!

0
296

ಕೊಪ್ಪಳ ಜಿಲ್ಲೆ:-ಸಾಣಾಪುರ

ಜನನಿ ಸಮಿತಿಯ ಸದಸ್ಯರಿಗಾಗಿ ಸಾಣಾಪುರ ಬಳಿಯಿರುವ ಕಿಮ್ಮಿಂದ ಹೆರಿಟೇಜ್ ರೆಸಾರ್ಟ್ನಲ್ಲಿ ದಿ”23ಮೇ ರಂದು “ವ್ಯಕ್ತಿತ್ವ ವಿಕಸನ” ಕುರಿತಾದ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು ಸಂಪನ್ಮೂಲ ವ್ಯಕ್ತಿಗಳಾದ ಅಂಬಿಕಾ ಬಿ. ಕಟ್ಟಿ ಇವರು ತರಬೇತಿಯನ್ನು ನೀಡಿ ಸದಸ್ಯರಿಗೆ ಇರಬೇಕಾದ ಸಕರಾತ್ಮಕ ಗುಣಗಳು ಹಾಗೂ ಸಂಘಟನಾತ್ಮಕ ವಿಚಾರಗಳು ಮತ್ತು ನಿರಂತರವಾಗಿ ಸಂಸ್ಥೆಯನ್ನು ನಡೆಸಬೇಕಾದರೆ ಸದಸ್ಯರ ಪಾತ್ರ ಪ್ರಮುಖವಾಗಿರುತ್ತದೆ ಹೇಳುವ ಮುಖಾಂತರ ತರಬೇತಿಯನ್ನು ನೀಡಿದರು…

ಜನನಿ ಸಮಿತಿಯ ವತಿಯಿಂದ ಬಹಳಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ ಮತ್ತು ಜನನಿ ಸಂಸ್ಥೆಯ ಉದ್ದೇಶ ಮಹಿಳಾ ಸಬಲೀಕರಣ ಮತ್ತು ಸಮಾಜಸೇವೆಯಲ್ಲಿ ತೊಡಗುವುದು ಯಂದು ಮಾಹಿತಿಯನ್ನು ನೀಡಿದ ಅಂಬಿಕಾ ಬಿ. ಕಟ್ಟಿ…

ಗೀತಾ ಶಂಕರ್ ರವರು ಮಾತನಾಡಿ ಜನನಿ ಸಂಸ್ಥೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಡೆಗೆ ಗಮನ ಕೊಡುವುದು ಮತ್ತು ಸಮಾಜ ಸೇವೆ ಮಾಡುವ ಉದ್ದೇಶ ನಮ್ಮದಾಗಿರುತ್ತದೆ ನಾವೆಲ್ಲ ಜೊತೆಗೂಡಿ ಕೈಜೋಡಿಸಿದರೆ ಮಾತ್ರ ಸಮಾಜ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು..

ಸಂಪನ್ಮೂಲ ವ್ಯಕ್ತಿಗಳಿಗೆ ಸಮಿತಿ ವತಿಯಿಂದ ಸನ್ಮಾನಿಸಲಾಯಿತು ಅಧ್ಯಕ್ಷತೆಯನ್ನು ಗೀತ ಶಂಕರ್ ಅವರು ವಹಿಸಿದ್ದರು ಈ ತರಬೇತಿಯಲ್ಲಿ 40ಕ್ಕೂ ಹೆಚ್ಚು ಸದಸ್ಯರು ಉಪಸ್ಥಿತರಿದ್ದರು…

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here