ಜಗದೀಶ್ ಮಹಾದೇವ್ ಮತ್ತು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ FIR!!!

0
471

ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ

ಹೊಸಪೇಟೆ ನಗರಸಭೆ ಆಮ್ ಆದ್ಮಿ ಪಕ್ಷದ ಸದಸ್ಯ ಶೇಕ್ಷವಲಿ ಹೇಳವಾರ್ ಬಿಜೆಪಿ ಸೇರ್ಪಡೆ ವಿರೋಧಿಸಿ ಪ್ರತಿಭಟಿಸಿದ್ದ ಆಪ್ ಮುಖಂಡ, ವಕೀಲ ಜಗದೀಶ್ ಸೇರಿದಂತೆ ನಾಲ್ವರ ವಿರುದ್ಧ ಕರೊನಾ ನಿಯಮ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ.

ಹೊಸಪೇಟೆಯ ನಗರಸಭೆಗೆ ನಡೆದ ಚುನಾವಣೆಯಲ್ಲಿ 22 ನೇ ವಾರ್ಡ್ ಗೆ ಶೇಕ್ಷವಲಿ ಹೇಳವಾರ್ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡಿ ಗೆದ್ದಿದ್ದರು. ತದನಂತರ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು.

ಈ ಹಿನ್ನೆಲೆಯಲ್ಲಿ ಆಮ್ ಆದ್ಮ ಪಕ್ಷದಿಂದ ಗೆದ್ದು, ಬಿಜೆಪಿಗೆ ಹೋಗಿ ಪಕ್ಷ ದ್ರೋಹ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಖ್ಯಾತ ವಕೀಲ ಕೆ.ಎನ್. ಜಗದೀಶ್ ಮಹದೇವ್ ಹೊಸಪೇಟೆಯ ಅಕ್ರಂ, ಕೊಪ್ಪಳದ ಇಸಾಕ್, ಗಂಗಾವತಿಯ ವಕೀಲ ಪ್ರಕಾಶ್ ವಿರುದ್ಧ ಕೇಸ್ ದಾಖಲಾಗಿದೆ.

ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

ವಕೀಲ ಜಗದೀಶ್ ಮಹದೇವ್ ಈ ಹಿಂದೆ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಸಿಡಿ ಪ್ರಕರಣದಲ್ಲಿ ದೂರು ನೀಡಿದ್ದ ಯುವತಿ ಪರ ವಾದ ಮಾಡಿದ್ದ ವಕೀಲ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here