ಜಗತ್ತಿನಲ್ಲಿ ಅಮೂಲ್ಯವಾದದ್ದು ಪುಸ್ತಕ – ಡಾ.ಕೆ.ಸಿ. ಶಿವಾರೆಡ್ಡಿ,!

0
152

ಹಂಪಿ: ಜಾಗೃತಿ ಬೆಳಕು ಬ್ರೇಕಿಂಗ್ ನ್ಯೂಸ್

ರೈತನ ಮಗನಾಗಿ ಕನ್ನಡದ ಕೆಲಸ ಮಾಡಿರುವುದು ಹೆಮ್ಮೆ
ಜಗತ್ತಿನಲ್ಲಿ ಅಮೂಲ್ಯವಾದ ವಸ್ತು ಪುಸ್ತಕ – ಡಾ.ಕೆ.ಸಿ. ಶಿವಾರೆಡ್ಡಿ

ನಾನು ಎನ್ನುವುದು ಯಾವತ್ತು ಶಾಶ್ವತವಲ್ಲ, ಆದರೆ ಪುಸ್ತಕವು ಮುಂದಿನ ಪೀಳಿಗೆಗೆ ತಲತಲಾಂತರಗಳಿoದ ಬಂದ ಜ್ಞಾನವನ್ನು ಪಸರಿಸುತ್ತದೆ. ಜಗತ್ತಿನಲ್ಲಿ ಪುಸ್ತಕಗಳೇ ಶಾಶ್ವತ. ಮನುಷ್ಯನಲ್ಲ ಎಂದು ಕನ್ನಡ ವಿಶ್ವವಿದ್ಯಾಲಯದ ಲಲಿತ ಕಲಾ ನಿಕಾಯದ ಡೀನರಾದ ಡಾ.ಕೆ ಸಿ ಶಿವಾರೆಡ್ಡಿ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ದಿನಾಂಕ 31.5.2023ರಂದು ನಡೆದ ಡಾ.ಕೆ.ಸಿ ಶಿವಾರೆಡ್ಡಿ, ಡಾ.ಸಿದ್ದಗಂಗಮ್ಮ ಹಾಗೂ ಡಿ.ಪರಮೇಶ್ವರಪ್ಪ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಾ ಸಮಾಜದಲ್ಲಿ ಎದೆಯುಬ್ಬಿಸಿಕೊಂಡಿರುವ ವೃತ್ತಿ ಎಂದರೆ ಅದು ಕೃಷಿ ರೈತನ ಮಗನಾದ ನಾನು ಗ್ರಾಮೀಣ ಭಾಗದಿಂದ ಬಂದು ಕನ್ನಡದ ಕೆಲಸ ಮಾಡಿದ್ದೇನೆ. ಅದೇ ಕನ್ನಡಕ್ಕಿರುವ ಶಕ್ತಿ. ಕನ್ನಡವೇ ಉಸಿರು, ಕನ್ನಡವೇ ಜೀವನವೆಂದು ಕನ್ನಡ ವಿಶ್ವವಿದ್ಯಾಲಯದಲ್ಲಿ ಬಹಳ ಪ್ರೀತಿಯಿಂದ ಕನ್ನಡದ ಕೆಲಸ ಮಾಡಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಭಾಷಾಂತರ ವಿಭಾಗದ ಮುಖ್ಯಸ್ಥರಾದ ಡಾ.ಎ ಮೋಹನ್ ಕುಂಟಾರ್ ಮಾತನಾಡುತ್ತಾ ಯಾವುದೇ ಸಂಸ್ಥೆಯ ಬೆಳವಣಿಗೆಯಲ್ಲಿ ಸಿಬ್ಬಂದಿಗಳ ಕೊಡುಗೆ ಅಮೂಲ್ಯವಾದದ್ದು. ಆದರೆ ಸಿಬ್ಬಂದಿಗಳ ನಿವೃತ್ತಿ ಸಂದರ್ಭದಲ್ಲಿ ಅವರ ಸೇವೆ ಹಾಗೂ ಕೊಡುಗೆ ಪ್ರಮುಖವಾಗುತ್ತದೆ ಇಂತಹ ಸಾಲಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ಡಾ. ಕೆ.ಸಿ ಶಿವಾರೆಡ್ಡಿ, ಡಾ.ಸಿದ್ದಗಂಗಮ್ಮ, ಡಿ ಪರಮೇಶ್ವರಪ್ಪ ಅವರ ಕೊಡುಗೆ ಮಹತ್ವದಾದದ್ದು ಎಂದು ನುಡಿದರು.
ಅಭಿವೃದ್ಧಿ ಅಧ್ಯಯನ ವಿಭಾಗದ ಡಾ.ಸಿದ್ದಗಂಗಮ್ಮ ಅವರ ಕುರಿತು ಮಾತನಾಡಿದ ಡಾ.ಎ. ಶ್ರೀಧರ ಅವರು ವಿಶ್ವವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಅವರು ಅಪಾರ ಕೆಲಸ ಮಾಡಿದ್ದಾರೆ. ವಿಭಾಗದಲ್ಲಿ ಮಹಿಳಾ ವಿದ್ಯಾರ್ಥಿನಿಯರ ಸಬಲೀಕರಣಕ್ಕೆ ಅವರು ದೊಡ್ಡ ಶಕ್ತಿಯಾಗಿದ್ದರು ಎಂದು ನುಡಿದರು. ಡಿ.ಪರಮೇಶ್ವರಪ್ಪ ಅವರ ಕುರಿತು ಮಾತನಾಡಿದ ಮಾಹಿತಿಕೇಂದ್ರದ ಉಪನಿರ್ದೇಶಕರಾದ ಡಾ.ಡಿ.ಮೀನಾಕ್ಷಿ ಅವರು ಡಿ. ಪರಮೇಶ್ವರಪ್ಪ ಅವರ ವೃತ್ತಿ ಜೀವನದಲ್ಲಿ ಬದ್ಧತೆ, ದಕ್ಷತೆ, ಶಿಸ್ತು, ಅಪಾರವಾದ ಸಹನೆಯನ್ನು ಕಂಡಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರು ನಾವು ಕೆಲಸ ಮಾಡುವ ವಾತಾವರಣದಲ್ಲಿ ಹಿಂದೆ ಮುಂದೆ ಮಾತನಾಡಿಕೊಳ್ಳುವ ಜನರೇ ಹೆಚ್ಚು, ಅಂತಹವರ ಭಾವನೆಗಳಿಗೆ ಬಲಿಯಾಗಿ ನಮ್ಮ ಮುಂದಿನ ದಿನಗಳನ್ನು ಮರೆಯುತ್ತಿದ್ದೇವೆ. ಇಂತಹ ವಿಷಯಗಳಿಗೆ ಗಮನಹರಿಸದೆ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಕೆಲಸ ಮಾಡಬೇಕು ಎಂದರು. ಕೆಲವರು ಖಾಯಂ ಆಗುವವರೆಗೂ ಕೆಲಸ ಮಾಡುತ್ತಾರೆ ಖಾಯಂ ಆದ ಮೂರೇ ತಿಂಗಳಿನಲ್ಲಿ ಮಾನಸಿಕವಾಗಿ ನಿವೃತ್ತರಾಗಿರುತ್ತಾರೆ. ಆದರೆ ಡಾ.ಕೆ.ಸಿ ಶಿವಾರೆಡ್ದಿ, ಡಾ.ಸಿದ್ದಗಂಗಮ್ಮ, ಡಿ.ಪರಮೇಶ್ವರಪ್ಪ ಸದಾ ಕಾಲವು ಹಸನ್ಮುಖಿಯಾಗಿ ತುಂಬಾ ಶೃದ್ಧೆಯಿಂದ ಮತ್ತು ಆಸಕ್ತಿಯಿಂದ ತಮ್ಮ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. ಇವರ ನಿವೃತ್ತಿ ಜೀವನ ಸಂತೋಷ, ಆರೋಗ್ಯದಿಂದ ಕೂಡಿರಲಿ ಎಂದು ಹಾರೈಸುತ್ತಾ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ಸಂಗೀತ ವಿಭಾಗದ ವಿದ್ಯಾರ್ಥಿ ಭರತ್ ಗುಂಡಿ ಪ್ರಾರ್ಥಿಸಿದರು, ಕನ್ನಡ ವಿಶ್ವವಿದ್ಯಾಲಯದ ಉಪಕುಲಸಚಿವರಾದ ಡಾ. ಎ ವೆಂಕಟೇಶ ಗಣ್ಯರನ್ನು ಸ್ವಾಗತಿಸಿದರು, ಸಹಾಯಕ ಕುಲಸಚಿವರಾದ ಗುರಬಸಪ್ಪ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಡಾ.ಎ ಸುಬ್ಬಣ್ಣ ರೈ, ಅಭಿವೃದ್ದಿ ಅಧ್ಯಯನ ವಿಭಾಗದ ಅಧ್ಯಾಪಕರಾದ ಡಾ. ಎ ಶ್ರೀಧರ್, ಮಾಹಿತಿಕೇಂದ್ರದ ನಿರ್ದೇಶಕರಾದ ಡಾ. ಡಿ. ಮೀನಾಕ್ಷಿ, ವಿವಿಧ ನಿಕಾಯದ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ :-ಮಹಮ್ಮದ್ ಗೌಸ್

LEAVE A REPLY

Please enter your comment!
Please enter your name here